EV Bike: ಜುಜುಬಿ ಮೂವತ್ತು ಸಾವಿರಕ್ಕೆ ಮನೆಗೆ ತನ್ನಿ ಅತ್ಯಾಧುನಿಕ ಎಲೆಕ್ಟ್ರಿಕ್ ಬೈಕ್- ಏನೆಲ್ಲಾ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

EV Bike: ಈಗ ಭಾರತದ ಮಾರುಕಟ್ಟೆಯಲ್ಲಿ ಪೆಟ್ರೋಲ್ ಡೀಸೆಲ್ ವಾಹನಗಳ ಹಾಗೆ ಎಲೆಕ್ಟ್ರಿಕ್ ಸ್ಕೂಟರ್ (Ev scooter) ಗಳಿಗೆ ಬೇಡಿಕೆ ಹೆಚ್ಚಾಗಿದೆ. ಎಲ್ಲರೂ ಈಗ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈಗ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಹಲವು ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ತರುವುದಕ್ಕೆ ಶುರು ಮಾಡಿದೆ.. ಎಲೆಕ್ಟ್ರಿಕ್ ವೆಹಿಕಲ್ (electric vehicle) ತಯಾರಿಸುವ ಕಂಪೆನಿಗಳಲ್ಲಿ ಒಂದು ಒಬೆನ್.

ಇದು ಒಬೆನ್ ಕಂಪನಿಯ ಮೂಲ ಬೆಂಗಳೂರು (oben rorr). ಈ ಸಂಸ್ಥೆ ಇತ್ತೀಚೆಗೆ ಹೊಸ ಬೈಕ್ ಬಿಡುಗಡೆ ಮಾಡಿದೆ, ಈ ಬೈಕ್ ಅನ್ನು ಬಹಳ ಕಡಿಮೆ ಸಮಯದಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಈ ಹೊಸ ಎಲೆಕ್ಟ್ರಿಕ್ ಬೈಕ್ ಅದ್ಭುತವಾದ ಪರ್ಫಾರ್ಮೆನ್ಸ್ ಅನ್ನು ಕೂಡ ನೀಡುತ್ತದೆ. 2023ರ ಜುಲೈ ಇಂದ ಈ ಸಂಸ್ಥೆ ಎಲೆಕ್ಟ್ರಿಕ್ ಬೈಕ್ ಗಳ ಮಾರಾಟ ಶುರು ಮಾಡುತ್ತದೆ. ಇದೀಗ ಈ ಸಂಸ್ಥೆಯಿಂದ ತಯಾರಾಗಿರುವ ಬೈಕ್ ನ ಹೆಸರು ಒಬೆನ್ ರೋರ್.

ಈ ಬೈಕ್ ಬೆಲೆ ₹1.49 ಲಕ್ಷ ರೂಪಾಯಿ, ಆದರೆ ನೀವು ₹30,000 ಡೌನ್ ಪೇಮೆಂಟ್ ಬಿಮಾಡಿ, ಈ ಬೈಕ್ ಅನ್ನು ಬುಕ್ ಮಾಡಿ, ಪ್ರತಿ ತಿಂಗಳು ₹5000 ರೂಪಾಯಿ EMI ಪಾವತಿ ಮಾಡಬಹುದು. ಈ ಎಲೆಕ್ಟ್ರಿಕ್ ಬೈಕ್ ಅನ್ನು ನೀವು ಒಂದು ಸಾರಿ ಚಾರ್ಜ್ ಮಾಡಿದರೆ, 187 ಕಿಮೀ ಓಡಿಸಬಹುದು. ಈ ಬೈಕ್ ನ ಬ್ಯಾಟರಿ ಚಾರ್ಜ್ ಮಾಡುವುದಕ್ಕೆ 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಒಂದು ನೀನಿಷದಲ್ಲಿ 1 ಕಿಮೀ ಪ್ರಯಾಣ ಮಾಡುತ್ತದೆ.

ಈ ಬೈಕ್ ಗೆ IP67 ರೇಟಿಂಗ್ ಇರುವ ಉತ್ತಮ ಕ್ವಾಲಿಟಿಯ ಲೀಥಿಯಂ ಫಾಸ್ಪೇಟ್ ಬ್ಯಾಟರಿ ಬಳಸಲಾಗಿದೆ. ಈ ಬೈಕ್ ನಲ್ಲಿ 12.3bhp ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಇದೆ. 3 ಸೆಕೆಂಡ್ ಗಳಲ್ಲಿ 0 ಇಂದ 100ಕಿಮೀ ಸ್ಪೀಡ್ ಹೋಗುತ್ತದೆ. ಈ ಬೈಕ್ ನ ಜೊತೆಗೆ ನಿಮಗೆ ಸುರಕ್ಷಿತ ವ್ಯವಸ್ಥೆಗಳು ಕೂಡ ಸಿಗುತ್ತದೆ. ಈ ಬೈಕ್ ಅನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ಗೆ ಕನೆಕ್ಟ್ ಮಾಡಬಹುದು…

ಇದರಿಂದ ಡ್ರೈವರ್ ಅಲರ್ಟ್ ಸಿಸ್ಟಮ್ ರೀತಿಯ ಸಿಸ್ಟಮ್ ಅನ್ನು ಬಳಸಬಹುದು. ಒಂದು ವೇಳೆ ಕಳ್ಳರು ನಿಮ್ಮ ಬೈಕ್ ಕದಿಯಲು ಬಂದರೆ, ಆಗ ನಿಮಗೆ ಈ ಸಿಸ್ಟಮ್ ಇಂದ ಎಚ್ಚರಿಕೆ ಬರುತ್ತದೆ. ಆಗ ನೀವು ಯಾವುದೇ ಸಮಯದಲ್ಲಿ ಬೈಕ್ ಆಫ್ ಮಾಡಬಹುದು. ಮತ್ತು ನಿಮ್ಮ ಬೈಕ್ ಅನ್ನು ಪೂರ್ತಿಯಾಗಿ ಲಾಕ್ ಮಾಡಬಹುದು. ಈ ಬೈಕ್ ನ ಎರಡು ವೀಲ್ ಗಳಲ್ಲಿ ಡಿಸ್ಕ್ ಬ್ರೇಕ್ ಇದೆ. ಇದು ಸುರಕ್ಷತೆ ನೀಡುತ್ತದೆ.

Comments are closed.