Nisha narasappa Fraud case: ಇನ್ನೊಂದು ಹಂತಕ್ಕೆ ತಲುಪಿದ ನಿಶಾ ನರಸಪ್ಪ ವಂಚನೆ ಕೇಸ್; ಪುಟಾಣಿ ವಂಶಿಕಾ ಹೆಸರು ಬಳಸಿಕೊಂಡು ಇಷ್ಟೇಲ್ಲಾ ಆಡ್ಬಿಟ್ರಾ?

Nisha narasappa Fraud case: ಮಾಸ್ಟರ್ ಆನಂದ ಅವರ ಪುತ್ರಿ ಪುಟಾಣಿ ವಂಶಿಕಾಳ (Vamshika) ಹೆಸರನ್ನ ಬಳಸಿಕೊಂಡು ಲಕ್ಷಾಂತರ ಹಣ ವಂಚನೆ ಮಾಡಿದ ನಿಶಾ ನರಸಪ್ಪ ಅವರ ಪ್ರಕರಣದ ಬಗ್ಗೆ ನಿಮಗೆಲ್ಲ ಈಗಾಗಲೇ ಗೊತ್ತಿರುತ್ತೆ. ಆದರೆ ಇದೀಗ ಈ ಕೇಸಿಗೆ ಇನ್ನೊಂದು ಟ್ವಿಸ್ಟ್ ಸಿಕ್ಕಿದ್ದು ಪೊಲೀಸರಿಗೆ ಶಾಕ್ ತರಿಸಿದೆ.

ಲಕ್ಷವಲ್ಲ ಕೋಟಿ ವಂಚನೆ ಮಾಡಿದ ನಿಶಾ ನರಸಪ್ಪ

ನಿಶಾ ನರಸಪ್ಪ (Nisha narasappa) ಎನ್ನುವ ಯುವತಿ, ಮಾಡಿದ್ದಾಳೆ ಎನ್ನಲಾದ ಹಲವು ವಂಚನೆಗಳು ಬಯಲಿಗೆ ಬಂದಿವೆ. ಮೋಸ ಹೋದ ಪಾಲಕರು ಅವರ ಮನೆಗೆ ಹೋಗಿ ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾರೆ. ಮಾಸ್ಟರ್ ಆನಂದ್ (Master Anand)  ಅವರ ಮಗಳು ಪುಟಾಣಿ ವಂಶಿಕಾಳನ್ನು ಪ್ರಮೋಟರ್ ಆಗಿ ನಿಶಾ ನರಸಪ್ಪ ಬಳಸಿಕೊಂಡಿದ್ದರು. ನಿಮ್ಮ ಮಕ್ಕಳ ಫೋಟೋ ಶೂಟ್ (Photo Shoot) ಮಾಡಿಸುತ್ತೇವೆ, ವಂಶಿಕಾಳಂತೆ ಟಿವಿ ಚಾನಲ್ ಗಳಲ್ಲಿ ಫೇಮಸ್ ಮಾಡುತ್ತೇವೆ ಎಂದು ಹೇಳಿಕೊಂಡು ನಿಶಾ ಹಲವರಿಂದ ಹಣ ಲಪಟಾಯಿಸಿದ್ದಾಳೆ. ನಿಶಾ 40 ಲಕ್ಷ ರೂಪಾಯಿಗಳನ್ನು ಮೋಸ ಮಾಡಿದ್ದಾರೆ ಎಂದು ಹೇಳಲಾಗಿತ್ತು ಆದರೆ ಈಗ ಅವರ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿದ ಪೊಲೀಸರಿಗೆ ಶಾಕ್ ಕಾದಿತ್ತು.

ಹೌದು, ನಿಶಾ ಖಾತೆಯಲ್ಲಿ ಈಗ ಇರುವುದು ಕೇವಲ 8000ರೂ. ಗಳು ಆದರೆ, ಆಕೆ ವಂಚನೆ ಮಾಡಿದ್ದು 40 ಲಕ್ಷವಲ್ಲ, ಬರೋಬ್ಬರಿ ಎರಡು ಕೋಟಿ ವಹಿವಾಟು ಮಾಡಿರುವುದು ಬ್ಯಾಂಕ್ ಖಾತೆ ಚೆಕ್ ಮಾಡಿದಾಗ ತಿಳಿದುಬಂದಿದೆ. 20% ಬಡ್ಡಿ ಕೊಡುತ್ತೇನೆ ಎಂದು ಹೇಳಿ ಹಲವರಿಂದ ನಿಶಾ ಹಣ ಪಡೆದುಕೊಂಡಿದ್ದಾಳೆ. ಪಾಲಕರಿಗೂ ತಿಳಿಸದಂತೆ ಮೋಜು ಮಸ್ತಿ ಪಾರ್ಟಿ ಮಾಡಿಕೊಂಡು ಹಣ ದುಂದು ವೆಚ್ಚ ಮಾಡಿದ್ದಾಳೆ ಈಗ ಪಾಲಕರು ಹಣ ಹಿಂತಿರುಗಿ ಕೇಳಿದರೆ ಅದನ್ನು ಕೊಡಲು ನಿಶಾ ಸಿದ್ಧಳಿಲ್ಲ. ಹೀಗಾಗಿ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟ ಹಾಗೆ ತನಿಖೆ ಚುರುಕುಗೊಂಡಿದೆ.

ಇನ್ನು ನಿಶಾ ನರಸಪ್ಪ ಅವರಿಗೆ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದ ವಂಶಿಕಾಳ ತಾಯಿ ಯಶಸ್ವಿನಿ ಕೂಡ, ನಾವು ಆಕೆ ಮೋಸ ಮಾಡುತ್ತಿದ್ದಾಳೆ ಎಂದು ತಿಳಿಯುತ್ತಿದ್ದ ಹಾಗೆ ಪ್ರಮೋಷನ್ ಮಾಡುವುದನ್ನು ನಿಲ್ಲಿಸಿದ್ದೇವೆ. ನೀವು ಯಾರು ಇಂತಹ ವಂಚನೆಗೆ ಬಲಿಯಾಗಬೇಡಿ ಎಂದು ಮಾಧ್ಯಮದ ಮುಂದೆ ಹೇಳಿದ್ದರು. ಜೊತೆಗೆ ಈವರೆಗೆ ಯಾರೆಲ್ಲಾ ಮೋಸ ಹೋಗಿದ್ದಾರೋ ಆ ಪಾಲಕರ ಜೊತೆಗೆ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ಕೂಡ ನೀಡಿದ್ದಾರೆ.

Comments are closed.