Team India captain: ಟೀಮ್ ಇಂಡಿಯಾ ನಾಯಕನಾಗಲು ಇವರು ನಾಲಾಯಕ್, ಇವರೇ ಸರಿ ಎಂದು ನಾಯಕನ ಹೆಸರು ಸೂಚಿಸಿಸ ರವಿ ಶಾಸ್ತ್ರಿ; ನೀವೂ ಒಪ್ಪುತ್ತೀರಾ ಈ ಹೆಸರು?

Team India captain: ಟೀಮ್ ಇಂಡಿಯಾ ಕ್ರಿಕೆಟ್ ತಂಡ ಈಗ ಸಂಕಷ್ಟದಲ್ಲಿದೆ. ನಮ್ಮ. ಭಾರತ ತಂಡವು ಐಸಿಸಿ ಟ್ರೋಫಿ ಗೆದ್ದು ಬರೋಬ್ಬರಿ 10 ವರ್ಷಗಳೇ ಕಳೆದುಹೋಗಿವೆ. ಈ ವರ್ಷವಾದರು ಭಾರತದಲ್ಲಿಯೇ ನಡೆಯುವ ಏಕದಿನ ವಿಶ್ವಕಪ್ ನಲ್ಲಿ ಭಾರತ ತಂಡ ಗೆಲ್ಲುವ ಮೂಲಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಬೇಕು ಎನ್ನುವುದು ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಹಾಗೂ ಬಿಸಿಸಿಐ ನ ಆಸೆ ಕೂಡ ಆಗಿದೆ. ಆದರೆ ಐಸಿಸಿ ಸಾರಥ್ಯದ 2023ರ ಏಕದಿನ ವಿಶ್ವಕಪ್ ಶುರುವಾಗುವುದಕ್ಕಿಂತ ಮೊದಲೇ ಮತ್ತೊಂದು ವಿಚಾರ ಚರ್ಚೆಯಾಗುತ್ತಿದೆ.

ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅವರು ಟೀಮ್ ಇಂಡಿಯಾ ನಾಯಕತ್ವದಿಂದ ಹೊರಬಂದ ಬಳಿಕ ವಿರಾಟ್ ಕೊಹ್ಲಿ ಅವರು ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡರು. ಇವರ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡ ಹಲವು ಟೂರ್ನಿಗಳನ್ನು ಗೆದ್ದರು ಸಹ, ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿಲ್ಲ. ಹಲವು ವರ್ಷಗಳ ಕಾಲ ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ ಅವರು 2021ರಲ್ಲಿ ಮೊದಲ ವರ್ಷದ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಭಾರತ ಸೋತ ನಂತರ ಕ್ಯಾಪ್ಟನ್ಸಿ ಇಂದ ಹೊರಬಂದರು.

ವಿರಾಟ್ ಕೊಹ್ಲಿ ಅವರು ತಂಡದ ಕ್ಯಾಪ್ಟನ್ಸಿ ಸ್ಥಾನಕ್ಕೆ ಗುಡ್ ಬೈ ಹೇಳಿದ ನಂತರ ಕ್ಯಾಪ್ಟನ್ ಆಗಲು ಸೂಕ್ತರಾಗಿದ್ದವರು ರೋಹಿತ್ ಶರ್ಮಾ. ಇವರಿಗೆ ತಂಡದ ನಾಯಕತ್ವ ನೀಡಲಾಯಿತು, ರೋಹಿತ್ ಶರ್ಮಾ ಅವರು ತಂಡದ ಕ್ಯಾಪ್ಟನ್ ಆಗಿ ಐಸಿಸಿ ಟ್ರೋಫಿ ಗೆದ್ದುಕೊಡುತ್ತಾರೆ ಎನ್ನುವ ನಂಬಿಕೆ ಇಡಲಾಗಿತ್ತು. ಆದರೆ ರೋಹಿತ್ ಅವರ ಕ್ಯಾಪ್ಟನ್ಸಿಯಲ್ಲಿ ಕೂಡ ಯಾವುದೇ ಟ್ರೋಫಿ ಗೆದ್ದಿಲ್ಲ. ಈಗಷ್ಟೇ ನಡೆದ WTC ಫೈನಲ್ಸ್ ನಲ್ಲಿ ಭಾರತ ಸೋತಿದೆ. ಈ ಸೋಲಿನ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ಸಿ ಬಗ್ಗೆ ಬಿಸಿಸಿಐ ಮಹತ್ವದ ಬದಲಾವಣೆ ಮಾಡುತ್ತದೆ ಎನ್ನಲಾಗಿದೆ.

ರೋಹಿತ್ ಶರ್ಮಾ ಅವರಿಗೆ ಈಗ 36 ವರ್ಷ, ಇನ್ನು ಹೆಚ್ಚು ಸಮಯ ಅವರು ತಂಡದ ಕ್ಯಾಪ್ಟನ್ ಆಗಿರಲು ಸಾಧ್ಯವಿಲ್ಲ. ಹಾಗಾಗಿ ಏಕದಿನ ವಿಶ್ವಕಪ್ ಮುಗಿದ ಬಳಿಕ ತಂಡದ ಕ್ಯಾಪ್ಟನ್ ಬದಲಾಗಬೇಕು ಎನ್ನುವ ವಿಷಯ ಚರ್ಚೆಯಾಗುತ್ತಿದ್ದು, ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅವರು ಟೀಮ್ ಇಂಡಿಯಾ ಕ್ಯಾಪ್ಟನ್ ಸ್ಥಾನಕ್ಕೆ ಒಂದು ಹೆಸರನ್ನು ಸೂಚಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ತಂಡದ ಕ್ಯಾಪ್ಟನ್ಸಿ ವಹಿಸಿಕೊಳ್ಳಬೇಕು ಎಂದಿದ್ದಾರೆ ರವಿ ಶಾಸ್ರ್ತಿ.

who will become Team India captain ravi shastri 1 | Live Kannada News
Team India captain: ಟೀಮ್ ಇಂಡಿಯಾ ನಾಯಕನಾಗಲು ಇವರು ನಾಲಾಯಕ್, ಇವರೇ ಸರಿ ಎಂದು ನಾಯಕನ ಹೆಸರು ಸೂಚಿಸಿಸ ರವಿ ಶಾಸ್ತ್ರಿ; ನೀವೂ ಒಪ್ಪುತ್ತೀರಾ ಈ ಹೆಸರು? https://sihikahinews.com/2023/06/26/who-will-become-team-india-captain-ravi-shastri/

“ಮುಂದಿನ ವಿಶ್ವಕಪ್ ಮುಗಿದ ನಂತರ ಟೀಮ್ ಇಂಡಿಯಾದ ಏಕದಿನ ತಂಡದ ಕ್ಯಾಪ್ಟನ್ಸಿಯನ್ನು ಹಾರ್ದಿಕ್ ಪಾಂಡ್ಯ ಅವರು ವಹಿಸಿಕೊಳ್ಳಬೇಕು. ವರ್ಲ್ಡ್ ಕಪ್ ಮುಗಿದ ನಂತರ ವೈಟ್ ಬಾಲ್ ಕ್ರಿಕೆಟ್ ಗೆ ಪಾಂಡ್ಯ ಸೂಕ್ತವಾದ ಕ್ಯಾಪ್ಟನ್ ಎಂದು ಅನ್ನಿಸುತ್ತಾರೆ..ಆದರೆ ಈಗ ತಂಡ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಅವರೇ ಇರಬೇಕು, ಇದರಲ್ಲಿ ಬೇರೆ ಪ್ರಶ್ನೆ ಇಲ್ಲ..” ಎಂದಿದ್ದಾರೆ ರವಿ ಶಾಸ್ತ್ರಿ.. ಈಗ ಹಾರ್ದಿಕ್ ಪಾಂಡ್ಯ ಅವರು ಟೀಮ್ ಇಂಡಿಯಾದ ಹಂಗಾಮಿ ಕ್ಯಾಪ್ಟನ್ ಆಗಿದ್ದು, ಅವರೇ ತಂಡದ ಪರ್ಮನೆಂಟ್ ಕ್ಯಾಪ್ಟನ್ ಆಗಬಹುದು ಎನ್ನಲಾಗಿದ್ದು, ಜೊತೆಗೆ ಏಕದಿನ ತಂಡದ ಕ್ಯಾಪ್ಟನ್ಸಿಯನ್ನು ವಹಿಸಿಕೊಳ್ಳಬೇಕು ಎನ್ನಲಾಗುತ್ತಿದೆ.

Comments are closed.