Toyota New Car: ರೋಲ್ಸ್ ರಾಯ್ ಗೆ ಪೈಪೋಟಿಯಂತೆ ಕಾಣುತ್ತಿರುವ ಟೊಯೋಟಾ ಹೊಸ ಕಾರು ಹೇಗಿರಲಿದೆ ಗೊತ್ತೇ? ಏನೆಲ್ಲಾ ವಿಶೇಷತೆ ಗೊತ್ತೇ?

Toyota New Car: ಟೊಯೊಟಾ ಕಾರ್ ಗಳು ನಮ್ಮ ದೇಶದಲ್ಲೂ ಖ್ಯಾತಿ ಹೊಂದಿದೆ, ಜಪಾನ್ ಮೂಲದ ಈ ಸಂಸ್ಥೆ ಇತ್ತೀಚೆಗೆ MPV ಟೊಯೊಟಾ ವೆಲ್ ಫೈರ್ ನ ಮುಂದಿನ ಜೆನೆರೇಷನ್ ಮಾಡೆಲ್ ಅನ್ನು ಗ್ಲೋಬಲ್ ಮಾರ್ಕೆಟ್ ನಲ್ಲಿ ಲಾಂಚ್ ಮಾಡಿದೆ. ಇದು ಟೊಯೊಟಾ SUV ಸೆಂಚುರಿ ಕಾರ್ ಆಗಿದೆ. 60ರ ದಶಕದಲ್ಲಿ ಕಂಪನಿಯಲ್ಲಿ ಮೊದಲ ಸಾರಿ ಟೊಯೊಟಾ ಸೆಂಚುರಿ ಸೆಡಾನ್ ಕಾರ್ ಅನ್ನು ಪರಿಚಯಿಸಿತು. ಈ ವೇಳೆ ಸೆಡಾನ್ ಕಾರ್ ಮಾರ್ಕೆಟ್ ನಲ್ಲಿ ಈ ಹೊಸ ಕಾರ್ ಸೆನ್ಸೇಷನ್ ಆಗಿದೆ, ಈಗಲೂ ಉತ್ತಮವಾಗಿ ಮಾರಾಟವಾಗುತ್ತಿದೆ. ಇದೀಗ ಜ್ ಸಂಸ್ಥೆ SUV ಕಾರ್ ಅನು ಪರಿಚಯಿಸಲಿದೆ. 2023ರ ಅಂತ್ಯದ ಸಮಯಕ್ಕೆ ಸೆಂಚುರಿ SUV ಲಾಂಚ್ ಆಗಬಹುದು ಎನ್ನಲಾಗಿದೆ.

ಇದು ಹೊಸ SUV ಸೆಂಚುರಿ ಸೆಡಾನ್ ನಂತದ ಸೆಂಚುರಿ ಬೈಜ್ ಮತ್ತೊಂದು ಉತ್ಪನ್ನ ಆಗಿರಲಿದೆ. ಈ ಸೆಡಾನ್ ಅನ್ನು ಜಪಾನ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಜಪಾನ್ ಹೊರತುಪಡಿಸಿ ಬೇರೆ ರಾಷ್ಟ್ರಗಳಲ್ಲಿಯು ಪರಿಚಯಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದು ಪ್ರೀಮಿಯಂ SUV ಆಗಿದ್ದು, ಬ್ರ್ಯಾಂಡ್ ನೆಟ್ವರ್ಕ್ ವಿಸ್ತರಣೆ ಮಾಡಲು ಪ್ರಮುಖ ಪಾತ್ರ ವಹಿಸಿದೆ. ಸೆಂಚುರಿ ಬ್ರಾಂಡ್ ಗೆ ಈಗಾಗಲೇ ಜಪಾನ್ ನಲ್ಲಿ ಭಾರಿ ಬೇಡಿಕೆ ಇದೆ. ಈಗ ಈ ಬ್ರಾಂಡ್ ಅನ್ನು ಬೇರೆ ಕಡೆಗಕಲ್ಲಿ ಮಾರಾಟ ಮಾಡಬೇಕು ಎಂದು ಪ್ಲಾನ್ ಮಾಡಲಾಗಿದೆ.

ಇದೊಂದು ಮೊನೊಕಾಕ್ SUV ಆಗಿರಲಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಇದರಲ್ಲಿ SUV ಐಷಾರಾಮಿ ವಿಶೇಷತೆಗಳು ಹಾಗೂ ತಂತ್ರಜ್ಞಾನ ಇದೆ ಎನ್ನಲಾಗಿದೆ. ಹಾಗಾಗಿ ಆಫ್ ರೋಡ್ ವೆಹಿಕಲ್ (Off road vehicle) ಗಿಂತ, ಸಿಟಿಗಳಲ್ಲಿ ಇರುವವರಿಗೆ ಸೂಟ್ ಆಗುವ ಕಾರ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಕಾರ್ ನ ಫೋಟೋಸ್ ನೋಡಿದರೆ, ಕಾರ್ ನ ಮುಂಭಾಗದಲ್ಲಿರುವ ಗ್ರಿಲ್ ರೋಲ್ಸ್ ರಾಯ್ಸ್ ರೀತಿಯಲ್ಲಿ ಕಾಣಿಸುತ್ತದೆ. ಹಾಗೆಯೇ ದೊಡ್ಡ ವೀಲ್ ಗಳಿದ್ದು, ಕಾರ್ ಓಡಿಸಲು ಒಳ್ಳೆಯ ಫೀಲ್ ಕೊಡುತ್ತದೆ.

ಟೊಯೊಟಾ ಗ್ರ್ಯಾಂಡ್ ಹೈಲ್ಯಾಂಡರ್ SUV ಯಲ್ಲಿ ಬಳಸಿದ ಮೊನೊಕೊಕ್ ಆರ್ಕಿಟೆಕ್ಚರ್ ಅನ್ನು ಹೊಸ SUV ಯನ್ನು ಬಳಸಬಹುದು ಎನ್ನಲಾಗಿದೆ. ಇನ್ನು ಈ ಹೊಸ ಕಾರ್ ಬಗ್ಗೆ ಟೆಕ್ನಿಕಲ್ ಆದ ಮಾಹಿತಿಯನ್ನು ಕಂಪನಿ ಎಲ್ಲಿಯು ಬಿಟ್ಟುಕೊಟ್ಟಿಲ್ಲ. ಈ SUV ಕಾರ್ 5.2 ಮೀಟರ್ ಉದ್ದ ಇರಬಹುದು ಎನ್ನಲಾಗಿದೆ, ಹಾಗೂ ಇದರ ಅಗಲ 2 ಮೀಟರ್ ಇರಬಹುದು ಎನ್ನಲಾಗಿದೆ.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಏನು ಎಂದರೆ ಹೊಸದಾದ SUV ಲ್ಯಾಂಡ್ ಕ್ರೂಸರ್‌ ಗಿಂತ ಇದು ದುಬಾರಿ ಆಗಿರಬಹುದು ಎನ್ನಲಾಗಿದೆ. ಇದು ಟೊಯೊಟಾ ಸಂಸ್ಥೆಯ ಟಾಪ್ SUV ಆಗಿರಬಹದು. ಈ ಕಂಪನಿ ಮೊದಲಿಗೆ V12 ಪೆಟ್ರೋಲ್ ಇಂಜಿನ್ ಅನ್ನು ಬಳಸುತ್ತಿತ್ತು, ಈಗ ಅದನ್ನೇ ಬಳಸುತ್ತಾ ಎನ್ನುವ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ. ಈಗ ಈ SUV ಕಾರ್ ಆರಂಭಿಕ ತಯಾರಿ ಹಂತದಲ್ಲಿದ್ದು, ತಯಾರಾಗುವ ಹಾಗೆ ಕೆಲವು ಚೇಂಜಸ್ ಮಾಡಬಹುದು ಎನ್ನಲಾಗಿದೆ. ಇದರಲ್ಲಿ ಪವರ್ ಫುಲ್ ಇಂಜಿನ್ ಇರುತ್ತದೆ ಎನ್ನಲಾಗಿದೆ.

Comments are closed.