SSLC Supplementary Exam: SSLC ಅಲ್ಲಿ ಫೇಲ್ ಆಗಿದ್ದ ಮಕ್ಕಳಿಗೆ ಪೊಲೀಸ್ ಜವಾಬ್ದಾರಿ ತೆಗೆದುಕೊಂಡು ಏನು ಮಾಡಿದ್ದಾರೆ ಗೊತ್ತೇ? ಭೇಷ್ ಎಂದ ಜನರು.

SSLC Supplementary Exam: ನಮ್ಮ ರಾಜ್ಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಹೊಸೂರು ರಸ್ತೆಯ ಬಂಡೆ ಪಾಳ್ಯದ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ಕುಮಾರ್ ಅವರು ಅಂಥ 70 ಮಕ್ಕಳಿಗೆ, ಮಾರ್ಗದರ್ಶನ ನೀಡಿ, ಅವರನ್ನು ಓದಿಸಿದ್ದು, ಆ ಎಲ್ಲಾ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಬಹಳ ಸಂತೋಷದ ವಿಚಾರ ಆಗಿದ್ದು, ಬಿಜೆಪಿ ಪಕ್ಷದ ಸುರೇಶ್ ಕುಮಾರ್ ಅವರು ಫೇಸ್ ಬುಕ್ ನಲ್ಲಿ ಇವರ ಕೆಲಸವನ್ನು ಹೊಗಳುವ ಮೂಲಕ ಜನರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: Maruti Suzuki Invicto: ಟೊಯೊಟಾ ಇನ್ನೋವಗಾಗಿ ಕಾಯದೇ ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಸುದೀರ್ಘ ಪೋಸ್ಟ್ ಬರೆದಿರುವ ಸುರೇಶ್ ಕುಮಾರ್ ಅವರು.. ” “ಆನಂದದ ಸಂಗತಿಯೊಂದನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಿನ್ನೆ ಸಂಜೆ ಬೆಂಗಳೂರಿನ ಪೊಲೀಸ್ ಠಾಣೆಯೊಂದಕ್ಕೆ ಹೋದಾಗ ಭರವಸೆಗೆ ಕಾರಣವೊಂದು (Reason for Hope) ಸಿಕ್ಕಿತು. ಹೊಸೂರು ರಸ್ತೆಯ ಬಳಿ ಇರುವ ಬಂಡೆಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ L.Y. ರಾಜೇಶ್ ತನ್ನ ವ್ಯಾಪ್ತಿಯಲ್ಲಿ ಮಾಡುತ್ತಿರುವ ಒಂದು ಸಮಾಜಮುಖಿ ಕಾರ್ಯ ನನ್ನ ಗಮನಕ್ಕೆ ಬಂದ ನಂತರ ಆ ಠಾಣೆಗೆ ಭೇಟಿ ಕೊಡಬೇಕೆಂದೆನಿಸಿತು.

ತನ್ನ ಸ್ಟೇಶನ್ ವ್ಯಾಪ್ತಿಯಲ್ಲಿ ಅನೇಕ ಹುಡುಗರು ಎಸ್ ಎಸ್ ಎಲ್ ಸಿ ಫೇಲಾದ ನಂತರ ಅಡ್ಡ ದಾರಿ ಹಿಡಿಯುತ್ತಿದ್ದದ್ದನ್ನು ಗಮನಿಸಿದ ರಾಜೇಶ್ ಅವರಿಗೆಲ್ಲ ಸರಿಯಾದ ಮಾರ್ಗದರ್ಶನ ಮಾಡಬೇಕೆಂದು ತೀರ್ಮಾನಿಸಿದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲಾದ ಸುಮಾರು 70 ಮಕ್ಕಳನ್ನು ಸೇರಿಸಿ ಅವರು ಪೂರಕ ಪರೀಕ್ಷೆಗೆ ಕೂರಲು (supplementary exam) ತರಬೇತಿ ತರಗತಿಗಳನ್ನು (coaching classes) ನಡೆಸಲು ವ್ಯವಸ್ಥೆ ಮಾಡಿದರು. ಇದನ್ನೂ ಓದಿ: State Budget: ಮೇಕೆದಾಟು ಒಂದು ಕೆಟ್ಟ ಯೋಜನೆ ಎಂದು ಸರ್ಕಾರದ ಬಜೆಟ್ ನ್ನು ಉಗಿದು ಉಪ್ಪಿನಕಾಯಿ ಹಾಕಿದ ಚೇತನ್ ಅಹಿಂಸಾ!

ಆ ವ್ಯಾಪ್ತಿಯಲ್ಲಿಯೇ ಲಭ್ಯವಿದ್ದ ಉತ್ತಮ ಶಿಕ್ಷಕರ ನೆರವಿನಿಂದ ಆ ಮಕ್ಕಳಿಗೆಲ್ಲ ವಿಶೇಷ ಪಾಠ ದೊರಕುವಂತೆ ಮಾಡಿದರು. ಸುಮಾರು 20 25 ದಿನ ಬೆಳಗಿನ ಸಂಜೆವರೆಗೂ ಆ ಮಕ್ಕಳಿಗೆ ಮಾರ್ಗದರ್ಶನ ಪಾಠಗಳನ್ನು ಮಾಡಿಸಿ ಅವರಿಗೆ ಅಲ್ಲೇ ಊಟದ ವ್ಯವಸ್ಥೆಯನ್ನು ಮಾಡಿಸಿ ಅವರೆಲ್ಲರೂ ಪೂರಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವಂತೆ ಮಾಡಿದರು. ಅಷ್ಟೇ ಅಲ್ಲದೆ ಅವರು ಹೇಗಿರಬೇಕೆಂದು ಪ್ರೆರಣಾದಾಯಿ ಘಟನೆಗಳ ಮೂಲಕವೂ ತಿಳುವಳಿಕೆ ಕೊಡುವ ಪ್ರಯತ್ನವನ್ನೂ ಸಹ ಮಾಡಿದರು.

ಆರು ವಿಷಯಗಳಲ್ಲಿಯೂ ಫೇಲ್ ಆಗಿದ್ದ ಕೆಲ ಮಕ್ಕಳು ಪೂರಕ ಪರೀಕ್ಷೆಯಲ್ಲಿ ಪಾಸ್ ಆಗಿರುವುದು ಆನಂದದ ವಿಚಾರ. ಅನೇಕ ವಿದ್ಯಾರ್ಥಿಗಳು ಈಗ ಪದವಿ ಪೂರ್ವ ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ನಿನ್ನೆ ಆ ಮಕ್ಕಳಿಗೆಲ್ಲ ಪಾಠ ಹೇಳಿದ ಶಿಕ್ಷಕರು, ಈ ಕಾರ್ಯದ ರೂವಾರಿ ರಾಜೇಶ್, ಕೆಲ ವಿದ್ಯಾರ್ಥಿಗಳು… ಎಲ್ಲರೊಡನೆ ಸಂವಾದ ನಡೆಸಿ ವಿವರಗಳನ್ನು ಪಡೆದೆ. ಆ ಶಿಕ್ಷಕರು ಈ ಕಾರ್ಯದ ಮೂಲಕ ತಮಗೆ ಉಂಟಾಗಿರುವ ಸಂತೃಪ್ತಿಯನ್ನು ವಿವರಿಸುವಾಗ ಅವರೆಲ್ಲರ ಮುಖಗಳಲ್ಲಿ ಆನಂದ ನೋಡಬೇಕಿತ್ತು. ಇದನ್ನೂ ಓದಿ: OnePlus Nord Buds 2R:ಹೊಸದಾಗಿ ಬಿಡುಗಡೆ ಆಯ್ತು ಒನ್ ಪ್ಲಸ್ ರವರ ಇಯರ್ ಬುಡ್ಸ್- ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡುತ್ತೀರಿ.

ಈ ಹಿಂದೆ ಚಂದ್ರ ಲೇಔಟ್ ಬಲಿರು ಓರ್ವ ಪೊಲೀಸ್ ಇನ್ಸ್ಪೆಕ್ಟರ್ ತನ್ನ ಬಿಡುವಿನ ಸಮಯದಲ್ಲಿ ಅಲ್ಲಿನ ಸ್ಲಂ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದನ್ನು ನೋಡಿ ನಾನು ವಿವರಗಳನ್ನು ಹಂಚಿಕೊಂಡಿದ್ದೆ. ಒಟ್ಟಾರೆ ರಾಜೇಶ್ ಮತ್ತು ಅವರ ಸಂಗಡಿಗರು ಮಾಡುತ್ತಿರುವ ಈ ಒಂದು ದೊಡ್ಡ ಕಾರ್ಯ ನಮ್ಮ ಸಮಾಜಕ್ಕೆ ಅತ್ಯಂತ ಆರೋಗ್ಯಕರ. ಸಂತಸದಿಂದ ರಾಜೇಶ್ ರವರಿಗೆ ಗೌರವಿಸಿ ಬೆನ್ನು ತಟ್ಟಿ ಬಂದೆ.

ಮತ್ತೊಂದು ವಿಚಾರ. ಇಷ್ಟೇ ಒಳ್ಳೆಯ ಕಾರ್ಯ ಅಲ್ಲದೆ, ತನ್ನ ಸ್ಟೇಷನ್ನಿಗೆ ಬರುವ ಪ್ರತಿಯೊಬ್ಬರ ಅನುಭವಗಳ feedback ಪಡೆಯುವ “ದರ್ಪಣ” ಎಂಬ ಕಾರ್ಯಕ್ರಮವನ್ನು ಸಹ ರಾಜೇಶ್ ಪ್ರಾರಂಭಿಸಿದ್ದಾರೆ. ತನ್ನ ಸ್ಟೇಶನ್ ಗೆ ಬಂದಾಗ ನಾಗರಿಕರಿಗೆ ಸಿಕ್ಕ ಪೊಲೀಸರ ವರ್ತನೆ ಹೇಗಿತ್ತು, ಒಟ್ಟು ಪೊಲೀಸ್ ಸ್ಟೇಷನ್ ನ ವಾತಾವರಣದಿಂದ ಆ ನಾಗರಿಕರಿಗೆ ಏನು ಅನಿಸಿದೆ ಎಂಬ ವಿಚಾರದಲ್ಲಿ ಸುಮಾರು ಐದಾರು ಪ್ರಶ್ನೆಗಳ ಗಳನ್ನು ಹೊಂದಿರುವ ಪ್ರಶ್ನಾವಳಿಯ ಮೂಲಕ ಅನುಭವವನ್ನು ತಿಳಿಯುವ ಪ್ರಯತ್ನವಿದು.

ಇದರ ಆಧಾರದ ಮೇಲೆ ಪ್ರತಿ 15 ದಿನಗಳಿಗೆ ಒಮ್ಮೆ ಉತ್ತಮ ಸಿಬ್ಬಂದಿಯನ್ನು “Star of the Fortnight” ಎಂದು ಗುರುತಿಸಿ ಆ ಸಿಬ್ಬಂದಿಯ ಫೋಟೋವನ್ನು ಸ್ಟೇಷನ್ ನಲ್ಲಿ ಹಾಕಿ ಅವರ ಬೆನ್ನು ತಟ್ಟುವ ವಿಶಿಷ್ಟ ಪ್ರಯತ್ನವನ್ನು ಶ್ರೀ ರಾಜೇಶ್ ಮಾಡಿದ್ದಾರೆ. ಒಟ್ಟಾರೆ Police Station with a difference ಮತ್ತು Police Officer with a difference ಭೇಟಿ ಮಾಡಿದ ಅನುಭವ ನನ್ನದಾಗಿತ್ತು. ಹಾಗೆಯೇ ರಾಜೇಶ್ ತಾಯಿಯವರನ್ನೂ ಫೋನ್ ಮೂಲಕ ಮಾತನಾಡಿಸಿ ನನ್ನ ಸಂತಸ ವ್ಯಕ್ತಪಡಿಸಿದೆ. ಅಂದ ಹಾಗೆ ರಾಜೇಶ್ ತಾಯಿಯೂ ನಿವೃತ್ತ ಶಾಲಾ ಶಿಕ್ಷಕಿ..” ಎಂದು ಬರೆದುಕೊಂಡಿದ್ದಾರೆ.

Comments are closed.