Whats app: ವಿಡಿಯೋ ಮೆಸೇಜ್ ಕಳುಹಿಸಲು ವಿಶೇಷ ವೈಶಿಷ್ಯತೇ ಬಿಡುಗಡೆ ಮಾಡಿದ ವಾಟ್ಸಾಪ್!

Whats app: ವಿಶ್ವದಲ್ಲಿ ಕೋಟಿಗಟ್ಟಲೇ ಗ್ರಾಹಕರು ವಾಟ್ಸಾಪ್ ಬಳಸುತ್ತಾರೆ. ದಿನದಿಂದ ದಿನಕ್ಕೆ ವಾಟ್ಸಾವ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗೆಯೇ ವಾಟ್ಸಾಪ್ ಕೂಡ ತಮ್ಮ ಗ್ರಾಹಕರಿಗೆ ಇಷ್ಟ ಆಗುವಂಥ ಅನೇಕ ಹೊಸ ಫೀಚರ್ಸ್ ಗಳನ್ನು ಗ್ರಾಹಕರಿಗೆ ತರುತ್ತಿದೆ. ಇದೀಗ ವಾಟ್ಸಾಪ್ ನಲ್ಲಿ ಹೊಸ ಫೀಚರ್ ಒಂದು ಬಂದಿದ್ದು, ಇಷ್ಟು ದಿವಸಗಳು ಟೆಕ್ಸ್ಟ್ ಹಾಗೂ ವಾಯ್ಸ್ ನೋಟ್ ಮೂಲಕ ಮೆಸೇಜ್ ಕಳಿಸುವುದು ಮಾತ್ರವಲ್ಲ, ಇನ್ನು ಮುಂದೆ ವಿಡಿಯೋ ಮೆಸೇಜ್ ಕೂಡ ಕಳಿಸಬಹುದು. ಇದನ್ನೂ ಓದಿ: Team India captain: ಟೀಮ್ ಇಂಡಿಯಾ ನಾಯಕನಾಗಲು ಇವರು ನಾಲಾಯಕ್, ಇವರೇ ಸರಿ ಎಂದು ನಾಯಕನ ಹೆಸರು ಸೂಚಿಸಿಸ ರವಿ ಶಾಸ್ತ್ರಿ; ನೀವೂ ಒಪ್ಪುತ್ತೀರಾ ಈ ಹೆಸರು?

ವಿಡಿಯೋ ಮೆಸೇಜ್ ಅನ್ನು ಕಳಿಸುವ ಆಯ್ಕೆ ಈಗಾಗಲೇ ಇದೆಯಲ್ಲಾ ಎಂದು ನಿಮಗೆ ಅನ್ನಿಸಬಹುದು, ಆದರೆ ಇದು ಮೊದಲಿನ ಹಾಗೆ ಕಳಿಸುವ ವಿಡಿಯೋ ಅಲ್ಲ, ವಾಯ್ಸ್ ನೋಟ್ ಹಾಗು ಫೋಟೋಗಳ ಹಾಗೆ ಶಾರ್ಟ್ ವಿಡಿಯೋಗಳನ್ನು ಶೇರ್ ಮಾಡಬಹುದು. ಈ ಆಪ್ಶನ್ ನಿಮಗೆ ಸಿಗುವುದು ಮೈಕ್ರೊಫೋನ್ ಆಪ್ಶನ್ ಹತ್ತಿರ, ಮೈಕ್ರೊಫೋನ್ ಅನ್ನು ಒತ್ತಿ ಹಿಡಿದಾಗ ವಾಯ್ಸ್ ನೋಟ್ ಕಳಿಸುವ ಆಯ್ಕೆಯ ಜೊತೆಗೆ ಮತ್ತೊಂದು ವಿಡಿಯೋ ಸಂದೇಶ ಕಳಿಸುವ ಆಯ್ಕೆ ಸಿಗುತ್ತದೆ.

ಇದರಲ್ಲಿ ನೀವು 60 ಸೆಕೆಂಡ್ಸ್ ಗಳಷ್ಟು ಸಮಯ ಮಾತ್ರ ನೀವು ವಿಡಿಯೋ ರೆಕಾರ್ಡ್ ಮಾಡಿ ಕಳಿಸಬಹುದು. ಇದು ಶಾರ್ಟ್ಸ್ ರೀತಿ ವರ್ಕ್ ಆಗುತ್ತದೆ. ಈ ಒಂದು ಹೊಸ ಫೀಚರ್ಸ್ ವಾಟ್ಸಾಪ್ ಬಳಕೆದಾರರಿಗೆ ಹೊಸ ಅನುಭವ ತಂದುಕೊಡುತ್ತದೆ. ಈ ವಿಡಿಯೋ ಸಂದೇಶವನ್ನು ನೀವು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡಲು ಆಗುವುದಿಲ್ಲ, ಇದನ್ನು ಗ್ಯಾಲರಿಯಲ್ಲಿ ಮಾತ್ರ ಸೇವ್ ಮಾಡಿಕೊಳ್ಳಬಹುದು, ಹಾಗೆಯೇ ಸೆಂಡ್ ಓನ್ಲಿ ಒನ್ಸ್ ಆಪ್ಶನ್ ಆಯ್ಕೆ ಮಾಡಿದರೆ, ಒಂದು ಸಾರಿ ಮಾತ್ರವೇ ನೋಡಬಹುದು. ಇದನ್ನೂ ಓದಿ: Film News:ಅಧ್ಬುತವಾಗಿ ವಿಲನ್ ಪಾತ್ರ ನಿಭಾಯಿಸುತ್ತಿದ್ದ ನಟ ಶೋಭರಾಜ್ ಆಕ್ಟಿಂಗ್ ಚಂದನವನಕ್ಕೆ ಬೇಡವಾಯ್ತಾ? ಏನನ್ನುತ್ತೆ ನೋಡಿ ಗಾಂಧಿ ನಗರ!

ಪ್ರಸ್ತುತ ಈ ಹೊಸ ಫೀಚರ್ ಬೀಟಾ ಯೂಸರ್ ಗಳಿಗೆ ಲಭ್ಯವಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್ ಎರಡು ಮೊಬೈಲ್ ಗಳ ಬೀಟಾ ಲಭ್ಯವಿದ್ದು, ಹೊಸ ಫೀಚರ್ ಬಳಸುತ್ತಿರುವವರಿಗೆ ಇಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ನಾರ್ಮಲ್ ವಾಟ್ಸಾಪ್ ಯೂಸರ್ ಗಳಿಗೂ ವಿಡಿಯೋ ಶಾರ್ಟ್ಸ್ ಕಳಿಸುವ ಆಯ್ಕೆ ಸಿಗುತ್ತದೆ. ಇನ್ನುಮೇಲೆ ವಾಟ್ಸಾಪ್ ಬಳಕೆದಾರರು ವಿಡಿಯೋ ಮೂಲಕ ಇನ್ನಷ್ಟು ಆಕರ್ಷಕವಾಗಿ ಕಳಿಸಬಹುದು.

ಇದೊಂದೇ ಅಲ್ಲದೆ ಇತ್ತೀಚೆಗೆ ಹೊಸದೊಂದು ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸಿದೆ, ಅದು ಚಾಟ್ ಲಾಕ್ ಆಪ್ಶನ್ ಆಗಿದೆ. ನಿಮ್ಮ ಪ್ರೈವೇಟ್ ಚಾಟ್ ಗಳನ್ನು ಲಾಕ್ ಮಾಡಿ ಇಟ್ಟರೆ, ಬೇರೆಯವರು ನಿಮ್ಮ ಫೋನ್ ನೋಡುವಾಗಲು ಕೂಡ ಲಾಕ್ ಆಗಿರುವ ಚಾಟ್ ಕಾಣಿಸುವುದಿಲ್ಲ, ಈ ಚಾಟ್ ನಲ್ಲಿ ಮೆಸೇಜ್ ಬಂದರು ಸಹ, ಅದು ನೋಟಿಫಿಕೇಶನ್ ನಲ್ಲಿ ಬರುವುದಿಲ್ಲ. ನಿಮ್ಮ ಪ್ರೈವೆಸಿಗಾಗಿ ಈ ಆಪ್ಶನ್ ಸಹ ಬಳಸಿಕೊಳ್ಳುಬಹುದು.

Comments are closed.