Paap kartari yoga: ಬರೋಬರಿ 200 ವರ್ಷಗಳ ಬಳಿಕ ಬಂದ ಪಾಪ ಕರ್ತರಿ ಯೋಗ: ಈ ನಾಲ್ಕು ರಾಶಿಯವರು ಮಾತ್ರ ಬಹಳ ಎಚ್ಚರಿಕೆಯಿಂದ ಇರಲೇಬೇಕು! ವೈದಿಕ ಪರಿಹಾರ ಕಂಡುಕೊಳ್ಳಿ!
Paap kartari yoga: ಗ್ರಹಗಳ ಚಲನೆ 12 ರಾಶಿಗಳ ಮೇಲೆ ಒಂದಲ್ಲ ಒಂದು ಪ್ರಭಾವ ಬೀರುತ್ತದೆ. 200 ವರ್ಷಗಳ ಬಳಿಕ ಕೆಲವು ಗ್ರಹಗಳ ಸಂಯೋಜನೆ ಸಂಭವಿಸಿದ್ದು ಪಾಪ ಕರ್ತರಿ ಯೋಗವಾಗಿ ನಿರ್ಮಾಣಗೊಳ್ಳುತ್ತದೆ. ಇದು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಇದು ಕೆಲವು ದಿನಗಳ ಬವಣೆ ಅಷ್ಟೇ. ಆದರೂ ಈ ನಾಲ್ಕು ರಾಶಿಯವರು ಮಾತ್ರ ಬಹಳ ಜಾಗರೂಕತೆಯಿಂದ ಇರಬೇಕು. ಇದನ್ನೂ ಓದಿ: Shani Raja yoga: ಇನ್ನು ನೆಮ್ಮದಿಯಿಂದ ಇದ್ದು ಬಿಡಬಹುದು ಬಿಡಿ: ಶನಿ ತರಲಿದ್ದಾನೆ ರಾಜಯೋಗ, ಯಾವ ರಾಶಿಗಳಿಗೆ ಗೊತ್ತೇ
ವೃಷಭ ರಾಶಿ: ಚತುರ್ಗುಣ ಪಾಪ ಕರ್ತರಿ ಯೋಗ ವೃಷಭ ರಾಶಿಯವರ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರಲಿದೆ. ಕೆಲಸದಲ್ಲಿ ಮಿಶ್ರ ಫಲಗಳು ಸಿಗಬಹುದು. ಸಂಗಾತಿಯೊಂದಿಗೆ ಅಥವಾ ಪ್ರೇಮಿಗಳಲ್ಲಿ ತಪ್ಪು ತಿಳುವಳಿಕೆ ಮೂಡಿ ಸಂಬಂಧ ಹಾಳಾಗುವ ಸಮಸ್ಯೆ ಎದುರಾಗಬಹುದು. ವೃಷಭ ರಾಶಿಯ ಅಧಿಪತಿ ಶುಕ್ರ ಮಂಗಳ ಗ್ರಹದೊಂದಿಗೆ ಸಂಯೋಜಿತನಾಗಿರುತ್ತಾನೆ. ಈ ಸಮಯದಲ್ಲಿ ರಾಹುವಿನ ಉಪಸ್ಥಿತಿಯು ವೃಷಭ ರಾಶಿಯ ಮನೆಯಲ್ಲಿ ಇರುತ್ತದೆ ಇದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಅಂದುಕೊಂಡ ಯಾವ ಕೆಲಸವೂ ಕೂಡ ಪೂರ್ಣಗೊಳ್ಳುವುದಿಲ್ಲ.
ಕರ್ಕ ರಾಶಿ: ಪಾಪು ಕರ್ತರಿ ಯೋಗದಿಂದ ಕಾರ್ಕರಾಶಿಯವರು ಕೂಡ ಆನೆ ಅನುಭವಿಸಬೇಕಾಗುತ್ತದೆ ಎಲ್ಲ ಕೆಲಸಗಳಲ್ಲಿಯೂ ವೈಫಲ್ಯತೆ ಕಾಣಿಸುತ್ತದೆ. ಅಪಘಾತ ಸಂಭವಿಸುವ ಸಾಧ್ಯತೆ ಇದೆ ವಾಹನ ಚಲಿಸುವಾಗ ಎಚ್ಚರಿಕೆಯಿಂದ ಚಲಾಯಿಸಿ. ಆದಾಯ ಇಳಿಮುಖವಾಗುತ್ತದೆ ಕೌಟುಂಬಿಕ ಸಮಸ್ಯೆಗಳು ಕಾಡ ಬಹುದು. ಕುಟುಂಬದಲ್ಲಿ ಹಿರಿಯರಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಹಾಗಾಗಿ ನಿಮ್ಮ ಬಜೆಟ್ಗಿಂತಲೂ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ನೀವು ಅಂದುಕೊಂಡಿದ್ದು ಮಾಡಲು ಸಾಧ್ಯವಾಗದೇ ಬೇಸರಕ್ಕೆ ಒಳಗಾಗುತ್ತೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕೂಡ ಕರ್ತರಿ ಯೋಗದಿಂದ ಸಮಸ್ಯೆ ಉಂಟಾಗಬಹುದು ಯಾವುದೇ ಕೆಲಸ ಮಾಡಿದರು ಅದರಲ್ಲಿ ತೊಡಕು ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಹಾನಿ ಅನುಭವಿಸಬೇಕಾಗುತ್ತದೆ. ಸಮಯದಲ್ಲಿ ಸಾಲ ನೀಡುವುದು ಅಥವಾ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ ಇಲ್ಲವಾದರೆ ಇದು ನಿಮಗೆ ದೊಡ್ಡ ಹೊರೆ ಆಗಬಹುದು. ವ್ಯಾಪಾರ ಮಾಡುವುದು ಒಳ್ಳೆಯದಲ್ಲ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹಣ ಕಳೆದುಕೊಳ್ಳುವುದೇ ಜಾಸ್ತಿ. ಹಣಕಾಸಿಗೆ ಸಂಬಂಧಪಟ್ಟ ಹಾಗೆ ತುಂಬಾನೇ ಜಾಗೃತೆ ವಹಿಸಬೇಕು.
ಮೀನ ರಾಶಿ: ಮೀನ ರಾಶಿಯವರೆಗೂ ಕೂಡ ಸಾಕಷ್ಟು ಹಾನಿ ಉಂಟು ಮಾಡಬಹುದು ಜೀವನದಲ್ಲಿ ತ್ವರಿತ ಪರಿಹಾರ ಕಂಡುಕೊಳ್ಳಬೇಕು. ಮೀನ ರಾಶಿಯ ಮೂರನೇ ಮನೆಯಲ್ಲಿ ಶನಿದೇವನ ದೃಷ್ಟಿ ಹಾಗೂ ರಾಹುವಿನ ಉಪಸ್ಥಿತಿ ಇದೆ. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಿ. ಅಪಘಾತ ಸಂಭವಿಸುವ ಸಾಧ್ಯತೆ ಇದೆ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಚಲಾಯಿಸಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ ಇದರಿಂದ ಹೆಚ್ಚು ದುಃಖ ಪಡಬೇಕಾಗುತ್ತದೆ. ಅಸಮರ್ಪಕ ಕೆಲಸಗಳು ಸಮಸ್ಯೆಯನ್ನು ಉಂಟು ಮಾಡಬಹುದು.
200 ವರ್ಷಗಳ ನಂತರ ಬಂದಿರುವ ಚತುರ್ಗುಣ ಪಾಪ ಕರ್ತರಿ ಯೋಗದಿಂದ ಕೆಲವು ರಾಶಿಯವರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಹಣಕಾಸು ಹಾಗೂ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಜ್ಯೋತಿಷಿಗಳ ಸಲಹೆಯಿಂದ ಪರಿಹಾರ ಕಂಡುಕೊಳ್ಳಬಹುದು. ಅಥವಾ ನೀವು ನಂಬಿರುವ ದೇವರನ್ನು ಭಕ್ತಿಯಿಂದ ಪೂಜೆ ಮಾಡಿ, ದೇವಸ್ಥಾನಗಳಿಗೆ ಭೇಟಿ ನೀಡಿ, ಧಾರ್ಮಿಕ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇದರಿಂದ ಪಾಪ ಕರ್ತರಿ ಯೋಗದಿಂದ ಉಂಟಾಗುವ ಪರಿಣಾಮವನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು.
Comments are closed.