Political News: ಗೃಹ ಲಕ್ಷ್ಮಿ ನಂಬಿಕೊಂಡಿದ್ದವರಿಗೆ ಮತ್ತೊಂದು ಶಾಕ್ ಕೊಟ್ಟ ಸಿದ್ದು ಎಂಡ್ ಟೀಮ್- 2000 ಸಾವಿರದ ಕತೆ ಏನಾಗಿದೆ ಗೊತ್ತೇ?

Political News: ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ ಆಗಿದೆ. ಇದು ಪ್ರತಿ ಮನೆಯ ಒಡತಿಗೆ ತಿಂಗಳಿಗೆ 2000 ರೂಪಾಯಿ ನೀಡುವ ಭರವಸೆ ನೀಡಿರುವ ಯೋಜನೆ ಆಗಿದೆ. ಈ ಯೋಜನೆಯನ್ನು ಆದಷ್ಟು ಬೇಗ ಜಾರಿಗೆ ತರಲಾಗುತ್ತದೆ, ಎನ್ನಲಾಗಿತ್ತು. ಆದರೆ ಈಗ ಗೃಹಲಕ್ಷ್ಮಿ ಜ್ಯೋತಿ ಯೋಜನೆ ಜಾರಿಗೆ ಬರುವುದು ಇನ್ನು ತಡವಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ..

ಜೂನ್ ತಿಂಗಳಿನಲ್ಲಿ ಅರ್ಜಿ ಪ್ರಕ್ರಿಯೆ ಆರಂಭವಾಗಿ ಜುಲೈ ಇಂದ ಗೃಹಲಕ್ಷ್ಮಿಯರಿಗೆ ಹಣ ಸಿಗುತ್ತದೆ ಎನ್ನಲಾಗಿತ್ತು. ಆದರೆ ಈಗ ಇನ್ನು ತಡವಾಗಬಹುದು ಎನ್ನಲಾಗಿದೆ. ಯಾರು ಕೂಡ ಈ ಯೋಜನೆಯ ದುರ್ಬಳಕೆ ಮಾಡಬಾರದು, ಯಾರಿಗೂ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸರ್ಕಾರವು ಗೃಹಲಕ್ಷ್ಮಿ ಯೋಜನೆಗಾಗಿ ಒಂದು ಹೊಸ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸುತ್ತದೆ ಎನ್ನಲಾಗಿತ್ತು. ಈಗ ಆ ಅಪ್ಲಿಕೇಶನ್ ಸಹ ಸಿದ್ಧವಾಗಿದೆ, ಆದರೆ ಹಲವು ಕಾರಣಗಳಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗುವುದಕ್ಕೆ ಇನ್ನು ತಡವಾಗಲಿದೆ.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಜುಲೈ 14ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಜುಲೈ 3ರಂದು ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲಿ ಈಗ ಅನುದಾನದ ಕೊರತೆಯಾಗಬಹುದು ಎಂದು ಹೇಳಲಾಗುತ್ತಿದೆ. ಈ ಯೋಜನೆಗೆ ಬೇರೆ ಯೋಜನೆಗಿಂತ ಹೆಚ್ಚು ಅನುದಾನದ ಅವಶ್ಯಕತೆ ಇದೆ, 2 ಕೋಟಿಗಿಂತ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಬಹುದು ಎಂದು ನಿರೀಕ್ಷೆ ಮಾಡಲಾಗಿದ್ದು, ಇದಕ್ಕಾಗಿ ಸರ್ಕಾರಕ್ಕೆ 30 ರಿಂದ 35,000 ಕೋಟಿ ರೂಪಾಯಿಗಳು ಬೇಕಾಗುತ್ತದೆ. ಬಜೆಟ್ ಇಷ್ಟು ದೊಡ್ಡದಾಗಿರುವುದರಿಂದ ಬಜೆಟ್ ವರೆಗು ಕಾಯಲಿದೆ ಸರ್ಕಾರ.

ಈ ಸಾರಿ ಬಜೆಟ್ ಮುಗಿದ ನಂತರ ಬೇರೆ ಎಲ್ಲಾ ಇಲಾಖೆಗಳ ಅನುದಾನ ಹೆಂಚಿಕೆ ಹೇಗಾಗುತ್ತದೆ ಎಂದು ನೋಡಿಕೊಂಡು, ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಇದರಿಂದ ಕಾಂಗ್ರೆಸ್ ಸರ್ಕಾರ ತಮ್ಮ ಸಂಘಟನೆಯನ್ನು ಬಲಪಡಿಸಿಕೊಳ್ಳಲಿದೆ. ಪಕ್ಷ ಸಂಘಟನೆಯ ಯೋಜನೆ ಮಾಡಬೇಕಿರುವುದರಿಂದ ಸರ್ಕಾರ ಈ ಪ್ಲಾನ್ ಮಾಡಿದೆ. ಇದರಿಂದಾಗಿ ಅಪ್ಲಿಕೇಶನ್ ರೆಡಿ ಇದ್ದರು, ಅರ್ಜಿ ಸಲ್ಲಿಕೆಗೆ ಪರ್ಮಿಶನ್ ಕೊಟ್ಟಿಲ್ಲ..

ಇನ್ನು ಈ ಆಪ್ ಬಗ್ಗೆ ಗೊತ್ತಾದ ನಂತರ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕೆಲವು ಫೇಕ್ ಭಾಗ್ಯಲಕ್ಷ್ಮಿ ಆಪ್ ಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಈ ಆಪ್ ಗಳ ಬಗ್ಗೆ ಹುಷಾರಾಗಿ ಇರಬೇಕು. ಜೂನ್ ನಲ್ಲಿ ಶುರುವಾಗಬೇಕಿದ್ದ ಯೋಜನೆ ಈಗ ಜುಲೈ ನಲ್ಲಿ ಅರ್ಜಿ ಸಲ್ಲಿಕೆ ಶುರುವಾಗಲಿದ್ದು, ಆಗಸ್ಟ್ ತಿಂಗಳಿನಲ್ಲಿ ಯೋಜನೆಯ ಸೌಲಭ್ಯಗಳು ಸಿಗುವುದಕ್ಕೆ ಶುರುವಾಗಬಹುದು.

Comments are closed.