State Budget: ಮೇಕೆದಾಟು ಒಂದು ಕೆಟ್ಟ ಯೋಜನೆ ಎಂದು ಸರ್ಕಾರದ ಬಜೆಟ್ ನ್ನು ಉಗಿದು ಉಪ್ಪಿನಕಾಯಿ ಹಾಕಿದ ಚೇತನ್ ಅಹಿಂಸಾ!

State Budget: ಈ ಹಿಂದೆ ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM D.K.Shivkumar) ಅವರು ಸಂಗಮ್ ನಿಂದ ಬೆಂಗಳೂರಿನವರೆಗೂ ನೀರಿಗಾಗಿ ನಡಿಗೆ ಎನ್ನುವ ಪಾದಯಾತ್ರೆ ಮಾಡಿದ್ದು ನಿಮಗೆಲ್ಲಾ ನೆನಪಿರಬಹುದು ಅದೇ ರೀತಿ 2023 24ರ 14ನೇ ಬಜೆಟ್ ಮಂಡಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರು ಕೂಡ ಮೇಕೆದಾಟು ಯೋಜನೆಯನ್ನು ಈ ಸಮಯದಲ್ಲಿ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ:Tata Ev Car: Tata ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿ ಮಾಡಿದ ಟಾಟಾ ಎಲೆಕ್ಟ್ರಿಕ್ ಕಾರುಗಳು- ಮೈಲೇಜ್, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಕರ್ನಾಟಕ ರಾಜ್ಯ ಬಜೆಟ್ 2023 24 ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಂಡಿಸಲ್ಪಟ್ಟಿದೆ ಈ ಬಜೆಟ್ ನಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ರೈತರ ಪರವಾಗಿ ಕೂಡ ಸಿದ್ದರಾಮಯ್ಯ ಅವರು ಹಲವು ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ. ಅದೇ ರೀತಿ ಮೇಕೆದಾಟು ಯೋಜನೆ (Mekedatu Project) ಬಗ್ಗೆ ಕೂಡ ಬಜೆಟ್ಟಿನಲ್ಲಿ ಪ್ರಸ್ತಾಪ ಮಾಡಲಾಗಿದ್ದು ಇದಕ್ಕೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಮೇಕೆದಾಟು ಒಂದು ಕೆಟ್ಟ ಯೋಜನೆ ಚೇತನ್ ಅಹಿಂಸಾ್

“ಸರ್ಕಾರ ಮೇಕೆದಾಟು ಯೋಜನೆ ಅಥವಾ ಮೇಕೆದಾಟಿಗೆ ಅಣೆಕಟ್ಟು ಕಟ್ಟುವ ಯೋಜನೆ ತಂದರೆ ಇದೊಂದು ಕೆಟ್ಟ ಯೋಜನೆ. ಪರಿಸರ ಮತ್ತು ಪ್ರವಾಹ ನಿರ್ವಹಣೆ ಯನ್ನು ಸರ್ಕಾರ ಜಯಿಸಲು ಪ್ರಯತ್ನಿಸ ಬೇಕಾಗಿರುವ ಮುಖ್ಯ ಸವಾಲುಗಳು ಆದರೆ ಮೇಕೆದಾಟು ಅಣೆಕಟ್ಟು ಪರಿಸರವನ್ನೇ ನಾಶ ಮಾಡುತ್ತದೆ ಬೆಂಗಳೂರಿನ ಕೆಲವು ಹಳ್ಳಿಗಳಲ್ಲಿ ಇದರಿಂದ ಪ್ರವಾಹ ಕೂಡ ಉಂಟಾಗುತ್ತದೆ. ಹಾಗಾಗಿ ಮೇಕೆದಾಟು ಯೋಜನೆ ಒಂದು ಕೆಟ್ಟ ಯೋಜನೆ ಆಗಿದೆ” ಎಂದು ಸಾಮಾಜಿಕ ಆಕ್ಟಿವಿಸ್ಟ್ ಚೇತನ್ ಅಹಿಂಸ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ಗಳಿಗೆ ಸಾಕಷ್ಟು ಪರ ಹಾಗೂ ವಿರೋಧದ ಕಮೆಂಟ್ಗಳು ಬಂದಿವೆ. ಇದನ್ನೂ ಓದಿ: EV Bike: ಜುಜುಬಿ ಮೂವತ್ತು ಸಾವಿರಕ್ಕೆ ಮನೆಗೆ ತನ್ನಿ ಅತ್ಯಾಧುನಿಕ ಎಲೆಕ್ಟ್ರಿಕ್ ಬೈಕ್- ಏನೆಲ್ಲಾ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಫೈಟಿಂಗ್ ನಡೆಯುತ್ತಲೇ ಇದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ ಈ ಯೋಜನೆ ಜಾರಿಗೆ ಬರಬೇಕು ಇದರಿಂದ ತಮಿಳುನಾಡಿಗೆ ತೊಂದರೆ ಆಗುವುದಿಲ್ಲ ಎನ್ನುವುದು ಕರ್ನಾಟಕದ ವಾದ. ತಮಿಳುನಾಡು ಮಾತ್ರ ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಹಾಗಾಗಿ ರಾಜ್ಯ ಬಜೆಟ್ ನಲ್ಲಿ ಚರ್ಚಿತವಾಗಿರುವ ಮೇಕೆದಾಟು ಅಣೆಕಟ್ಟು ಕಟ್ಟುವ ಯೋಜನೆ ಯಾವ ಹಂತಕ್ಕೆ ತಲುಪುತ್ತದೆ ಕಾದು ನೋಡಬೇಕು.

Comments are closed.