Virat Kohli vs RCB Fans: ಇದು ಇದು ಕಿಂಗ್ ಅಂದ್ರೆ – ಆರ್ಸಿಬಿ ಅಭಿಮಾನಿಗಳ ಮನಸ್ಸನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಗೊತ್ತೇ? ವಿಡಿಯೋ ಆಯಿತು ವೈರಲ್! ನೀವೂ ನೋಡಿ

Virat Kohli vs RCB Fans: ವಿರಾಟ್ ಕೊಹ್ಲಿ (Virat Kohli) ಅವರು ನಮ್ಮ ದೇಶ ಕಂಡ ಅತ್ಯಂತ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು.. ಆಟಗಾರನಾಗಿ, ಕ್ಯಾಪ್ಟನ್ ಆಗಿ ವಿರಾಟ್ ಅವರು ಅದ್ಭುತವಾದ ಪರ್ಫಾರ್ಮೆನ್ಸ್ ನೀಡಿ, ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಆಟಗಾರ ಆಗಿದ್ದಾರೆ. ವಿರಾಟ್ ಕೊಹ್ಲಿ ಅವರಿಗೆ ಬೆಂಗಳೂರಿನ ಜೊತೆಗೆ ವಿಶೇಷವಾದ ನಂಟಿದೆ, ಅದಕ್ಕೆ ಮುಖ್ಯ ಕಾರಣ ಆರ್ಸಿಬಿ ತಂಡ. ವಿರಾಟ್ ಅವರಿಗೆ ಆರ್ಸಿಬಿ (RCB) ಮತ್ತು ಬೆಂಗಳೂರಿನ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವುದಕ್ಕೆ ಇದೀಗ ಒಂದು ವಿಡಿಯೋ ಸಾಕ್ಷಿ ಆಗಿದೆ..

ಐಪಿಎಲ್ ಶುರುವಾಗಿದ್ದು 2008ರಲ್ಲಿ, ಆಗಿನಿಂದ ಈಗಿನವರೆಗೂ ಒಟ್ಟು 16 ಸೀಸನ್ ಗಳು ಕಳೆದಿವೆ, ಈ 16 ಸೀಸನ್ ಗಳಲ್ಲೂ ವಿರಾಟ್ ಅವರು ಆರ್ಸಿಬಿ ತಂಡದ ಪರವಾಗಿಯೇ ಆಡಿದ್ದಾರೆ. ಆರ್ಸಿಬಿ ಫ್ರಾಂಚೈಸಿಯನ್ನು ಬಿಟ್ಟು ಹೋಗಿದ್ದೆ ಇಲ್ಲ, ವಿರಾಟ್ ಅವರಿಗೆ ಆರ್ಸಿಬಿ ತಂಡ ಮತ್ತು ಅಭಿಮಾನಿಗಳು ಬಹಳ ಗೌರವ ಪ್ರೀತಿ ಕೊಡುತ್ತಾರೆ, ಅದೇ ಪ್ರೀತಿ ವಿರಾಟ್ ಅವರಿಗು ತಂಡದ ಮೇಲೆ ಇದೆ. ಪ್ಲೇಯರ್ ಆಗಿ ಆರ್ಸಿಬಿ ತಂಡಕ್ಕೆ ಬಂದ ವಿರಾಟ್ ಅವರು..

ಹಲವು ವರ್ಷಗಳ ಕಾಲ ಕ್ಯಾಪ್ಟನ್ (Captain) ಆಗಿ ತಂಡಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಈಗ ಕ್ಯಾಪ್ಟನ್ಸಿ ಇಂದ ಹೊರಬಂದು ಆರ್ಸಿಬಿ ತಂಡದ ಪ್ಲೇಯರ್ ಆಗಿ ಅಡುತ್ತಿದ್ದಾರೆ. ಇತ್ತೀಚೆಗೆ ವಿರಾಟ್ ಅವರು ಒಂದು ಸಂದರ್ಶನದಲ್ಲಿ ಮಾತನಾಡುವಾಗ, ಬೆಂಗಳೂರಿನ ಬಗ್ಗೆ ಮತ್ತು ಆರ್ಸಿಬಿ ಬಗ್ಗೆ ಮಾತನಾಡಿದ್ದು, ವಿರಾಟ್ ಅವರ ಆರ್ಸಿಬಿ ಮೇಲೆ ಮತ್ತು ಫ್ಯಾನ್ಸ್ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವುದನ್ನು ತೋರಿಸುತ್ತಿದೆ..

“Bangalore ಸಾರಿ ಬೆಂಗಳೂರಿಗೆ ನನ್ನ ಮನಸ್ಸಿನಲ್ಲಿ ವಿಶೇಷ ಜಾಗವಿದೆ.. ಬೆಂಗಳೂರು (Bengaluru) ನನ್ನ ಬದುಕಿನ ಮೇಲೆ ಪ್ರಮುಖವಾದ ಪರಿಣಾಮ ಬೀರಿದೆ. ನನ್ನ ಕೆರಿಯರ್ ಶುರುವಿನಲ್ಲಿ ಅಂಡರ್ 14, ಅಂಡರ್ 15 ತಂಡದಲ್ಲಿದ್ದಾಗ ಪ್ರಾಕ್ಟೀಸ್ ಸೆಷನ್ ಗಾಗಿ ಬೆಂಗಳೂರಿನ NCA ಗೆ ಬರುತ್ತಿದ್ದೆ., ಆ ವೇಳೆ 2 ರಿಂದ 3 ತಿಂಗಳು ಇಲ್ಲೇ ಇದ್ದೆ, ಆಗಿನಿಂದಲು ಬೆಂಗಳೂರನ್ನು ನೋಡಿದ್ದೇನೆ. ಆದರೆ ಐಪಿಎಲ್ ಶುರುವಾದ ನಂತರ ಆರ್ಸಿಬಿ ತಂಡಕ್ಕಾಗಿ ಬಹಳಷ್ಟು ವರ್ಷಗಳಿಂದ ಆಡುತ್ತಾ ಬಂದಿದ್ದೇನೆ..ನಾನು ಇನ್ನು ಎಷ್ಟು ವರ್ಷ ಆಡುತ್ತೇನೋ, ಅಷ್ಟು ವರ್ಷಗಳು ಆರ್ಸಿಬಿ ಪರವಾಗಿಯೇ ಆಡುತ್ತೇನೆ. ಈ ನಿರ್ಧಾರಕ್ಕೆ ಕಾರಣ..

ನನ್ನನ್ನು ನಾನು ಬೇರೆ ತಂಡದ ವಾತಾವರಣದಲ್ಲಿ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ನನಗೆ ಈ ಸಿಟಿ ಭಾರತದ ಬೇರೆ ಎಲ್ಲಾ ಊರಿಗಳಿಗಿಂತ ಬೇರೆ ರೀತಿಯ ಫೀಲ್ ಕೊಡುತ್ತದೆ. ಬೆಂಗಳೂರು ಏರ್ಪೋರ್ಟ್ ಗೆ ಬಂದು ಹೋಟೆಲ್ ಗೆ ಹೋಗುವಾಗ, ನಮ್ಮ ಮನೆಗೆ ಹೋಗುತ್ತಿರುವ ಅನುಭವ ಕೊಡುತ್ತದೆ..” ಎಂದು ಹೇಳಿದ್ದಾರೆ ಕಿಂಗ್ ಕೋಹ್ಲಿ. ಇತ್ತೀಚೆಗೆ ಪತ್ನಿ ಅನುಷ್ಕಾ ಜೊತೆಗೆ ಮಲ್ಲೇಶ್ವರಂ ನ CTR ಗೆ ಬಂದು ದೋಸೆ ತಿಂದಿದ್ದರು. ಕೋಹ್ಲಿ ಅವರಿಗೆ ಇರುವ ಈ ಅಭಿಮಾನವೇ ಅಭಿಮಾನಿಗಳಿಗೂ ಬಹಳ ಇಷ್ಟವಾಗುವುದು.

Comments are closed.