RBI Rules: ನಿಮ್ಮ ಬಳಿ ಇರುವ ನೋಟುಗಳಲ್ಲಿ ಸ್ಟಾರ್ ಚಿಹ್ನೆ ಇದ್ಯಾ? ಹಾಗಾದ್ರೆ ಅಂತಹ ನೋಟುಗಳನ್ನು ಏನು ಮಾಡಬೇಕು ಗೊತ್ತೇ?

RBI Rules: ಭಾರತೀಯ ರಿಸರ್ವ್ ಬ್ಯಾಂಕ್ (Reserve bank of India) ಎರಡು ಸಾವಿರ ರೂಪಾಯಿಗಳ ನೋಟುಗಳನ್ನು ರದ್ದುಗೊಳಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ ಸೆಪ್ಟೆಂಬರ್ 30ರವರೆಗೆ ಸಾರ್ವಜನಿಕರು ತಮ್ಮ ಬಳಿ ಇರುವ ಎರಡು ಸಾವಿರ ರೂಪಾಯಿಗಳ ನೋಟುಗಳನ್ನು (2000rs note ban) ಹತ್ತಿರದ ಬ್ಯಾಂಕ್ ಗೆ ಕೊಟ್ಟು ಬೇರೆ ಹಣವನ್ನು ಪಡೆದುಕೊಳ್ಳಬೇಕು. ಸೆಪ್ಟೆಂಬರ್ 30ರ ನಂತರ ನೋಟುಗಳು ಯಾವುದೇ ಕಾರಣಕ್ಕೂ ಚಲಾವಣೆ ಆಗುವುದಿಲ್ಲ. ಯಾವ ಮೌಲ್ಯವು ಇರುವುದಿಲ್ಲ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಈಗ ಮತ್ತೊಂದು ಸುದ್ದಿ ಹಬ್ಬಿತು ಜನರು ಇದರಿಂದ ಸಿಕ್ಕಾಪಟ್ಟೆ ಆತಂಕಗೊಂಡಿದ್ದಾರೆ ಇಷ್ಟಕ್ಕೂ ಜನರ ಆತಂಕಕ್ಕೆ ಕಾರಣವಾಗಿರುವ ಆ ವಿಷಯ ಏನು ನೋಡೋಣ. ಇದನ್ನೂ ಓದಿ: South Film Star: ಇಂದೆನೋ ದೊಡ್ದ ಸ್ಟಾರ್ ನಟ; ಆದ್ರೆ ಅಂದು ಇದೇ ನಟ ಏನು ಕೆಲಸ ಮಾಡ್ತಿದ್ದ ಗೊತ್ತೇ? ಎಲ್ಲಾ ಹಣೆಬರಹ ಕಣ್ರೀ!

ಹರಡುತ್ತಿರುವ ಊಹಾಪೋಹಗಳಿಗೆ ಆರ್‌ಬಿಐ ಸ್ಪಷ್ಟನೆ

ಸಾಮಾನ್ಯವಾಗಿ ಇತ್ತೀಚಿಗೆ 20ರ, 50, 100, 500 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ ಸ್ಟಾರ್ ಚಿನ್ಹೆ (Star symbol)  ಇರುವುದು ಕಂಡುಬಂದಿದೆ ಹೀಗೆ ಸ್ಟಾರ್ ಚಿನ್ಹೆ ಇದ್ದರೆ ಅದು ನಕಲಿ ನೋಟು ಎಂದು ಜನರ ನಡುವೆ ಬಿಂಬಿತವಾಗಿದ್ದು ಯಾರು ಇಂತಹ ನೋಟುಗಳನ್ನು  ಬೇರೆಯವರಿಂದ ತೆಗೆದುಕೊಳ್ಳುತ್ತಿಲ್ಲ ಇದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಹಣದ ಚಲಾವಣೆಗೆ ಸಮಸ್ಯೆ ಕೂಡ ಉಂಟಾಗಿದೆ. ಆದರೆ ಆರ್‌ಬಿಐ ಗುರುತಿನ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ ಅದರಿಂದ ಯಾವುದೇ ತೊಂದರೆಯೂ ಇಲ್ಲ ಇದು ನಕಲಿ ನೋಟುಗಳು ಅಲ್ಲ. ನೋಟು ಮುದ್ರಣದಲ್ಲಿ ಆಗಿರುವ ತಪ್ಪಿನಿಂದಾಗಿ ಸ್ಟಾರ್ ಚಿನ್ಹೆ ಉಂಟಾಗಿರಬಹುದು ಎಂದು ಆರ್‌ಬಿಐ ತಿಳಿಸಿದೆ. ಹಾಗಾಗಿ ನಿಮ್ಮ ಬಳಿ ಇರುವ ನೋಟುಗಳಲ್ಲಿ ಸರಣಿ ಸಂಖ್ಯೆಗಳ ನಡುವೆ ಒಂದು ಸ್ಟಾರ್ ಚಿಹ್ನೆ ಇದ್ದರೆ ತಿಳಿದುಕೊಳ್ಳುವುದು ಬೇಡ. ಇದನ್ನೂ ಓದಿ: Petrol Pumps Frauds: ನಿಮಗೆ ಗೊತ್ತಿಲ್ಲದ ಹಾಗೆ ಪೆಟ್ರೋಲ್ ಬಂಕ್ ನಲ್ಲಿ ಭಾರಿ ಮೊಸ ಆಗಬಹುದು ಎಚ್ಚರ; ತಿಳಿದುಕೊಳ್ಳೋಕೆ ಇಲ್ಲಿದೆ ಸುಲಭ ಟ್ರಿಕ್ಸ್!

ಮರು ಮುದ್ರಣವಾಗಲಿದೆ ನೋಟುಗಳು

ಇನ್ ಸ್ಟಾರ್ ಚಿನ್ನಿ ಇರುವ ನೋಟುಗಳನ್ನು ಬದಲಿಸಲು ಹಾಗೂ ಮರುಮುದ್ರಣ ಮಾಡಲು ಆರ್‌ಬಿಐ ಸೂಚಿಸಿದೆ. ಸ್ಟಾರ್ ಇರುವ ನೋಟುಗಳು ಬ್ಯಾಂಕ್ ಗೆ ಬಂದರೆ ಅದನ್ನು ಕೂಡ ಮರು ಮುದ್ರಣಕ್ಕೆ ಕಳುಹಿಸಲಾಗುವುದು. 2006ರಲ್ಲಿ ನೂರು ರೂಪಾಯಿಗಳ ನೋಟುಗಳಲ್ಲಿ ಇಂತಹ ಮುದ್ರಣ ದೋಷ ಕಂಡುಬಂದಿತ್ತು. ಆಗ ಬಂಡಲ್ ಕಟ್ಟಲೇ ನೂರು ರೂಪಾಯಿ ನೋಟುಗಳನ್ನು ಹಿಂಪಡೆದ ಆರ್‌ಬಿಐ ಮರುಮುದ್ರಣ ಮಾಡಿತ್ತು. ಅದೇ ರೀತಿ ಈಗ ಯಾವುದೇ ನೋಟುಗಳಲ್ಲಿ ಸೀರೀಸ್ ಸಂಖ್ಯೆಗಳ ಮಧ್ಯೆ ಸ್ಟಾರ್ ಚಿನ್ಹೆ ಇದ್ದರೆ ಅದು ಕೇವಲ ಮುದ್ರಣ ದೋಷ ಅಷ್ಟೇ ಹೊರತು ನಕಲಿ ಎಲ್ಲ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.

Comments are closed.