Honda Bike: ಬರ್ತಿದೆ ಹೊಸ ಹೋಂಡಾ ಬೈಕ್; ಇನ್ನೇನಿದ್ರೂ ಹೋಂಡಾದ್ದೇ ಹವಾ! ಏನೆಲ್ಲಾ ವೈಶಿಷ್ಟ್ಯತೆಗಳು ಇವೆ ಗೊತ್ತೇ?

Honda Bike: ಹೋಂಡಾ ಬೈಕುಗಳು ಭಾರತದಲ್ಲಿ ಹೀರೋ ದ ಜೊತೆ ಕೊಲಾಬರೇಷನ್ ನಿಲ್ಲಿಸಿದ ಮೇಲೂ ಒಳ್ಳೆಯ ಹೆಸರನ್ನು ಮುಂದುವರೆಸಿಕೊAಡು ಬಂದಿವೆ. ಆಕ್ಟಿವಾ ಅಂತೂ ಅದೆಷ್ಟೋ ಜನರೇಷನ್ ಮುಗಿಸಿ ಇನ್ನೂ ಸ್ಕೂಟರ್ ಸೆಗ್ಮೆಂಟ್ ನ ಲೀಡರ್ ಆಗಿದೆ.
ಹೊಸ ಬೈಕ್ ಲಾಂಚ್:
ಹೋಂಡಾ ತನ್ನ ಬೈಕ್ ಸಿರೀಸ್ ಅನ್ನು ಇನ್ನೊಂದು 160 ಸಿ.ಸಿ. ಯ ಬೈಕ್ ನೊಂದಿಗೆ ಮತ್ತಷ್ಟು ಬಲಿಷ್ಟಗೊಳಿಸಲು ಪ್ರಯತ್ನಿಸುತ್ತಿದೆ. ಆಗಸ್ಟ್ ಎರಡರಂದು ತನ್ನ ಬೈಕ್ ಅನ್ನು ಲಾಂಚ್ ಮಾಡುತ್ತಿದೆ. ಇದಕ್ಕೂ ಮುನ್ನ ಟೀಸರ್ ನಲ್ಲಿ ಬೈಕ್ ನ ಮುಂಭಾಗ ಮತ್ತು ಹಿಂಭಾಗವನ್ನು ತೋರಿಸಿತ್ತು. ಕೆಲವು ವರದಿಗಳ ಪ್ರಕಾರ ಹೊಸದಾಗಿ ಲಾಂಚ್ ಆಗುತ್ತಿರುವ ಈ ಬೈಕಿಗೆ ಎಸ್.ಪಿ. 160 ಎಂದು ಹೆಸರಿಡಲಾಗಿದೆ. ಬೈಕ್ ನ ಹೆಸರು ಏನೇ ಆಗಲಿ ಲಾಂಚ್ ಗೂ ಮುನ್ನ ಭಾರೀ ಸದ್ದು ಮಾಡುತ್ತಿರುವುದಂತೂ ನಿಜ.
ಪವರ್ ಟ್ರಾಸ್ನ್ಮಿಷನ್ ಮತ್ತು ಎಂಜಿನ್:
ಈ ಬೈಕಿನಲ್ಲಿ ಹೋಂಡಾದ ಚಿರಪರಿಚಿತ ಮತ್ತು ಟ್ರೆöÊಡ್ ಆನ್ಡ್ ಟೆಸ್ಟೆಡ್ 162.7 ಸಿ.ಸಿ. ಯ ಎಂಜಿನ್ ಇರಲಿದೆ ಎಂದು ಹೇಳಲಾಗಿದೆ. ಇದು 7500 ಆರ್.ಪಿ.ಎಮ್ ನಲ್ಲಿ 12.9 ಬಿ.ಎಚ್.ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಮತ್ತು 5,500 ಆರ್.ಪಿ.ಎಮ್ ನಲ್ಲಿ 14 ಎನ್.ಎಮ್. ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು ಇದರ ಇಂಧನ ಟ್ಯಾಂಕ್ ನ ಸಾಮರ್ಥ್ಯ 12 ಲೀಟರ್ ಇರಬಹುದು ಎಂದು ಊಹಿಸಲಾಗಿದೆ.
ವಿನ್ಯಾಸ:
ಈ ವರೆಗೆ ತೋರಿಸಲಾದ ಟೀಸರ್ ನಂತೆ ಇದರಲ್ಲಿ ಹಾಲೋಜಿನ್ ಟರ್ನ್ ಇಂಡಿಕೇಟರ್ ಅನ್ನು ಬಳಸಲಾಗಿದೆ. ಸಿಂಗಲ್ ಪೀಸ್ ಗ್ರಾಬ್ ರೈಲ್ ಇದೆ. ಸೈಡ್ ಮೌಂಟೆಡ್ ಎಕ್ಸಾಸ್ಟ್ ಇರಲಿದೆ ಹಾಗೂ ಇನ್ನೊಂದು ಭಾಗದಲ್ಲಿ ಪಿಲಿಯನ್ ರೆಸ್ಟ್ ಗಾರ್ಡ್ ಅನ್ನು ಕಾಣಬಹುದಾಗಿದೆ. ನಿರೀಕ್ಷೆ ನಿಜವಾದರೆ ಇದರಲ್ಲಿ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬರಲಿದೆ. ಸ್ಪೋರ್ಟ್ಸ್ ಲುಕ್ ಇರುವ ಈ ಬೈಕ್ ದಿನನಿತ್ಯದ ಓಡಾಟಕ್ಕಾಗಿ ಡಿಸೈನ್ ಮಾಡಲಾದ ಬೈಕಿನಂತೆ ಕಾಣುತ್ತಿದೆ.
ಎಸ್.ಪಿ. 125 ನ ಡಿಸೈನ್ ಅನ್ನೇ ಬಳಸಲಾಗಿದ್ದು ಪವರ್ ಟ್ರೆöÊನ್ ಮಾತ್ರ ಯುನಿಕಾರ್ನ್ 160 ಇಂದ ಪಡೆಯಲಾಗಿದೆ ಎಂದು ಹೇಳಲಾಗಿದೆ. ಮುಂದೆ ಟೆಲಿಸ್ಕಾಪಿಕ್ ಫೋರ್ಕ್್ಸ ಇದ್ದು ಹಿಂಭಾಗ ಮೋನೋಶಾಕ್ ಸಸ್ಪೆನ್ಷನ್ ಅನ್ನು ಹೊಂದಿದೆ. ಬ್ರೇಕಿಂಗ್ ನಲ್ಲಿ ಮುಂದೆ ಡಿಸ್ಕ್ ಬ್ರೇಕ್ ಇದ್ದರೆ ಹಿಂದೆ 160 ಎಮ್.ಎಮ್ ನ ಡ್ರಮ್ ಬ್ರೇಕ್ ಅನ್ನು ಬೈಕ್ ಹೊಂದಿದೆ.
ಕಾಂಪಿಟೇಷನ್ ಮತ್ತು ಬೆಲೆ:
ಈ ಬೈಕ್ ಬಜಾಜ್ ಪಲ್ಸರ್ 150, ಯಮಹಾ ಏಫ್. ಝೆಡ್. ಮತ್ತು ಸುಝುಕಿ ಜಿಕ್ಸರ್ 155 ನ ಜೊತೆ ಕಾಂಪೀಟ್ ಮಾಡಲಿರುವುದರಿಂದ ಈ ಬೈಕುಗಳ ಪ್ರೈಸ್ ರೇಂಜ್ ಆದ 1.10 – 1.15 ಲಕ್ಷ ಎಕ್ಸ್ ಷೋ ರೂಮ್ ಬೆಲೆಯಲ್ಲಿ ಈ ಬೈಕ್ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

Comments are closed.