Sylvester Dacunha: ಫೋಟೋ ಮೇಲೆ ಯಾವಾಗಲು ಖುಷಿಯಾಗಿದ್ದ ಅಮುಲ್ ಹುಡುಗಿ, ಈಗ ಅಳುತ್ತಿರುವುದು ಯಾಕೆ ಗೊತ್ತೇ? ಅಮುಲ್ ಹೀಗೆ ಮಾಡಿದ್ದು ಯಾಕೆ ಗೊತ್ತೇ?

Sylvester Dacunha: ಭಾರತ ದೇಶದಲ್ಲಿ ಅತಿದೊಡ್ಡ ಸಂಸ್ಥೆಯಾಗಿ ಹೆಸರು ಮಾಡಿರುವುದರಲ್ಲಿ ಅಮುಲ್ ಸಂಸ್ಥೆ ಸಹ ಒಂದು. ಈ ಸಂಸ್ಥೆಯ ಎಲ್ಲಾ ಉತ್ಪನ್ನಗಳು ಸಹ ಜನರಿಗೆ ಅಚ್ಚುಮೆಚ್ಚಾಗಿದೆ. ಅಮುಲ್ ಎಂದು ಹೇಳಿದ ತಕ್ಷಣ ಜನರಿಗೆ ನೆನಪಾಗುವುದು ಅಮುಲ್ ಗರ್ಲ್. ಅಮುಲ್ ಸಂಸ್ಥೆಯ ಜಾಹೀರಾತಿನಲ್ಲಿ ಕಂಡುಬರುವ ಹುಡುಗಿಯನ್ನು ಎಲ್ಲರು ಅಮುಲ್ ಗರ್ಲ್ ಎಂದೇ ಕರೆಯುತ್ತಾರೆ.

ಈ ಅಮುಲ್ ಗರ್ಲ್ ಗೆ ನೀಲಿ ಬಣ್ಣದ ಕೂದಲು, ಕೆಂಪು ಚುಕ್ಕಿಗಳಿರುವ ಬಿಳಿ ಬಣ್ಣದ ಫ್ರಾಕ್, ಕೂದಲು ಜುಟ್ಟು ಕಟ್ಟಿ ಅದಕ್ಕೊಂದು ಬೋ, ಹೀಗೆ ಮುದ್ದಾಗಿ ಕಾಣಿಸುವ ಈ ಹುಡುಗಿ ಯಾವಾಗಲೂ ನಗುನಗುತ್ತಾ ಇರುತ್ತಾಳೆ. ಆದರೆ ಅಮುಲ್ ಗರ್ಲ್ ಈಗ ಅಳುತ್ತಾ ಕುಳಿತಿರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮುಲ್ ಗರ್ಲ್ ಅಳುತ್ತಿರೋದು ಯಾಕೆ ಎಂದು ನಿಮಗೂ ಅನ್ನಿಸಬಹುದು.

ಅದಕ್ಕೆ ಒಂದು ಮುಖ್ಯ ಕಾರಣವಿದೆ, ಅಮುಲ್ ಗರ್ಲ್ ಅನ್ನು ಸೃಷ್ಟಿಸಿದ ಸಿಲ್ವೆಸ್ಟರ್ ಡಕುನ್ಹಾ ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಈ ಕಾರಣಕ್ಕೆ ಅಮುಲ್ ಗರ್ಲ್ ಸಹ ಕಣ್ಣೀರು ಹಾಕುತ್ತಿರುವ ಫೋಟೋ ವೈರಲ್ ಆಗಿದೆ. ಸಿಲ್ವಿಸ್ಟರ್ ಡುಕುನ್ಹಾ ಅವರು ಅಮುಲ್ ಗರ್ಲ್ ಅನ್ನು ರಚಿಸಿದ್ದು 1966ರಲ್ಲಿ. ಅಮುಲ್ ನ ಬಟರ್ಲಿ ಬೆಟರ್ಲಿ ಎಂದು ಕ್ಯಾಪ್ಶನ್ ನೀಡಲಾಯಿತು. ಅಮುಲ್ ಸಂಸ್ಥೆ ಇಷ್ಟು ಹೆಸರು ಮಾಡುವಲ್ಲಿ ಸಿಲ್ವಿಸ್ಟರ್ ಡುಕುನ್ಹಾ ಅವರ ಪಾತ್ರ ಬಹಳ ದೊಡ್ಡದು.

ಅಮುಲ್ ಬ್ರಾಂಡ್ ಗೆ ಈ ಅಮುಲ್ ಗರ್ಲ್ ವಿಶೇಷವಾದ ಬ್ರ್ಯಾಂಡ್ ಅಂಬಾಸಿಡರ್ ಎಂದರೆ ತಪ್ಪಲ್ಲ..ಸಿಲ್ವಿಸ್ಟರ್ ಡುಕುನ್ಹಾ ಅವರು ಗೆರ್ಸನ್ ಡುಕುನ್ಹಾ ಅವರ ಸಹೋದರ. ಇದಕ್ಕಿಂತ ಮೊದಲು ಇವರು ಬಹಳಷ್ಟು ಜಾಹೀರಾತುಗಳನ್ನು ಮಾಡಿದ್ದರು ಆದರೆ ಅಮುಲ್ ಇಂದ ಇವರಿಗೆ ದೊಡ್ಡ ಹೆಸರು ಸಿಕ್ಕಿತು. ಇದೀಗ ಇವರು 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

Comments are closed.