BMTC: ತೈವಾನ್ ಕಂಪನಿ ಬಂದೆ ಬಿಟ್ಟವು- ಈಗ ಬಿಎಂಟಿಸಿ ಬಸ್ ಗಳನ್ನೂ ಏನು ಮಾಡಲು ಹೊರಟಿವೆ ಗೊತ್ತೇ? ತಿಳಿದರೆ ಭೇಷ್ ಎನ್ನುತ್ತೀರಾ.

BMTC: ನಮ್ಮ ರಾಜ್ಯದ ಸಾರಿಗೆ ಸಂಸ್ಥೆಯಲ್ಲಿ ಈಗ ಬದಲಾವಣೆಗಳು ಬರಲಿದೆ. ನಮ್ಮ ರಾಜ್ಯದ ಬಸ್ ಗಳನ್ನು ಬದಲಾವಣೆ ಮಾಡಲು ತೈವಾನ್ ನ ಕಂಪನಿಗಳು (Taiwan Company) ಬರಲಿದೆ. ನಮ್ಮ ಬಿಎಂಟಿಸಿ (BMTC) ಬಸ್ ಗಳಿಗೆ ಹೊಸ ರೂಪವನ್ನು ಕೊಡಲಿದೆ. ಈ ಬಗ್ಗೆ ಮಿನಿಸ್ಟರ್ ಎಂಬಿ ಪಾಟೀಲ್ (MB Patil) ಅವರು ಮಾತನಾಡಿದ್ದು, ಏನೆಲ್ಲಾ ಬದಲಾವಣೆ ಆಗುತ್ತದೆ? ತೈವಾನ್ ಕಂಪನಿ ಜೊತೆಗೆ ಏನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ..

Taiwan company will convert diesel bmtc bus to electric bus
Taiwan company will convert diesel bmtc bus to electric bus

ಮಿನಿಸ್ಟರ್ ಎಂಬಿ ಪಾಟೀಲ್ ಅವರು ಈ ಬಗ್ಗೆ ಮಾತನಾಡಿ, ತೈವಾನ್ ಸಂಸ್ಥೆಗಳು ರಾಜ್ಯ ಸರ್ಕಾರದ ಜೊತೆಗೆ ಸೇರಿ ಕೆಲಸ ಮಾಡುವುದಕ್ಕೆ ಆಸಕ್ತಿ ತೋರಿಸಿದೆ. ನಮ್ಮ ರಾಜ್ಯದಲ್ಲಿ ಡೀಸೆಲ್ ಇಂದ ಚಲಿಸುವ BMTC ಬಸ್ ಗಳನ್ನು, ಎಲೆಕ್ಟ್ರಿಕ್ ಬಸ್ ಗಳಾಗಿ ಪರಿವರ್ತನೆ ಮಾಡಲು ತೈವಾನ್ ಕಂಪನಿ ಆಸಕ್ತಿ ತೋರಿಸಿದೆ ಎಂದು ಎಂಬಿ ಪಾಟೀಲ್ ಅವರು ತಿಳಿಸಿದ್ದಾರೆ. ಇದನ್ನು ಓದಿ..Karnataka Govt.: ರಾಜ್ಯ ಬಿಟ್ಟಿ ಕೊಡುವ ವರೆಗೂ ಕಾಯಿರಿ- ಆದರೆ ಅದಕ್ಕೂ ಮುನ್ನ ಕೇಂದ್ರದ ಈ ಟ್ರಿಕ್ ಬಳಸಿ ವಿದ್ಯುತ್ ಬಿಲ್ ಕಡಿಮೆ ಮಾಡಿ. ಹೇಗೆ ಗೊತ್ತೇ?

ತೈವಾನ್ ಸಂಸ್ಥೆಯ ಜೊತೆಗೆ ಬಹಳಷ್ಟು ನಿಯೋಗಗಳನ್ನು ನಡೆಸಿದ ನಂತರ ಈ ಇಂಡಸ್ಟ್ರಿಯಲ್ ಕೋಲ್ಯಾಬೊರೇಶನ್ ಮಾಡುವುದಕ್ಕೆ ಅವರೊಡನೆ ಭೇಟಿ ನಡೆಸಲಾಯಿತು ಎಂದಿದ್ದಾರೆ. ಡೀಸೆಲ್ ಪವರ್ಡ್ ಇಂಜಿನ್ ಗಳನ್ನು ಎಲೆಕ್ಟ್ರಿಕ್ ಇಂಜಿನ್ ಗಳಾಗಿ ಕನ್ವರ್ಟ್ ಮಾಡುವುದರಿಂದ ಬಸ್ ಗಳ ಸಾಮರ್ಥ್ಯ ಇನ್ನು ಹೆಚ್ಚಾಗುತ್ತದೆ. ಇದರ ಬಗ್ಗೆ ಇನ್ನೂ ಹೆಚ್ಚು ಚರ್ಚೆ ನಡೆಯುತ್ತದೆ ಎಂದು ಎಂಬಿ ಪಾಟೀಲ್ ಅವರು ತಿಳಿಸಿದ್ದಾರೆ. ಈಗಿನ ಕಾಲದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ತೈವಾನ್ ನ ಕಂಪೆನಿಗಳಲ್ಲಿ ಡೀಸೆಲ್ ಬಸ್ ಗಳನ್ನು ಎಲೆಕ್ಟ್ರಿಕ್ ಇಂಜಿನ್ ಆಗಿ ಪರಿವರ್ತಿಸುವ ಎಕ್ಸ್ಪರ್ಟ್ ಗಳಿದ್ದಾರೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ, ಎಲೆಕ್ಟ್ರಾನಿಕ್ ವಸ್ತುಗಳಾದ ಮಷಿನ್ ಟೂಲ್ಸ್, ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನಿಂಗ್ ಹಾಗೂ ತಯಾರಿಕೆ (ESDM), ಕ್ಲೀನ್ ಎನರ್ಜಿ ಪ್ರೊಡಕ್ಷನ್, ಏರೋ ಸ್ಪೇಸ್ ಇದೆಲ್ಲದರಲ್ಲೂ ಸಹಭಾಗಿತ್ವ ಹೊಂದಲು ತೈವಾನ್ ಕಂಪನಿಗಳು ಆಸಕ್ತಿ ತೋರಿಸಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ..Political News: ಗೃಹ ಲಕ್ಷ್ಮಿ ನಂಬಿಕೊಂಡಿದ್ದವರಿಗೆ ಮತ್ತೊಂದು ಶಾಕ್ ಕೊಟ್ಟ ಸಿದ್ದು ಎಂಡ್ ಟೀಮ್- 2000 ಸಾವಿರದ ಕತೆ ಏನಾಗಿದೆ ಗೊತ್ತೇ?

ಎಂಬಿ ಪಾಟೀಲ್ ಅವರು ಹೇಳಿರುವ ಹಾಗೆ, ಮೀಟಿಂಗ್ ನಲ್ಲಿ ಸುಮಾರು 50 ಜನ ತೈವಾನ್ ಇನ್ವೆಸ್ಟರ್ ಗಳು ಬಂದಿದ್ದರು. ನಮ್ಮ ರಾಜ್ಯದಲ್ಲಿ ಇಂಡಸ್ಟ್ರಿ ಹೇಗಿದೆ ಎನ್ನುವುದರ ಬಗ್ಗೆಯೂ ಮೀಟಿಂಗ್ ನಲ್ಲಿ ಪ್ರೆಸೆಂಟ್ ಮಾಡಲಾಗಿದೆ. ಒಟ್ಟಿನಲ್ಲಿ ತೈವಾನ್ ಕಂಪನಿಗಳು ನಮ್ಮ ರಾಜ್ಯದಲ್ಲಿ ದೊಡ್ಡ ಬದಲಾವಣೆ ತರುವುದು ಪಕ್ಕಾ ಆಗಿದೆ. ಇದನ್ನು ಓದಿ..BMW: BMW ಕಡೆ ಇಂದ ಹೊಸ ಬೈಕ್ ಲಾಂಚ್- 1000 RR ಬೈಕ್ ನಲ್ಲಿ ಏನೆಲ್ಲಾ ವಿಶೇಷತೆ, ದರದ ಸಂಪೂರ್ಣ ಮಾಹಿತಿ.

Comments are closed.