Kannada Astrology: ಜುಲೈ ತಿಂಗಳಿನಲ್ಲಿ ಈ ಮೂರು ರಾಶಿಯವರಿಗೆ ಏನೇ ಮಾಡದೆ ಇದ್ದರೂ ಸಾಕ್ಷಾತ್ ಲಕ್ಷ್ಮಿಯೇ ಜೊತೆಗಿರುವಳು: ಕೈತುಂಬ ಹಣ ಗಳಿಸುವ ಅದೃಷ್ಟವಂತ ರಾಶಿಗಳು ಯಾವುವು ಗೊತ್ತೇ

Kannada Astrology: ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ 2023 ಜುಲೈ ತಿಂಗಳಿನಲ್ಲಿ ಈ ಮೂರು ರಾಶಿಯವರ ಮೇಲೆ ಮಾತ್ರ ಲಕ್ಷ್ಮಿ ಕೃಪಾ ಕಟಾಕ್ಷ ಇದ್ದೇ ಇರುತ್ತದೆ. ಪ್ರತಿ ತಿಂಗಳು ಗ್ರಹಗಳು ನಕ್ಷತ್ರಗಳು ತಮ್ಮ ಸ್ಥಾನ ಪಲ್ಲಟ ಮಾಡಿದಾಗ 12 ರಾಶಿ ಚಕ್ರಗಳ ಮೇಲೆ ವಿಶೇಷವಾದ ಪ್ರಭಾವ ಬೀರುತ್ತವೆ. 2023 ಜುಲೈ ತಿಂಗಳಿನಲ್ಲಿ ಲಕ್ಷ್ಮಿ ಈ ಕೆಲವು ರಾಶಿಯವರ ಮೇಲೆ ಪವಾಡವನ್ನೇ ಮಾಡಲಿದ್ದಾಳೆ.

ಮೇಷ ರಾಶಿ

ಧೈರ್ಯ ಮತ್ತು ಶೌರ್ಯದ ಸಂಕೇತ ಮೇಷ ರಾಶಿಯವರಿಗೆ ಧೈರ್ಯ ಹಾಗೂ ಸಾಧಿಸುವ ಛಲ ಹುಟ್ಟಿನಿಂದಲೇ ಬಂದಿರುತ್ತದೆ. 2023 ಜುಲೈ ತಿಂಗಳಿನಲ್ಲಿ ಮೇಷ ರಾಶಿಯವರ ಮೇಲೆ ಲಕ್ಷ್ಮಿಯ ಅನುಗ್ರಹ ಇರುತ್ತದೆ. ಇದರಿಂದ ಆರ್ಥಿಕವಾಗಿ ಪ್ರಗತಿ ಕಾಣಬಹುದು ಸ್ವಲ್ಪ ಪ್ರಯತ್ನ ಮಾಡಿದರು ಸಾಕು ಹೆಚ್ಚಿನ ಗೆಲುವು ಸಿಗುತ್ತದೆ. ನಿಮ್ಮ ಶ್ರಮಕ್ಕೆ ಮೀರಿದ ಪ್ರತಿಫಲವನ್ನು ಪಡೆಯುತ್ತೀರಿ. ವೃತ್ತಿ ಜೀವನವು ಉತ್ತಮವಾಗಿರುತ್ತದೆ. ನಿರೀಕ್ಷಿತ ಪ್ರಗತಿ ಹಾಗೂ ಗೌರವ ಸಿಗುತ್ತದೆ. ಉದ್ಯೋಗ ಸ್ಥಳದಲ್ಲಿಯೂ ಆರ್ಥಿಕವಾಗಿ ಸಬಲರಾಗುತ್ತೀರಿ. ನೀವು ಏಳ್ಗೆ ಕಾಣುತ್ತಿದ್ದಂತೆ ಯಾರಿಗೆ ಅಗತ್ಯವಿದ್ಯೋ ಅಥವಾ ಕಷ್ಟದಲ್ಲಿ ಇದ್ದಾರೋ ಅಂತವರಿಗೆ ಒಂದಿಷ್ಟು ಸಹಾಯ ಮಾಡಿ ಆಗ ನೀವು ಆರ್ಥಿಕವಾಗಿ ಇನ್ನಷ್ಟು ಸಬಲರಾಗಲು ಸಾಧ್ಯ.

ಮಿಥುನ ರಾಶಿ

ಈ ರಾಶಿಯವರು ಬಹುಮುಖ ಪ್ರತಿಭೆ ಹೊಂದಿರುವವರು. ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ಈ ವರ್ಷ ಜುಲೈ ತಿಂಗಳಲ್ಲಿ ಲಕ್ಷ್ಮಿ ಕೂಡ ಇವರ ಜೊತೆಗೆ ಇರುತ್ತಾಳೆ. ಹಾಗಾಗಿ ಜೀವನದಲ್ಲಿ ಸಾಕಷ್ಟು ಯಶಸ್ಸು ಹಾಗೂ ಆರ್ಥಿಕವಾಗಿ ಹೆಚ್ಚಿನ ಆದಾಯ ಬರುತ್ತದೆ. ಇವರು ಇರುವ ಸ್ಥಳವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾರೆ. ತಮ್ಮ ಜೀವನದ ಪ್ರಗತಿಯನ್ನು ಕಂಡುಕೊಳ್ಳಲು ಇದೊಂದು ಸುವರ್ಣ ಅವಕಾಶ. ಈ ಅವಕಾಶವನ್ನು ಬಳಸಿಕೊಂಡು ದೇವಿಯ ಕೃಪೆಯಿಂದ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಪ್ರಗತಿ ಸಾಧಿಸುತ್ತಾರೆ. ಇನ್ನು ಆಕಾಶ ಬಂದಾಗ ಕಣ್ಣು ಮುಚ್ಚಿ ಕುಳಿತುಕೊಳ್ಳದೆ ಅದನ್ನು ಬಳಸಿಕೊಳ್ಳಿ ಆಗ ಲಕ್ಷ್ಮಿಯ ಕೃಪೆ ಹಾಗೂ ನಿಮ್ಮ ಪ್ರಯತ್ನ ಎರಡು ಸೇರಿ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ಕರ್ಕ ರಾಶಿ

ಇವರು ಬಲವಾದ ಭಾವನಾತ್ಮಕ ಮನಸ್ಸು ಹೊಂದಿರುವ ವ್ಯಕ್ತಿತ್ವದವರು. ಜುಲೈ ತಿಂಗಳಿನಲ್ಲಿ ಲಕ್ಷ್ಮಿಯ ಕೃಪೆ ಇವರ ಮೇಲೆ ಅಧಿಕವಾಗಿ ಇರುತ್ತದೆ. ಮನೆಯವರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ ಜೊತೆಗೆ ಸಾಮಾಜಿಕವಾಗಿಯೂ ಕೂಡ ಇವರು ಬೆರೆಯುತ್ತಾರೆ. ಶ್ರಮಕ್ಕೆ ಪ್ರತಿಫಲವಾಗಿ ಅಧಿಕ ಸಂಭಾವನೆ ಹಾಗೂ ಹೆಚ್ಚಿನ ಜವಾಬ್ದಾರಿ ಸಿಗುತ್ತದೆ. ಪ್ರೇಮಿಗಳು ಹಾಗೂ ಸಂಗಾತಿಯೊಂದಿಗೆ ಉತ್ತಮ ಜೀವನ ನಡೆಸಲು ಸಾಧ್ಯವಿದೆ ಪ್ರತಿ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆ ಆಗುತ್ತದೆ. ದೇವಿ ಮಹಾಲಕ್ಷ್ಮಿ ಯಲ್ಲಿ ಹೆಚ್ಚಿನ ನಂಬಿಕೆ ಇಟ್ಟು ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡರೆ ಆರ್ಥಿಕವಾಗಿ ನಿಮ್ಮ ಶಕ್ತಿ ದ್ವಿಗುಣವಾಗುತ್ತದೆ.

Comments are closed.