Arecanut: ಭೂತಾನ್ ನಿಂದ ಆಮದಾಗುತ್ತಿರುವ ಅಡಿಕೆ ಖರೀದಿಗೆ ಕಡಿವಾಣ ಹಾಕಲು ಸಾಧ್ಯವೇ ಇಲ್ವಾ? ಅಡಿಕೆ ಬೆಲೆ ಇಳಿಕೆ ಬಗ್ಗೆ ಕ್ಯಾಂಪ್ಕೊ ನಿಲುವೇನು? ಅಡಿಕೆ ಬೆಳೆಗಾರರಿಗೆ ಸಿಗಲಿದ್ಯಾ ನ್ಯಾಯ?

Arecanut: ನಮ್ಮ ದೇಶದಲ್ಲಿ ಅದರಲ್ಲೂ ಕರ್ನಾಟಕ ರಾಜ್ಯ (Karnataka State) ದಲ್ಲಿ ಅಡಿಕೆ ಬೆಳೆಗೆ ಹೆಚ್ಚಿನ ಮಹತ್ವವಿದೆ. ವಾರ್ಷಿಕ ಬೆಳೆ ಆಗಿರುವ ಅಡಿಕೆ ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಹೆಚ್ಚಾಗಿ ಬೆಳೆಯುವುದು ಕಂಡುಬರುತ್ತದೆ. ಕರ್ನಾಟಕದಲ್ಲಿ ಬೆಳೆಯುವ ಅಡಿಕೆಗೆ ತಕ್ಕಮಟ್ಟಿಗೆ ಯಾವಾಗಲೂ ಇರುತ್ತೆ ಆದರೆ ಇತ್ತೀಚಿನ ದಿನಗಳಲ್ಲಿ ಭೂತಾನ್ (Bhutan) ನಿಂದ ಆಮದು ಮಾಡಿಕೊಳ್ಳುತ್ತಿರುವ ಹಸಿರು ಅಡಿಕೆಯಿಂದಾಗಿ ನಮ್ಮ ರಾಜ್ಯದ ಅಡಿಕೆ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ.

ಅಡಿಕೆ ಬೆಲೆಯಲ್ಲಿ ಭಾರಿ ಕುಸಿತ:

ಹೌದು, ಭೂತಾನ್ ನಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಲೆಯಲ್ಲಿ ಬಾರಿ ಖುಷಿತ ಕಂಡಿದ್ದು ರಾಜ್ಯದ ಅಡಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಕೈಗಾರಿಕಾ ಹಾಗೂ ಕೇಂದ್ರ ವಾಣಿಜ್ಯ ಸಚಿವಾಲಯ ಭೂತಾನನಿಂದ 17000 ಹಸಿ ಅಡಿಕೆ ಆಮದು ಮಾಡಿಕೊಳ್ಳುವುದಕ್ಕೆ ಒಪ್ಪಿಗೆ ಸೂಚಿಸಿತ್ತು. ಇದರಿಂದಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಿದ್ದರೂ ಬೆಲೆ ಇಲ್ಲದಂತೆ ಆಗಿದೆ.

ಮಧ್ಯವರ್ತಿಗಳ ಆಟ ಶುರು

ಭೂತಾನನಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಕಾರಣವನ್ನು ಇಟ್ಟುಕೊಂಡು ಮಧ್ಯವರ್ತಿಗಳು ಅಡಿಕೆ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡುತ್ತಿದ್ದಾರೆ. ಊಟ ನಿಂದ ಆಮದು ನಿಲ್ಲಿಸಬೇಕು ಅಥವಾ ಶರತ್ತು ವಿಧಿಸಿ ಅಡಿಕೆ ಅನ್ನೋದು ಮಾಡಿಕೊಳ್ಳಬೇಕು. ಎಂದು ರೈತರು ಹೇಳಿದ್ದಾರೆ.

ಪ್ರತಿಕ್ರಿಯೆ ನೀಡಿದ ಕ್ಯಾಂಪು (the central arey ka nut and Coco marketing and processing cooperative limited) ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೂಡ್ಗಿ ಭಾತಾನ್ ದ ಅಡಿಕೆ ಆಮದು ಮಾಡಿಕೊಳ್ಳುವುದರ ಪರಿಣಾಮ ರೈತರ ಮೇಲೆ ಆಗುವುದಿಲ್ಲ ಅಡಿಕೆ ದರದಲ್ಲಿ ಕುಸಿತ ಉಂಟಾಗುವುದಿಲ್ಲ ಎಂದು ರೈತರಿಗೆ ಧೈರ್ಯ ಹೇಳಿದ್ದಾರೆ.

ಭೂತಾನ್ ನಿಂದ ಹಸಿರು ಅಡಿಕೆ ಆಮದು ಮಾಡಿಕೊಂಡರೆ ದೇಶೀಯ ಮಾರುಕಟ್ಟೆಯಲ್ಲಿ ಪರಿಣಾಮ ಬೀರಬಹುದು ಆದರೆ ಇದರಿಂದ ದರದಲ್ಲಿ ಹೆಚ್ಚಿನ ಕುಸಿತ ಉಂಟಾಗುವುದಿಲ್ಲ. ಭೂತಾನ್ ನಿಂದ ಆಮದು ಮಾಡಿಕೊಳ್ಳುತ್ತಿರುವ ಅಡಿಕೆ ಪ್ರಮಾಣ ನಮ್ಮ ದೇಶದಲ್ಲಿ ಉತ್ಪಾದನೆ ಯಾಗುವ ಒಂದು ಸಣ್ಣ ಭಾಗದಷ್ಟು ಮಾತ್ರ. ಹಾಗಾಗಿ ಬಿಳಿ ಚಾಲಿ ಮೊದಲಾದ ಅಡಿಕೆಯಲ್ಲಿ ಹೆಚ್ಚು ಇಳಿಕೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ರೈತರು ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಡಿಕೆ ಬೆಲೆ ದರ ಇಳಿದು ಹೋದರೆ ಬೆಳೆಗಾರರು ಏನು ಮಾಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ರೈತರ ಪರವಾಗಿ ಸರ್ಕಾರ ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

Comments are closed.