Shravana masa 2023: ಶ್ರಾವಣ ಮಾಸದ ಮೊದಲ ದಿನ ಇದೊಂದು ಕೆಲಸ ಮಾಡಿದರೆ ಸಾಕು, ಗೌರಿ ಸಾಕು ಸಾಕು ಎನ್ನುವಷ್ಟು ಹಣ, ನೆಮ್ಮದಿ ಕರುಣಿಸುತ್ತಾಳೆ; ಏನು ಮಾಡಬೇಕು ಗೊತ್ತೇ?

Shravana masa 2023: ಆಷಾಢ ಮಾಸ ಕಳೆದು ಶ್ರಾವಣ ಮಾಸ ಆರಂಭವಾಗಿದೆ. ಇಂದಿನಿಂದ ಶ್ರಾವಣ ಮಾಸ ಆರಂಭವಾಗಿದ್ದು ಈ ಬಾರಿ ಒಂದು ತಿಂಗಳ ಬದಲು ಎರಡು ತಿಂಗಳ ಕಾಲ ಶ್ರಾವಣ ಮಾಸ ನಡೆಯಲಿದೆ. ಅಂದರೆ 59 ದಿನಗಳಲ್ಲಿ 8 ಸೋಮವಾರಗಳು ಸಿಗುತ್ತವೆ. ಶ್ರಾವಣ ಮಾಸದ ಸೋಮವಾರ ಬಹಳ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಶ್ರಾವಣ ಮಾಸದ ಮೊದಲ ದಿನವೇ ಮಂಗಳ ಗೌರಿ ವ್ರತ ಮಾಡಿ ತಾಯಿ ಗೌರಿ, ಶಿವ ಹಾಗೂ ಗಣೇಶನನ್ನು ಪೂಜಿಸಿ ಪ್ರಾರ್ಥಿಸಿದರೆ ಬೇಡಿದೆಲ್ಲವನ್ನು ದೇವತೆಗಳು ಕರುಣಿಸುತ್ತಾರೆ ಎನ್ನುವ ನಂಬಿಕೆ ಇದೆ.

ಮಂಗಳ ಗೌರಿ ವ್ರತ
ಶ್ರಾವಣ ಮಾಸದ ಮೊದಲ ದಿನವೇ ಮಂಗಳ ಗೌರಿ ವ್ರತವನ್ನು ಆಚರಿಸಬೇಕು. ಕೃಷ್ಣ ಪಕ್ಷದ ಪ್ರತಿಪದ ತಿಥಿಯಂದು ಮಧ್ಯಾಹ್ನ 1:38ರ ವರೆಗೆ ಉತ್ತಮ ಕಾಲ. ಮಂಗಳ ಗೌರಿ ವ್ರತ ಮಾಡುವುದರಿಂದ ತ್ರಿಪುಷ್ಕರ ಯೋಗ ರೂಪಗೊಳ್ಳುತ್ತದೆ. ಇದರಿಂದ ಈ ಸಮಯದಲ್ಲಿ ಮಾಡುವ ಪೂಜೆಯಿಂದ ಸಂಪೂರ್ಣ ಫಲ ನಿಮಗೆ ದೊರೆಯುತ್ತದೆ.

ಮಂಗಳಗೌರಿ ವ್ರತವನ್ನು ಮಾಡಲು ಮಂಗಳಕರ ಸಮಯ
ಜುಲೈ 4 ಬೆಳಿಗ್ಗೆ 8:57 ರಿಂದ ಮಧ್ಯಾಹ್ನ 2:10ರ ವರೆಗೆ
10:41 ರಿಂದ 12:25 ವರೆಗೆ ಲಾಭ ಮುಹೂರ್ತ
ಮಧ್ಯಾಹ್ನ 12 25 ರಿಂದ 2:10ರವೆಗೆ ಸುಮೂರ್ತ.

ಮಂಗಳ ಗೌರಿ ವ್ರತ
ಯಾರೋ ಜಾತಕದಲ್ಲಿ ಮಂಗಳ ದೋಷದಿಂದ ಮದುವೆ ವಿಳಂಬವಾಗಿರುತ್ತದೆ ಅಂತವರು ಮಂಗಳಗೌರಿ ವ್ರತವನ್ನು ಆಚರಿಸಿದರೇ ಖಂಡಿತವಾಗಿಯೂ ಕಂಕಣ ಭಾಗ್ಯ ಕೂಡಿ ಬರುತ್ತದೆ. ನಾಳೆ ಅಂದರೆ ಜುಲೈ 4ರಂದು ಶ್ರೀ ಮಂಗಳ ಗೌರಿ ವ್ರತವನ್ನು ಆಚರಿಸಿ ಓಂ ಗೌರಿಶಂಕರಾಯ ನಮಃ ಎಂದು 108 ಬಾರಿ ಜಪಿಸಬೇಕು. ನಂತರ ಗೌರಿ ಪೂಜೆ ಮಾಡಿ ಆಕೆಯ ಪಾದಗಳಿಗೆ ಸಿಂಧೂರವನ್ನು ಹಚ್ಚಿ ಅದನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳಿ. ಇದು ಕಂಕಣ ಭಾಗ್ಯ ಸೂಚಕವಾಗಿದೆ.

ಇನ್ನು ವೈವಾಹಿಕ ಜೀವನದಲ್ಲಿ ಅದೃಷ್ಟ ಸಂತೋಷ ನೆಮ್ಮದಿ ಬೇಕು ಎನ್ನುವ ವಿವಾಹಿತ ಮಹಿಳೆಯರು ಮಂಗಳ ಗೌರಿ ವ್ರತವನ್ನು ಮಾಡಿ ಗೌರಿಗೆ 16 ಆಭರಣಗಳನ್ನು ಅರ್ಪಿಸಬೇಕು. ನಂತರ ಮಂಗಳ ಗೌರಿ ವ್ರತಕತೆಯನ್ನು ಓದಬೇಕು.

ಇನ್ನು ಮಂಗಳ ದೋಷದಿಂದ ಕೆಲಸದಲ್ಲಿ ಅಡಚಣೆ ಆಗುತ್ತಿದ್ದರೆ ಮಂಗಳ ಗೌರಿ ವ್ರತವನ್ನು ಆಚರಿಸಿ ಎರಡು ಹಿಡಿ ಸೊಪ್ಪನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಭಿಕ್ಷುಕರಿಗೆ ಅಥವಾ ನಿರ್ಕತಿಕರಿಗೆ ದಾನ ಮಾಡಬೇಕು ಇದರಿಂದ ಮಂಗಳ ದೋಷ ನಿವಾರಣೆ ಆಗುತ್ತದೆ.

ಇಂದು ಮಂಗಳ ಗೌರಿ ವ್ರತವನ್ನು ಆರಂಭಿಸಿ ಶ್ರಾವಣ ಮಾಸದ ಪ್ರತಿ ಸೋಮವಾರ ಗೌರಿ ಪೂಜೆ ಮಾಡಬೇಕು ಇದರಿಂದ ಸಕಲ ಸಂಪತ್ತು ಸಮೃದ್ಧಿ ನೆಮ್ಮದಿ ಸಂತೋಷ ಎಲ್ಲವೂ ನಿಮ್ಮದಾಗುತ್ತದೆ. ಗೌರಿಯನ್ನು ಬಹಳ ಶ್ರದ್ದೆ ಹಾಗೂ ಭಕ್ತಿಯಿಂದ ಪೂಜಿಸಿ.

Comments are closed.