Job for freshers: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್; ಮುಂದಿನ ಐದು ತಿಂಗಳಲ್ಲಿ ಐಟಿ ಕಂಪನಿಗಳಿಂದ 50,000 ಫ್ರೆಷರ್ ಗಳ ನೇಮಕ!

Job for freshers: ಕಳೆದ ಒಂದೆರಡು ವರ್ಷಗಳಲ್ಲಿ ಉದ್ಯೋಗ ದರ ದೇಶದಲ್ಲಿ ಕಡಿಮೆಯಾಗಿದೆ ಎನ್ನಬಹುದು. ಸಾಕಷ್ಟು ಜನ ಉದ್ಯೋಗ ಕಳೆದುಕೊಳ್ಳುವಂತೆ ಆಗಿತ್ತು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರು ಕೂಡ ಉದ್ಯೋಗ ಕಳೆದುಕೊಂಡು ದೇಶಕ್ಕೆ ಮರಳುವಂತೆ ಆಗಿತ್ತು ಆದರೆ ಇತ್ತೀಚಿನ ಸಮೀಕ್ಷೆ ಹೊಸ ವರದಿ ನೀಡಿದ್ದು, ಐಟಿ ವಲಯದಲ್ಲಿ ಕೆಲಸ ಮಾಡಲು ಬಯಸುವವರಿಗೆ ಹೊಸ ನೇಮಕಾತಿಯ ಸೂಚನೆ ಸಿಕ್ಕಿದೆ.

ಟಿಮ್ಲಿಸ್ ಎಡ್ವೆಕ್ಟ್ ಪ್ಲ್ಯಾಟ್ ಫಾರ್ಮ್ ಸಮೀಕ್ಷೆ ಮಾಡಿ ವರದಿಯನ್ನು ನೀಡಿದ ಭಾರತದ ಪ್ರಮುಖ ಐಟಿ ಸಂಸ್ಥೆಗಳಲ್ಲಿ ಜುಲೈ ಹಾಗೂ ಡಿಸೆಂಬರ್ 2023ರ ನಡುವೆ ದೇಶದಿಂದ ಐಟಿ ಕಂಪನಿಗಳಲ್ಲಿ 50,000ಕ್ಕೂ ಹೆಚ್ಚಿನ ಫ್ರೆಶರ್ ನೇಮಕ ಮಾಡಲು ತಯಾರಿ ನಡೆಸಲಾಗಿದೆ. ಇದರಲ್ಲಿಯೇತರ ಕ್ಷೇತ್ರಗಳಲ್ಲಿಯೂ ಕೂಡ ಉದ್ಯೋಗ ಸೃಷ್ಟಿ ಆಗಲಿದೆ.

ಇತ್ತೀಚೆಗೆ ಕ್ಲೌಡ್ ಕಂಪ್ಯೂಟರಿಂಗ್, ಎಐ, ಸೈಬರ್ ಭದ್ರತೆ ಹೀಗೆ ಮೊದಲಾದ ಆಧುನಿಕ ತಂತ್ರಜ್ಞಾನಗಳನ್ನು ಎಲ್ಲಾ ವ್ಯಾಪಾರ ವ್ಯವಹಾರಗಳಲ್ಲಿ ಹಾಗೂ ಉದ್ಯಮಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಡಿಜಿಟಲ್ ರೂಪಾಂತರಗಳ ಉಪಕ್ರಮಗಳನ್ನು ಐಟಿ ಉದ್ಯಮಗಳಲ್ಲಿಯೂ ಕೂಡ ತ್ವರಿತವಾಗಿ ಅಳವಡಿಸಿಕೊಂಡು ವೇಗದ ಬೆಳವಣಿಗೆಗೆ ಪ್ರಯತ್ನಿಸಲಾಗುತ್ತಿದೆ. ಈ ಕಾರಣಕ್ಕಾಗಿ ಹೆಚ್ಚು ಹೆಚ್ಚು ಕೆಲಸಗಾರರನ್ನು ನೇಮಿಸಿಕೊಂಡು ತಂತ್ರಜ್ಞಾನದಲ್ಲಿ ಇನ್ನಷ್ಟು ಮುಂದುವರೆಯಲು ಐಟಿ ಕಂಪನಿಗಳಲ್ಲಿ ಉದ್ಯೋಗ ಸೃಷ್ಟಿಸಲಾಗುತ್ತಿದೆ ಎಂದು ಟೆಕ್ ಪ್ಲಾಟ್ ಫಾರ್ಮ್ ಮಾಹಿತಿ ನೀಡಿದೆ.

ಸಂಸ್ಥಾಪಕ ಹಾಗೂ ಸಿ ಇ ಓ ಆಗಿರುವ ಶಂತನು ರೂಜ್ ‘ ಆರ್ಟಿಫಿಶಿಯಲ್ ಇಂಟಲಿಜೆನ್ಸ್. ಬ್ಲಾಕ್ ಚೈನ್ ಕ್ಲೌಡ್ ಕಂಪ್ಯೂಟರಿಂಗ್ ಮೊದಲಾದವು ಶೀಘ್ರದಲ್ಲಿಯೇ ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿದೆ ಇದು ಸದ್ಯದಲ್ಲೇ ಕ್ಯಾಲ್ಕುಲೇಟರ್ ಅಥವಾ ಲ್ಯಾಪ್ಟಾಪ್ ನಂತೆ ಸಾಮಾನ್ಯ ಸಾಧನ ಎನಿಸಿಕೊಳ್ಳಲಿದೆ. ಎ ಐ ಬಳಕೆ ಹೆಚ್ಚಾಗುತ್ತಿದ್ದರು ಉದ್ಯೋಗದಾತರು ವಿಶಾಲ ಕೌಶಲ್ಯವನ್ನು ಹುಡುಕುವ ಅಗತ್ಯವಿದೆ ಹಾಗಾಗಿ ದೇಶಾದ್ಯಂತ ಉದ್ಯೋಗ ಸೃಷ್ಟಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ

ದೇಶಾದ್ಯಂತ 18 ಕೈಗಾರಿಕಾ ಸಂಸ್ಥೆಗಳಲ್ಲಿ 737 ಸಣ್ಣ ಮಧ್ಯಮ ಹಾಗೂ ದೊಡ್ಡ ಕಂಪನಿಗಳ ಸಮೀಕ್ಷೆ ಮಾಡಲಾಗಿದ್ದು ಅದರ ಪ್ರಕಾರ 2023 ಜುಲೈ ನಿಂದ ಡಿಸೆಂಬರ್ ತಿಂಗಳುಗಳ ನಡುವೆ ಸ್ಟಾರ್ಟ್ ಅಪ್ ಕಂಪನಿಗಳು ಹೆಚ್ಚು ನೇಮಕಕೊಳ್ಳುತ್ತಿವೆ ಅಂದರೆ ಸುಮಾರು 73% ನಷ್ಟು ಉದ್ಯೋಗ ಸೃಷ್ಟಿ ಆಗುತ್ತಿದೆ. ಇದರಲ್ಲಿ ಶೇಕಡಾ 65%ನಷ್ಟು ಫ್ರೆಶರ್ ಗಳ ನೇಮಕಾತಿ ಆಗಲಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಫ್ರೆಶರ್ ಗಳನ್ನು ಹೆಚ್ಚಾಗಿ ನೇಮಿಸಿಕೊಳ್ಳುವ ಉದ್ದೇಶದಿಂದ ಕೆಲವು ಕೈಗಾರಿಕೆಗಳು ಕಾರ್ಯ ಪ್ರವೃತ್ತವಾಗಿವೆ ಅವುಗಳಲ್ಲಿ ಮುಖ್ಯವಾಗಿ ಈ ಕಾಮರ್ಸ್ ಹಾಗೂ ಟೆಕ್ನಾಲಜಿ ಸ್ಟಾರ್ಟ್ ಅಪ್ ಗಳಲ್ಲಿ 59% ನಷ್ಟು ದೂರಸಂಪರ್ಕ ದಲ್ಲಿ 53% ನಷ್ಟು ಹಾಗೂ ಇಂಜಿನಿಯರಿಂಗ್ ಮತ್ತು ಮೂಲ ಸೌಕರ್ಯಗಳಲ್ಲಿ ಶೇಕಡ 50%ನಷ್ಟು ಉದ್ಯೋಗ ಸೃಷ್ಟಿ ಮಾಡಲು ನಿರ್ಧರಿಸಲಾಗಿದೆ.

ಯಾವೆಲ್ಲ ಹುದ್ದೆಗಳನ್ನು ನಿರೀಕ್ಷಿಸಬಹುದು:

ಡೆವಲಪ್ಸ್ ಆಫ್ ಇಂಜಿನಿಯರ್ಚಾರ್ಟೆಡ್ ಅಕೌಂಟೆಂಟ್ಬಿಸಿನೆಸ್ ಅನಾಲಿಸ್ಟ್ಯು ಎಕ್ಸ್ ಡಿಸೈನರ್ಮೊದಲಾದ ಉದ್ಯೋಗಗಳು ಸೃಷ್ಟಿಯಾಗಬಹುದು.

ಇನ್ನು ಮಷೀನ್ ಲರ್ನಿಂಗ್, ಡೇಟಾ ಅನಾಲಿಸಸ್, ಡೇಟಾ ಎನ್ ಸ್ಕ್ರಿಪ್ಷನ್, ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಮೊದಲಾದ ಕಡೆ ಫ್ರೆಶರ್ ಗಳಿಕೆ  ಉದ್ಯೋಗ ಸೃಷ್ಟಿ ಆಗಬಹುದು.

Comments are closed.