Mahindra Thar: ಹೊಸದಾಗಿ ಬರುತ್ತಿರುವ ಥಾರ್ 5 ನಲ್ಲಿ ವಿಶೇಷತೆ ನೋಡಿದರೆ ನಿಜಕ್ಕೂ ಇಷ್ಟವಾಗುತ್ತದೆ. ಸಂಪೂರ್ಣ ಡೀಟೇಲ್ಸ್.

Mahindra Thar: ಕಾರ್ ಪ್ರಿಯರೆಲ್ಲರು ಮಹಿಂದ್ರ ಥಾರ್ (Mahindra Thar) ಕಡೆ ಬಿಡುಗಡೆಗೆ ಕಾಯುತ್ತಿದ್ದರು, ಇದೀಗ ಕೊನೆಗೂ ಮಹಿಂದ್ರ ಥಾರ್ ಬಿಡುಗಡೆ ಆಗುವ ದಿನಾಂಕ ಹೊರಬಂದಿದೆ. ಮಹಿಂದ್ರ ಥಾರ್ 5 ಡೋರ್ ಕಾರ್ (5 door Car) ಬಿಡುಗಡೆ ಆಗುವುದಕ್ಕೆ ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಮಹಿಂದ್ರ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ: BMTC: ತೈವಾನ್ ಕಂಪನಿ ಬಂದೆ ಬಿಟ್ಟವು- ಈಗ ಬಿಎಂಟಿಸಿ ಬಸ್ ಗಳನ್ನೂ ಏನು ಮಾಡಲು ಹೊರಟಿವೆ ಗೊತ್ತೇ? ತಿಳಿದರೆ ಭೇಷ್ ಎನ್ನುತ್ತೀರಾ.

ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಬಂದ ವರದಿಯ ಪ್ರಕಾರ, ಮಹಿಂದ್ರ ಥಾರ್ 5 ಡೋರ್ ಕಾರ್ ಬಿಡುಗಡೆ ಆಗಸ್ಟ್ 15ರಂದು ಹೇಳಲಾಗಿತ್ತು, ಆದರೆ ಈಗ ಮಹಿಂದ್ರ ಕಂಪೆನಿಯೇ ಇದರ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.. ಮಹಿಂದ್ರ ಸಂಸ್ಥೆಯ 5 ಡೋರ್ ಬಿಡುಗಡೆ ಆಗುತ್ತದೆ ಎಂದು ಎಲ್ಲರೂ ಅಂದುಕೊಂಡಿರುವಾಗ, ಸಂಸ್ಥೆಯು ಬೇರೆಯದೇ ಉತ್ತರ ನೀಡಿದೆ, ಈ ವರ್ಷ ಮಹಿಂದ್ರ ಥಾರ್ 5 ಡೋರ್ ಬಿಡುಗಡೆ ಆಗುವುದಿಲ್ಲ ಎಂದು ತಿಳಿಸಿದೆ.

ಈ ವಿಚಾರದ ಕುರಿತು ಈಗಾಗಲೇ ಸ್ಪಷ್ಟನೆ ನೀಡಿರುವುದಾಗಿ ಹೇಳಿದೆ ಮಹಿಂದ್ರ ಸಂಸ್ಥೆ. ಮುಂದಿನ ವರ್ಷ ಈ ಥಾರ್ ಬಿಡುಗಡೆ ಆಗಬಹುದು ಎಂದು ಹೇಳಿದೆ. ಇದು ಆಫ್ ರೋಡ್ SUV ಆಗಿದ್ದು ಈಗಿರುವುದು 3 ಡೋರ್ ಆವೃತ್ತಿ, ಇದು ಗ್ರಾಹಕರಿಗೆ ಸ್ವಲ್ಪ ತೊಂದರೆ ಕೊಡುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕಡಿಮೆ ಸ್ಥಳ ಇರುವುದರಿಂದ ಈ ಕಾರ್ ಹೆಚ್ಚು ಆರಾಮವಾಗಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: BMW: BMW ಕಡೆ ಇಂದ ಹೊಸ ಬೈಕ್ ಲಾಂಚ್- 1000 RR ಬೈಕ್ ನಲ್ಲಿ ಏನೆಲ್ಲಾ ವಿಶೇಷತೆ, ದರದ ಸಂಪೂರ್ಣ ಮಾಹಿತಿ.

ಹಾಗಾಗಿ 5 ಡೋರ್ ಆಯ್ಕೆ ಬೇಕು ಎಂದು ಗ್ರಾಹಕರು ಕೂಡ ಬೇಡಿಕೆ ಇಟ್ಟಿದ್ದರು. ಇತ್ತೀಚೆಗೆ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಆಗಿದೆ, ಇದು ಮಹಿಂದ್ರ ಥಾರ್ 5 ಡೋರ್ ಗೆ ಪರ್ಯಾಯ ಎಂದು ಹೇಳಬಹುದು. ಬೆಳವಣಿಗೆ ಈ ರೀತಿ ಇರುವಾಗ, 5 ಡೋರ್ ಥಾರ್ ತಯಾರಿಕೆ ಹಾಗೂ ಬಿಡುಗಡೆ ಮೇಲೆ ಕಂಪನಿಗೆ ಒತ್ತಡ ಇದೆ..ಈ ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿದ ನಾಬ್ತರ ನೆಟ್ಟಿಗರು 2024 ಶುರುವಿನ ವೇಳೆಗೆ ಮಹಿಂದ್ರ ಥಾರ್ 5 ಡೋರ್ ಲಾಂಚ್ ಆಗಬಹುದು ಎಂದು ಹೇಳುತ್ತಿದ್ದಾರೆ.

ಇದರ ವಿಶೇಷತೆ ಬಗ್ಗೆ ಹೇಳುವುದಾದರೆ, ಮಹಿಂದ್ರ 5 ಡೋರ್ ಥಾರ್ ನ ಉದ್ದ 4 ಮೀಟರ್ ಆಗಿರಲಿದೆ, ಇದು ಮಾರುತಿ ಜಿಮ್ನಿ ಗಿಂತ ದೊಡ್ಡದಾಗಿರುತ್ತದೆ. ಹಾಗೆಯೇ 2.0 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಹಾಗೂ 2.2 ಲೀಟರ್ ಡೀಸೆಲ್ ಇಂಜಿನ್ ಜೊತೆಗೆ ಬರುತ್ತದೆ. ಉತ್ತಮವಾದ ಇಂಟೀರಿಯರ್ ಸಹ ಹೊಂದಿದೆ. ಡ್ಯಾಶ್ ಬೋರ್ಡ್, ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವೀಲ್, ಎಲೆಕ್ಟ್ರಿಕ್ ಸನ್ ರೂಫ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿರುತ್ತದೆ, ಮಹಿಂದ್ರ ಥಾರ್ 5 ಡೋರ್ ನಲ್ಲಿ ನಿಮಗೆ ಪ್ರೀಮಿಯಂ ಅನುಭವ ಸಿಗುತ್ತದೆ. ಇದನ್ನೂ ಓದಿ: Home Loan tricks: ಗೃಹ ಸಾಲದ ಹೊರೆಯನ್ನು ನೀವು ಕಡಿಮೆ ಮಾಡಿಕೊಳ್ಳಬೇಕೆ? ಗಮನಿಸಿ, ಈ ರೀತಿ ನಿಮ್ಮ ಹಣ ಕಟ್ಟುವುದು ಕಡಿಮೆ ಮಾಡಿಕೊಳ್ಳಿ.

Comments are closed.