Adhik Maas 2023: ಅಧಿಕ ಮಾಸದಲ್ಲಿ ಈ ನಾಲ್ಕು ರಾಶಿಯವರು ಲಕ್ಷ್ಮೀದೇವಿಯನ್ನು ಪೂಜಿಸದೆ ಇದ್ದರೆ ಭಾರಿ ದೊಡ್ಡ ನಷ್ಟವಾಗುವುದು ಖಂಡಿತ!

Adhik Maas 2023: ಹಿಂದೂ ಸಂಪ್ರದಾಯದಲ್ಲಿ ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಮೀಸಲಿಡಲಾಗಿದೆ. ಈ ದಿನ ಹೆಂಗಳೆಯರು ಬಹಳ ಉತ್ಸಾಹದಿಂದ ಲಕ್ಷ್ಮಿ ದೇವಿ ಪೂಜೆ ಮಾಡುತ್ತಾರೆ. ಶುಕ್ರವಾರ ಲಕ್ಷ್ಮಿ ದೇವಿಗೆ ಶ್ರೇಷ್ಠವಾದ ದಿನವಾಗಿದ್ದು ಈ ದಿನ ಲಕ್ಷ್ಮಿಯ ಪೂಜೆ ಮಾಡಿದರೆ ಭಕ್ತರಿಗೆ ಆಕೆಯ ಕೃಪೆ ದೊರಕುತ್ತದೆ, ಹಾಕಿದ ಪೂಜೆಯಿಂದ ಭಕ್ತಾದಿಗಳು ಕೃತಾರ್ಥರಾಗುತ್ತಾರೆ ಎನ್ನುವ ನಂಬಿಕೆ ಇದೆ. ಭಕ್ತಿಯಿಂದ ಲಕ್ಷ್ಮೀದೇವಿಯನ್ನು ಪೂಜೆ ಮಾಡಿದರೆ ಆಕೆ ಸಕಲ ಐಶ್ವರ್ಯ ಸಂಪತ್ತನ್ನು ನೀಡುತ್ತಾಳೆ. ಇನ್ನು ಈ ಬಾರಿ ಅಧಿಕಮಾಸ ಆರಂಭವಾಗಿದ್ದು ಈ ನಾಲ್ಕು ರಾಶಿಯವರು ತಮ್ಮ ಸುಖ ಸಂಪತ್ತಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಲೇಬೇಕು.

ವೃಷಭ ರಾಶಿ:

ಲಕ್ಷ್ಮಿ ದೇವಿಯ ನೆಚ್ಚಿನ ರಾಶಿ ಚಕ್ರ ಇದು. ಲಕ್ಷ್ಮಿ ದೇವಿಯ ಕೃಪೆಯಿಂದಾಗಿ ವೃಷಭ ರಾಶಿಯವರು ಅಧಿಕಮಾಸದಲ್ಲಿ ಆಕೆಯ ಪೂಜೆ ಮಾಡಿದರೆ ಅವರ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ನಿತ್ಯವೂ ಲಕ್ಷ್ಮೀದೇವಿಯನ್ನು ಪೂಜಿಸಿ ಅದರಲ್ಲೂ ವಿಶೇಷವಾಗಿ ಅಧಿಕಮಾಸ ಹಾಗೂ ಶ್ರಾವಣ ಮಾಸದ ಪ್ರತಿ ಶುಕ್ರವಾರ ತುಪ್ಪದ ದೀಪವನ್ನು ಹಚ್ಚಿ ಲಕ್ಷ್ಮಿಯನ್ನು ಭಕ್ತಿಯಿಂದ ಪ್ರಾರ್ಥಿಸಿ.

ಕರ್ಕ ರಾಶಿ:

ಈ ರಾಶಿಯವರಿಗೆ ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದ ಇದ್ದೇ ಇರುತ್ತದೆ. ಆಕೆಯ ದೆಸೆಯಿಂದ ಕಟಕ ರಾಶಿಯವರಿಗೆ ಆರ್ಥಿಕ ಸಮಸ್ಯೆ ಬರುವುದಿಲ್ಲ. ಅಧಿಕ ಮಾಸ ದ ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಪ್ರಗತಿ ಸಂಪತ್ತು ನಿಮ್ಮದಾಗುತ್ತದೆ.

ವೃಶ್ಚಿಕ ರಾಶಿ:

ಬಹಳ ಶ್ರಮವಹಿಸಿ ಕೆಲಸ ಮಾಡುವ ಜನರು ಇವರು. ಸಂಪತ್ತಿನ ಅಧಿದೇವತೆ ಲಕ್ಷ್ಮಿ ವೃಶ್ಚಿಕ ರಾಶಿಯವರ ಮೇಲೆ ಸದಾ ಕೃಪೆ ತೋರುತ್ತಾಳೆ. ಆರ್ಥಿಕವಾಗಿ ಇನ್ನಷ್ಟು ಸಬಲರಾಗಲು ಶ್ರಾವಣ ಮಾಸದ ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಯ ಮಂತ್ರವನ್ನು ಪಠಿಸಿ ಆಕೆಗೆ ಫಲ ಪುಷ್ಪಗಳನ್ನು ಅರ್ಪಿಸಿ.

ಸಿಂಹ ರಾಶಿ:

ಲಕ್ಷ್ಮಿ ದೇವಿಯ ಕೃಪೆ ಹೊಂದಿದ್ದರೆ ಸಾಕು ಯಾವುದೇ ಕೆಲಸವನ್ನು ಕೂಡ ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ಅದರಲ್ಲೂ ಸಿಂಹ ರಾಶಿಯವರಿಗೆ ಲಕ್ಷ್ಮಿದೇವಿಯ ವಿಶೇಷ ಕೃಪೆ ಇರುತ್ತದೆ. ಪ್ರಕಾರ ಸಿಂಹ ರಾಶಿಯವರು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು ಜೊತೆಗೆ ಹಾಕಿದ ಪ್ರಿಯವಾಗಿರುವ ನೈವೇದ್ಯ ನೀಡಿ ಲಕ್ಷ್ಮಿ ಮಂತ್ರವನ್ನು ಪಠಿಸಿದರೆ ಅಷ್ಟೈಶ್ವರ್ಯರು ಪ್ರಾಪ್ತವಾಗುತ್ತದೆ.

Comments are closed.