China Govt.Rules: ಸರ್ಕಾರದ ಹೊಸ ರೂಲ್ಸ್; ಮದುವೆಯಾಗದೆ ಇರುವವರೂ ಮಕ್ಕಳನ್ನು ಪಡೆಯಬಹುದು, ಮದುವೆಯಾದವರು 3 ಮಕ್ಕಳನ್ನು ಹೊಂದಬಹುದು, ಸರ್ಕಾರದಿಂದ ಸಿಗುತ್ತೆ ಸಂಪೂರ್ಣ ಬೆನಿಫಿಟ್!

China Govt.Rules: ಇನ್ನು ಮುಂದೆ ಮದುವೆಯಾಗದೇ ಇರುವ ಗಂಡು-ಹೆಣ್ಣು ಕೂಡ ಮಕ್ಕಳನ್ನು ಪಡೆಯಬಹುದು ಮದುವೆ ಆಗಿರುವ ದಂಪತಿಗಳು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬಹುದು. ಮದುವೆಗೂ ಮೊದಲು ಮಕ್ಕಳನ್ನು ಹೊಂದುವುದು ಇಲ್ಲಿ ಅಪರಾಧವಲ್ಲ ಅದರ ಬದಲು ಮದುವೆಯಾಗಿರುವ ಜೋಡಿಗೆ ಸರ್ಕಾರ (China Government) ಏನೆಲ್ಲ ಬೆನಿಫಿಟ್ ನೀಡುತ್ತದೆಯೋ ಅದೆಲ್ಲ ಸೌಲಭ್ಯಗಳನ್ನು ಕೂಡ ಇವರಿಗೂ ನೀಡಲಾಗುತ್ತದೆ. ಮೊದಲೇ ನಮ್ಮ ದೇಶದಲ್ಲಿ ಜನಸಂಖ್ಯೆ ಜಾಸ್ತಿ, ಇಂಥದ್ದೊಂದು ನಿಯಮ ಬಂದರೆ ಹೇಗೆ ಅಂತ ಟೆನ್ಶನ್ ಆಗಬೇಡಿ. ಇದು ನಮ್ಮ ದೇಶದ ನಿಯಮವಲ್ಲ. ಚೀನಾ ಸರ್ಕಾರ ಇಂತಹದೊಂದು ನಿಯಮ ಜಾರಿಗೆ ತಂದಿದೆ. ಇದನ್ನೂ ಓದಿ: Adhik Maas 2023: ಅಧಿಕ ಮಾಸದಲ್ಲಿ ಈ ನಾಲ್ಕು ರಾಶಿಯವರು ಲಕ್ಷ್ಮೀದೇವಿಯನ್ನು ಪೂಜಿಸದೆ ಇದ್ದರೆ ಭಾರಿ ದೊಡ್ಡ ನಷ್ಟವಾಗುವುದು ಖಂಡಿತ!

ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಚೀನಾ (China). ಎರಡನೆಯದಾಗಿ ಭಾರತ (India) ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎನಿಸಿಕೊಂಡಿದೆ. ಜನರಿಗೆ ಮೂಲಭೂತ ಸೌಕರ್ಯಗಳನ್ನು ಕೂಡ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ ಈ ಕಾರಣಕ್ಕೆ ಹಣದುಬ್ಬರ ಸಮಸ್ಯೆ ಕೂಡ ಉಂಟಾಗಿತ್ತು. ಇದರಿಂದಾಗಿ 1980 ರಲ್ಲಿ ಚೀನಾ ಸರ್ಕಾರ ಮಕ್ಕಳ ನೀತಿಯನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ ಮದುವೆಯಾಗಿರುವ ದಂಪತಿ ಎರಡು ಮಕ್ಕಳಿಗಿಂತ ಹೆಚ್ಚಿನ ಮಗುವನ್ನು ಪಡೆಯುವ ಹಾಗಿರಲಿಲ್ಲ. 2015ರಲ್ಲಿ ಈ ನೀತಿಯನ್ನು ತೆಗೆದುಹಾಕಲಾಯಿತು. ಆದರೂ ಚೀನಾದಲ್ಲಿ ದಂಪತಿಗಳು ಹೆಚ್ಚು ಮಕ್ಕಳನ್ನು ಪಡೆದರೆ ಅವರ ಖರ್ಚು ವೆಚ್ಚ ಭರಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುತ್ತಿರಲಿಲ್ಲ.

ಚೀನಾದ ಹೊಸ ರೂಲ್ಸ್

ಬೀಚಿಂಗ್ ಸರ್ಕಾರ ಹಾಗೂ ಸಿಚಿವಾನ್ ಪ್ರದೇಶದಲ್ಲಿ ಮದುವೆಯಾಗದೆ ಇರುವ ಜೋಡಿ ಕೂಡ ಮಕ್ಕಳನ್ನು ಪಡೆಯಬಹುದು ಎಂದು ನಿಯಮ ಜಾರಿಗೊಳಿಸಲಾಗಿದೆ. ಹೀಗೆ ಮದುವೆಯಾಗದೇ ಇರುವ ಗಂಡು ಹೆಣ್ಣು ಮಗುವನ್ನು ಪಡೆಯಲು ಬಯಸಿದರೆ ಸ್ಥಳೀಯ ಸರ್ಕಾರಿ ಕಚೇರಿಗೆ ಹೋಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮದುವೆ ಆಗಿರುವ ದಂಪತಿಗಳಿಗೆ ಸಿಗುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಇವರಿಗೂ ಕೂಡ ನೀಡಲಾಗುತ್ತದೆ ಹೆರಿಗೆ ವಿಮೆಯನ್ನು ಸರ್ಕಾರ ಮಾಡಿಸಿಕೊಡುತ್ತದೆ. ಇನ್ನು ಹೆರಿಗೆ ರಜೆ ಹೆರಿಗೆ ಸಮಯದಲ್ಲಿನ ಸಂಪೂರ್ಣ ವೇತನ ಮದುವೆ ಆಗದೆ ಮಗುವನ್ನು ಹೆತ್ತ ತಾಯಿಗೂ ಕೂಡ ಸಿಗುತ್ತದೆ. ಇದನ್ನೂ ಓದಿ: Ration Card correction: ರೇಷನ್ ಕಾರ್ಡ್ ಮನೆಯ ಯಜಮಾನಿ ಹೆಸರಿನಲ್ಲಿಲ್ಲವೇ? ಹಾಗಾದರೆ 2000, ಹಣ ಬರಲ್ಲ, ಚಿಂತೆ ಬೇಡ ಜಸ್ಟ್ ಹೀಗೆ ಮಾಡಿ  ನಿಮ್ಮ ಖಾತೆಗೆ ಹಣ ಪ್ರತಿ ತಿಂಗಳು ಬರುತ್ತದೆ

ಚೀನಾದಲ್ಲಿ ಈ ಹಿಂದೆ ಜಾರಿಗೊಳಿಸಲಾಗಿದ್ದ ಮಕ್ಕಳ ನಿಯಮ ಹಾಗೂ ಕರೋನಾದ ಸಾವು ನೋವು ಗಳಿಂದಾಗಿ ಜನನ ಪ್ರಮಾಣವೂ ಕಡಿಮೆಯಾಗಿದೆ ಜೊತೆಗೆ ಜನಸಂಖ್ಯೆ ಕೂಡ ಇಳಿಮುಖವಾಗಿದೆ. ಹಾಗಾಗಿ ಜನಸಂಖ್ಯೆಯಲ್ಲಿ ಸಮತೋಲನ ಕಾಪಾಡಿಕೊಳ್ಳುವ ದೃಷ್ಟಿಯಿಂದ ಚೀನಾ ಈ ಹೊಸ ರೂಲ್ಸ್ ಜಾರಿಗೆ ತಂದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

Comments are closed.