Govt. Subsidy: ಒಂದು ಎಕರೆ ಜಮೀನು ಇದ್ದರೂ ಸಾಕು ರೈತರಿಗೆ ಸರ್ಕಾರದಿಂದ ಸಿಗುತ್ತೆ ಫ್ರೀ ಟ್ರ್ಯಾಕ್ಟರ್: ಇಂದೇ ಅರ್ಜಿ ಸಲ್ಲಿಸಿ!

Govt. Subsidy: ಭಾರತದ ಮೂಲ ಜೀವಾಳ ಕೃಷಿ ಎನ್ನಬಹುದು. 70% ನಷ್ಟು ಜನ ಕೃಷಿಯನ್ನು ಮೆಚ್ಚಿಕೊಂಡಿದ್ದಾರೆ. ದೇಶ ಕೃಷಿಯಲ್ಲಿ ಎಷ್ಟು ಅಭಿವೃದ್ಧಿ ಹೊಂದುತ್ತೇವೆಯೋ ಅಷ್ಟು ರಾಷ್ಟ್ರಕ್ಕೆ ಒಳ್ಳೆಯದು. ರೈತರ ಸಮಸ್ಯೆಗಳನ್ನು ನೀಗಿಸುವಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಕೃಷಿ ಸಂಬಂಧದ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಕೃಷಿ ಭೂಮಿ ಹೊಂದಿರುವ ರೈತರಿಗೆ ಅತಿವೃಷ್ಟಿ ಹಾಗು ಅನಾವೃಷ್ಟಿ ಮೊದಲಾದ ಸಮಸ್ಯೆಗಳಿಂದ ಬೆಳೆ ಹಾನಿ ಉಂಟಾಗಬಹುದು ಹಾಗಾಗಿ ಇವೆಲ್ಲವನ್ನೂ ಸರಿ ತೂಗಿಸುವ ಸಲುವಾಗಿ ಕೇಂದ್ರ ಸರ್ಕಾರ ಕಡಿಮೆ ಬಡ್ಡಿಗೆ ಸಾಲ ಕೊಡುವುದರಿಂದ ಹಿಡಿದು ಉಚಿತ ಬಿತ್ತನೆ ಧಾನ್ಯಗಳು ಹಾಗೂ ಇತರ ಸೌಕರ್ಯಗಳನ್ನು ಕೂಡ ರೈತರಿಗೆ ನೀಡುತ್ತಿದೆ. ಸರ್ಕಾರ ಇನ್ನೊಂದು ಹೊಸ ಯೋಜನೆಯನ್ನು ಕೂಡ ಆರಂಭಿಸಿದ್ದು ಇದರಿಂದ ರೈತರು ಅರ್ಧಕರ್ಧದಷ್ಟು ಕಡಿಮೆ ಬೆಲೆಗೆ ಹೊಸ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಬಹುದು.

ಒಂದು ಎಕರೆ ಜಮೀನಿದ್ದರೂ ಸಿಗುತ್ತೆ, ಟ್ರ್ಯಾಕ್ಟರ್:

1ರಿಂದ 5 ಎಕರೆ ಜಮೀನು ಹೊಂದಿರುವ ರೈತರಿಗೆ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡಬಹುದು. ಹೊಸ ಟ್ರಾಕ್ಟರ್ ಕೊಳ್ಳುವಾಗ ಸಂಪೂರ್ಣ ಹಣ ಪಾವತಿ ಮಾಡುವುದು ರೈತರಿಗೆ ಕಷ್ಟವಾಗುತ್ತದೆ ಹಾಗಾಗಿ ಸಬ್ಸಿಡಿ ಪಡೆದು ಕೃಷಿಗಾಗಿ ಟ್ರ್ಯಾಕ್ಟರ್ ಖರೀದಿ ಮಾಡಬಹುದು. ಆದ್ರೆ ಈಗಾಗಲೇ ಯಾವ ರೈತರ ಬಳಿ ಟ್ರಾಕ್ಟರ್ ಇದೆಯೋ ಅವರಿಗೆ ಯೋಜನೆಯ ಸೌಲಭ್ಯ ಸಿಗುವುದಿಲ್ಲ.

ಟ್ರ್ಯಾಕ್ಟರ್ ಖರೀದಿಗೆ ಬೇಕಾಗಿರುವ ಅರ್ಹತೆಗಳು

ಮೊದಲನೇದಾಗಿ ಸರ್ಕಾರ ಹೊಸ ಟ್ರ್ಯಾಕ್ಟರ್ ಖರೀದಿ ಮಾಡಲು 50% ಸಬ್ಸಿಡಿ ನೀಡುತ್ತದೆ ಇನ್ನು ಮಿಕ್ಕ ಹಣವನ್ನು ರೈತರು ಪಾವತಿ ಮಾಡಿಕೊಳ್ಳಬೇಕಾಗುತ್ತದೆ.

ಈ ಯೋಜನೆಯಡಿಯಲ್ಲಿ ಒಬ್ಬರು ಒಂದು ಟ್ರ್ಯಾಕ್ಟರ್ ಮಾತ್ರ ಖರೀದಿ ಮಾಡಬಹುದು.

ಈಗಾಗಲೇ ಟ್ರ್ಯಾಕ್ಟರ್ ಹೊಂದಿರುವವರು ಮತ್ತೆ ಈ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆದುಕೊಳ್ಳಲು ಸಾಧ್ಯವಿಲ್ಲ.

ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

ಏನು ರೈತರು ಟ್ರ್ಯಾಕ್ಟರ್ ಸಬ್ಸಿಡಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಾದರೆ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಕೊಡಬೇಕು ಜೊತೆಗೆ ವಿಳಾಸದ ಪುರಾವೆ ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಕೊಡಬೇಕು. ಬ್ಯಾಂಕ ಖಾತೆ ಹಾಗೂ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. ಕೃಷಿ ಇಲಾಖೆಯಲ್ಲಿ ಕೊಡಬಹುದು. ಈ ಮೂಲಕ ಸರ್ಕಾರ ನೀಡುವ 50% ರಿಯಾಯಿತಿಯ ಟ್ರಾಕ್ಟರ್ ಅನ್ನು ರೈತರು ಪಡೆದುಕೊಳ್ಳಬಹುದು

Comments are closed.