Best 5 Cars: ದೇಶದ ಆಟೋ ಮಾರುಕಟ್ಟೆಯನ್ನು ಆಳಲು ಬಂದಿರುವ ಬೆಸ್ಟ್ 5 ಕಾರುಗಳು ಇವು; ನೋಡಿದ್ರೆ ಫಿದಾ ಆಗ್ತೀರಾ!

Best 5 Cars: ಭಾರತದ ಕಾರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಹಳ ಪ್ರಖ್ಯಾತಿ ಆಗುತ್ತಿರುವ ಕಾರುಗಳ ಸೆಗ್ಮೆಂಟ್ ಎಂದರೆ ಎಸ್,ಯು.ವಿ ಗಳು ಮತ್ತು ಮಿನಿ ಎಸ್.ಯು.ವಿ. ಗಳು. ಇದನ್ನೇ ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಎಲ್ಲಾ ಕಾರು ತಯಾರಕರು ಹೊಸ ಎಸ್.ಯು.ವಿ ಕಾರುಗಳನ್ನು ತಯಾರಿಸುತ್ತಿದ್ದಾರೆ. ಇದರ ಜೊತೆಗೆ ಬೇರೆ ದೇಶಗಳಲ್ಲಿದ್ದ ಕಾರುಗಳನ್ನೂ ಭಾರದತಲ್ಲಿ ಲಾಂಚ್ ಮಾಡಲಾಗುತ್ತಿದೆ.
ಈಗ ಲಾಂಚ್ ಆಗಲು ಇಂತಹುದೇ ಹಲವು ಎಸ್.ಯು.ವಿ ಗಳು ತಯಾರಾಗಿವೆ. ಯಾವ ಬ್ರಾಂಡ್ ನ ಯಾವ ಕಾರುಗಳು ಲಾಂಚ್ ಆಗುತ್ತಿವೆ ಎಂಬ ವಿವರ ಇಲ್ಲಿದೆ. ಇದರಲ್ಲಿ ನಿಮ್ಮ ಮುಂದಿನ ಡ್ರೀಮ್ ಕಾರು ಇದೆಯೆ ಚೆಕ್ ಮಾಡಿ.
ಕಿಯಾ ಸೆಲ್ಟೋಸ್ 2023
ಕಿಯಾ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತಾರ ಮಾಡಿದ್ದು ಸೆಲ್ಟೋಸ್ ಮೂಲಕ ಸೆಲ್ಟೋಸ್ ಕಾರು ತನ್ನ ಸ್ಪೇಸ್ ಮತ್ತು ಪವರ ಕಾರಣದಿಂದಾಗಿ ಪ್ರಖ್ಯಾತವಾಗಿತ್ತು. ಅದೇ ತರಹ ಹಲವಾರು ಜನರಿಗೆ ಇದರ ಲುಕ್ಸ್ ಬಹಳ ಇಷ್ಟವಾಗಿತ್ತು. ಒಟ್ಟಾರೆ ಒಳ್ಳೆಯ ಪ್ಯಾಕೇಜ್ ಆಗಿತ್ತು ಸೆಲ್ಟೋಸ್. ಈಗ ಇದರ ಅಪ್ ಡೇಟೆಡ್ ಮಾಡೆಲ್ ಲಾಂಚ್ ಆಗಿದೆ. ಈಗ ಸೆಲ್ಟೋಸ್ ಎ.ಡಿ.ಎ.ಎಸ್. ಸಾಮರ್ಥ್ಯದೊಂದಿಗೆ ಲಾಂಚ್ ಆಗಿದೆ. ಪವರ್ ನಲ್ಲೂ ಅಪ್ ಗ್ರೇಡ್ ಆಗಿರುವ ಸೆಲ್ಟೋಸ್ ಹೊಸ ಟರ್ಬೋ ಎಂಜಿನ ನ ಜೊತೆಗೆ ಲಾಂಚ್ ಆಗಿದೆ. ಜೊತೆಗೆ ಇಂಟೀರಿಯರ್ ಮತ್ತು ಫೀಚರ್ಸ್ ಕೂಡ ಹೊಸತನವನ್ನು ಕಂಡಿದೆ.
ಹೋಂಡಾ ಎಲಿವೇಟ್
ಹೋಂಡಾ ಕಾರುಗಳಿಗೆ ತನ್ನದೇ ಆದ ಜನಪ್ರೀಯತೆ ಇದೆ. ಹೋಂಡಾ ಸಿಟಿ ಕಾರಿನ ಲುಕ್ಸ್ ಅನ್ನು ಇಷ್ಟಪಡದವರು ಬಹಳ ಕಮ್ಮಿ ಜನರಿರಬಹುದು. ದೊಡ್ಡ ಎಸ್.ಯು.ವಿ ಗಳನ್ನು ಮಾತ್ರ ಹೊಂದಿದ್ದ ಹೋಂಡಾ ಕಾರುಗಳ ಲೈನ್ ಅಪ್ ನಲ್ಲಿ ಈಗ ಮಿಡ್ ರೇಂಜ್ ಎಸ್.ಯು,ವಿ ಸೇರಿಕೊಳ್ಳಲಿದೆ. ಎಲಿವೇಟ್ ಕಾರು ಹೋಂಡಾದ ಸೆನ್ಸಿಂಗ್ ತಂತ್ರಜ್ಞಾನವನ್ನು ಹೊಂದಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಲಾಂಚ್ ಆಗಿರುವ ಎಲಿವೇಟ್ ಹೋಂಡಾದ ಮುಂದಿನ ಸಿಟಿ ಕಾರು ಆಗಲಿದೆಯೇ ಕಾದು ನೋಡಬೇಕಿದೆ.
ಹ್ಯುಂಡಾಯಿ ಏಕ್ಸ್ ಟರ್
ಹ್ಯೂಂಡಾಯಿ ಈಗಾಗಲೇ ಕ್ರೆಟಾ ಮತ್ತು ವೆನ್ಯೂ ಕಾರುಗಳೊಂದಿಗೆ ತನ್ನ ಎಸ್.ಯು.ವಿ ರೇಂಜ್ ಹೊಂದಿದ್ದು ಈಗ ಇವುಗಳಿಂತ ಸಣ್ಣ ಕಾರು ಹ್ಯೂಂಡಾಯಿ ಹೊರತಂದಿದೆ. ಎಕ್ಸ್. ಟರ್ ಕಾರು ಪಂಚ್ ಮತ್ತು ಸಿಟ್ರಿಯಾನ್ ಸಿ – 3 ಗೆ ಪ್ರಬಲ ಪೈಪೋಟಿ ನೀಡುವ ಎಲ್ಲಾ ಸಾಧ್ಯತೆಗಳನ್ನು ಹೊಂದಿದೆ. ಚಿಕ್ಕದಾಗಿದ್ದರೂ ಫೀಚರ್ ನಿಂದ ತುಂಬಿರುವ ಕಾರು ಇದಾಗಿದೆ. ಜೊತೆಗೆ ಸಿ.ಎನ್. ಜಿ. ಆಯ್ಕೆಯನ್ನೂ ನೀಡಲಿದೆ.
ಸಿಟ್ರಿಯಾನ್ ಸಿ – 3 ಏರ್ ಕ್ರಾಸ್
ಫ್ರೆಂಚ್ ಕಾರು ತಯಾರಕರರಾದ ಸಿಟ್ರಿಯಾನ್ ತನ್ನ ಸಿ-3 ಮಾಡೆಲ್ ನ ಕ್ರಾಸ್ ವೇರಿಯಂಟ್ ನ ಜೊತೆಗೆ ಇತರ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ. 5+2 ಸೀಟಿಂಗ್ ನ ಜೊತೆಗೆ ಲಾಂಚ್ ಆಗಲಿರುವ ಈ ಕಾರು ಕೇವಲ ಪೆಟ್ರೋಲ್ ಇಂಧನ ಆಯ್ಕೆಯನ್ನು ನೀಡಲಿದೆ.
2023 ಮರ್ಸಿಡಿಸ್ ಜಿ.ಎಲ್.ಸಿ
ಜರ್ಮನ್ ಕಾರು ತಯಾರಕ ಮರ್ಸಿಡಿಸ್ ತನ್ನ ಅತೀ ಹೆಚ್ಚು ಮಾರಾಟವಾಗುವ ಜಿ.ಎಲ್.ಸಿ ಯ ಹೊಸ ಮಾದರಿಯೊಂದಿಗೆ ತನ್ನ ಜನಪ್ರೀಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಆಸೆಯಲ್ಲಿದೆ. ಆಗಸ್ಟ್ ಆರಂಭದಲ್ಲಿ ಲಾಂಚ್ ಆಗಲಿದೆ ಎನ್ನಲಾಗುತ್ತಿರುವ ಈ ಕಾರು ಮೈಲ್ಡ್ ಹೈಬ್ರೀಡ್ ಡೀಸೆಲ್ ಎಂಜಿನ ನ ಆಯ್ಕೆಯೊಂದಿದೆ ಬರಲಾಗುತ್ತದೆ ಎನ್ನಲಾಗಿದೆ.

Comments are closed.