Loan Transfer: ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಗೆ ಸಾಲ ವರ್ಗಾವಣೆ ಮಾಡಿಕೊಂಡರೆ ಸಾಲದ ಮೊತ್ತ ಕಡಿಮೆಯಾಗುತ್ತೆ ಹೇಗೆ ಗೊತ್ತಾ?

Loan Transfer: ಸಾಕಷ್ಟು ಬಾರಿ ಅನಿವಾರ್ಯ ಕಾರಣಗಳಿಂದಾಗಿ ವೈಯಕ್ತಿಕ ಸಾಲ (Personal loan) ವನ್ನು ಯಾವುದಾದರೂ ಬ್ಯಾಂಕಿನಲ್ಲಿ(Bank) ತೆಗೆದುಕೊಳ್ಳುತ್ತೇವೆ ಸ್ವಲ್ಪ ಸಮಯದ ನಂತರ ಆ ಬ್ಯಾಂಕ್ ನಲ್ಲಿ ಬಡ್ಡಿದರ ಹೆಚ್ಚು ಎನಿಸುತ್ತದೆ. ಪ್ರತಿ ತಿಂಗಳು ಪಾವತಿಸಬೇಕಾಗಿರುವ ಇಎಂಐ (EMI) ಮೊತ್ತ ಕೂಡ ಜಾಸ್ತಿ ಇರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಸಾಲ ತೆಗೆದುಕೊಂಡ ಬ್ಯಾಂಕ್ನಿಂದ ಬ್ಯಾಲೆನ್ಸ್ ಇರುವ ಮೊತ್ತವನ್ನು ಮತ್ತೊಂದು ಬ್ಯಾಂಕ್ ಗೆ ವರ್ಗಾವಣೆ ಮಾಡಿಕೊಳ್ಳಬಹುದು. ಇದನ್ನೂ ಓದಿ: Ration Card correction: ರೇಷನ್ ಕಾರ್ಡ್ ಮನೆಯ ಯಜಮಾನಿ ಹೆಸರಿನಲ್ಲಿಲ್ಲವೇ? ಹಾಗಾದರೆ 2000, ಹಣ ಬರಲ್ಲ, ಚಿಂತೆ ಬೇಡ ಜಸ್ಟ್ ಹೀಗೆ ಮಾಡಿ  ನಿಮ್ಮ ಖಾತೆಗೆ ಹಣ ಪ್ರತಿ ತಿಂಗಳು ಬರುತ್ತದೆ

ಸಾಲ ವರ್ಗಾವಣೆ (Loan Transfer) ಯಿಂದ ಏನೂ ಪ್ರಯೋಜನ

ನೀವು ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಗೆ ನಿಮ್ಮ ವೈಯಕ್ತಿಕ ಸಾಲವನ್ನು ವರ್ಗಾವಣೆ ಮಾಡಿಕೊಂಡರೆ ಪ್ರತಿ ತಿಂಗಳು ಭರಿಸಬೇಕಾಗಿರುವ ಇಎಂಐ ಮೊತ್ತ ಕಡಿಮೆಯಾಗುತ್ತದೆ. ಇಂದಿನ ಬ್ಯಾಂಕ್ ಗಿಂತಲೂ ಕಡಿಮೆ ಬಡ್ಡಿ ದರದಲ್ಲಿ ಹೊಸ ಬ್ಯಾಂಕ್ ನಲ್ಲಿ ಲೋನ್ ಪಾವತಿ ಮಾಡಬಹುದು. ಇದರ ಜೊತೆಗೆ ಸಾಲದ ಮರುಪಾವತಿಯ ಅವಧಿಯನ್ನು ಕೂಡ ವಿಸ್ತರಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ಪ್ರತಿ ತಿಂಗಳು ಹೊರೆ ಎಣಿಸುವ ಈ ಎಂ ಐ ಮೊತ್ತ ಕಡಿಮೆಯಾಗುತ್ತದೆ.

ಬ್ಯಾಂಕ್ ನಿಂದ ಬ್ಯಾಂಕ್ ಗೆ ಸಾಲ ವರ್ಗಾವಣೆ ಮಾಡುವುದು ಹೇಗೆ

  • ಮೊದಲನೇದಾಗಿ ನೀವು ಹಳೆಯ ಬ್ಯಾಂಕ್ ನಿಂದ ಹೊಸ ಬ್ಯಾಂಕ್ ಗೆ ಸಾಲ ವರ್ಗಾವಣೆ ಮಾಡಲು ಹಳೆಯ ಬ್ಯಾಂಕ್ ನಿಂದ ಎನ್ ಓ ಸಿ ಪಡೆದುಕೊಳ್ಳಬೇಕು
  • ಲೂನ ತೆಗೆದುಕೊಳ್ಳುವಾಗ ಯಾವುದಾದರೂ ಆಸ್ತಿ ಪತ್ರ ಅಡವಿಟ್ಟಿದ್ದರೆ ಅದನ್ನು ಮರು ಸ್ವಾಧೀನ ಪಡಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕು.
  • ಬೇಕಾಗಿರುವ ಎಲ್ಲಾ ದಾಖಲೆಗಳನ್ನು ನೀಡಿ ನೀವು ಹಳೆಯ ಬ್ಯಾಂಕ್ ನಲ್ಲಿ ಸಾಲ ಮುಕ್ತರಾಗಿದ್ದೀರಿ ಎನ್ನುವ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕು.
  • ನಂತರ ಹೊಸ ಬ್ಯಾಂಕ್ ಗೆ ನಿಮ್ಮ ಸಾಲದ ಉಳಿದಿರುವ ಮೊತ್ತವನ್ನು ವರ್ಗಾವಣೆ ಮಾಡಿಕೊಳ್ಳಬಹುದು.
  • ಅಲ್ಲಿ ತಿಂಗಳಿಗೆ ಪಾವತಿಸುವ ಇಎಂಐ ದರ ಕಡಿಮೆ ಇರುತ್ತದೆ. ಇಲ್ಲಿ ನಿರ್ವಹಣಾ ವೆಚ್ಚ ಎಂದು ಕಡಿಮೆ ಮೊತ್ತದ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ನಿಮ್ಮ ಸಾಲದ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು.

ಆದರೆ ನೆನಪಿಡಿ ಹೀಗೆ ವರ್ಗಾವಣೆ ಮಾಡುವಾಗ ಯಾವ ಬ್ಯಾಂಕ್ ನಲ್ಲಿ ವರ್ಗಾವಣೆ ಮಾಡುತ್ತಿರೋ ಅಲ್ಲಿಯ ಒಟ್ಟಾರೆ ಬಡ್ಡಿದರ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಬ್ಯಾಂಕ್ ನಲ್ಲಿ ನೀವು ಲೋನ್ ಮುಕ್ತರಾಗಿದ್ದೀರಿ ಎಂದು ನಿಮ್ಮ ಖಾತೆಯನ್ನು ಕ್ಲೋಸ್ ಮಾಡಿಸಿ.

Comments are closed.