Ather 450s:ಮತ್ತಷ್ಟು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಅಥೇರ್ 450S ಏನೆಲ್ಲಾ ವಿಶೇಷತೆ ಇರಲಿದೆ ಗೊತ್ತೇ?

Ather 450s: ಈಗ ಅಥೆರ್ (Ather) ಸಂಸ್ಥೆಯು ಹೊಸ ಮಾಡೆಲ್ 450S ಬೈಕ್ ಅನ್ನು ಬಿಡುಗಡೆ ಮಾಡುತ್ತಿದೆ. ಅಥೆರ್ 450S ಸುಲಭವಾಗಿ ಅಫಾರ್ಡ್ ಮಾಡಬಹುದಾದ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಿದೆ. ಈ ಅಥೆರ್ 450S ಈ ಹಿಂದಿನ ಅಥೆರ್ 450X ನ ಅಪ್ಗ್ರೇಡ್ ವರ್ಷನ್ ಆಗಿದೆ. ಈ 450S ನ ಫೀಚರ್ಸ್ ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ. LCD ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಇದನ್ನೂ ಓದಿ: Hyundai Exter Price: ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ Hyundai Exter- ಚಿಲ್ಲರೆ ಬೆಲೆಗೆ ಸಿಗುವ ಈ SUV ಕಾರಿನ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್

ಇದರಲ್ಲಿ ಫ್ಯಾನ್ಸಿಯರ್ ಟಚ್ ಸ್ಕ್ರೀನ್ ಹೊಂದಿದೆ, ಇದರಲ್ಲಿ ಸಿಂಪಲ್ ಆದ LCD ಯೂನಿಟ್ ಇದ್ದು, segmented display ಹೊಂದಿದೆ. ಈಗಿನ ಕಾಲದ ಸ್ಮಾರ್ಟ್ ಫೋನ್ (Smart Phone) ಗಳ ಹಾಗೆ ಟಚ್ ಎಬಿಲಿಟಿ ಇಲ್ಲ, ಆದರೆ ಇದರಲ್ಲಿ ಬಿಲ್ಟ್ ಇನ್ ನ್ಯಾವಿಗೇಶನ್, ಡಾಕ್ಯುಮೆಂಟ್ ಸ್ಟೋರೇಜ್, ಕನೆಕ್ಟಿವಿಟಿ ಫೀಚರ್ ಗಳನ್ನು ಹೊಂದಿದೆ. ಅಥೆರ್ 450S ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಇಂದ ಕಾಲ್/SMS ನೋಟಿಫಿಕೇಶನ್ ಫೀಚರ್ಸ್ ತರುತ್ತಾ ಎಂದು ಕಾದು ನೋಡಬೇಕಿದೆ.

ಅಥೆರ್ 450S ಬೈಕ್ ನ ಬೆಲೆ ₹1.30 ಲಕ್ಷ ರೂಪಾಯಿ ಆಗಿದೆ.. ಇನ್ನು ಕಡಿಮೆ ಬೆಲೆ ಆಗುವುದಕ್ಕೆ, ಕೆಲವು ಫೀಚರ್ಸ್ ಗಳನ್ನು ತೆಗೆದುಹಾಕಲಾಗುತ್ತದೆ. ಇದು ಟಚ್ ಸ್ಕ್ರೀನ್ ಯೂನಿಟ್ ಮಾತ್ರ ಆಗಿರುವುದಿಲ್ಲ, 450S ಬೈಕ್ ನಲ್ಲಿ 3kwh ಬ್ಯಾಟರಿ ಹೊಂದಿದ್ದು, 115km ರೇಂಜ್ ನೀಡುತ್ತದೆ. 3.7 kWh ಬ್ಯಾಟರಿ ನಲ್ಲಿ 146km ರೇಂಜ್ ನೀಡುತ್ತದೆ. ಇದರ ಟಾಪ್ ಸ್ಪೀಡ್ 90kmph ಇದೆ. 6.4kW 8.58bhp ಎಲೆಕ್ಟ್ರಿಕ್ ಮೋಟರ್. 26nm ಪೀಕ್ ಟಾರ್ಕ್ ಔಟ್ ಪುಟ್ ಹೊಂದಿದೆ. ಈ ಮಾಡೆಲ್ ನಲ್ಲಿ ಕೆಲವು ಕಾಸ್ಮೆಟಿಕ್ ಚೇಂಜ್ ಗಳನ್ನು ತರಲಾಗಿದೆ ಎನ್ನುತ್ತಾರೆ.

ಎಲೆಕ್ಟ್ರಿಕ್ ಬೈಕ್ ಗಳ ಪೈಕಿ ಟಚ್ ಸ್ಕ್ರೀನ್ ಪರಿಚಯ ಮಾಡಿರುವ ಮೊದಲ ಬೈಕ್ ಆಗಿದೆ ಅಥೆರ್. ಇದು 2018ರಲ್ಲಿ ಪರಿಚಯವಾಗಿದೆ. ಈ ಟ್ರೆಂಡ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಫಾಲೋ ಮಾಡಲಾಗುತ್ತಿದೆ. ಇದು ಪ್ರೈಸ್ ಹೈಕ್ ಆಗಬಹುದು ಎನ್ನಲಾಗಿದೆ. 450S ಮೂಲಕ ಸೇಲ್ಸ್ ಜಾಸ್ತಿ ಮಾಡಬೇಕು ಎಂದು ಪ್ಲಾನ್ ಮಾಡಲಾಗಿದೆ. ಜನರಿಗೆ ಹೆಚ್ಚು ಇಷ್ಟ ಆಗುವ, ಜೊತೆಗೆ ಹಣದ ವಿಚಾರದಲ್ಲೂ ಚೆನ್ನಾಗಿರುವ ಬೈಕ್ ಗಳನ್ನು ತಯಾರಿಸುವ ಭರವಸೆ ಹೊಂದಿದ್ದಾರೆ.

450S ಬೈಕ್ ಗಳ ಪೈಕಿ, ಏನೆಲ್ಲಾ ಬದಲಾವಣೆಗಳನ್ನು ತರಲಾಗುತ್ತದೆ ಎಂದು ನೋಡಬೇಕಿದೆ. ಈ ವರ್ಷ ಆಗಸ್ಟ್ ನಲ್ಲಿ ಲಾಂಚ್ ಆಗಬಹುದು ಎಂದು ಮಾಹಿತಿ ಸಿಕ್ಕಿದೆ. ಅಥೆರ್ 450S, ಓಲಾ S1, TVS iQube, Ampere Premiums ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಹೆಚ್ಚು ಜನರನ್ನು ಈ ಬೈಕ್ ಸೆಳೆಯುತ್ತದೆ ಎನ್ನಲಾಗಿದೆ.

Comments are closed.