Spandana: ಫೋಟೋದಲ್ಲಿ ಸದಾ ಬಾಯಿ ತುಂಬಾ ನಗ್ತಿದ್ದ ವಿಜಯ ರಾಘವೇಂದ್ರ ಹಾಗೂ ಸ್ಪಂದನ ಜೋಡಿ ನಿಜವಾಗಿ ಹೇಗಿತ್ತು ಗೊತ್ತಾ?

Spandana; ಇಂದು ಇಡೀ ಕರ್ನಾಟಕದ ಜನತೆ ಕಣ್ಣೀರು ಇಟ್ಟಿದೆ. ನಮ್ಮ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ವಿದೇಶ ಪ್ರವಾಸದಲ್ಲಿ ಇರುವಾಗ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಸ್ಪಂದನ ಅವರದು ಬಹಳ ಚಿಕ್ಕ ವಯಸ್ಸು ಹಾಗಾಗಿ ಅವರ ಈ ಅಕಾಲಿಕ ಮರಣವನ್ನು ಅವರ ಕುಟುಂಬದವರು ಮಾತ್ರವಲ್ಲ ಕರ್ನಾಟಕದ ಜನತೆಗೂ ಕೂಡ ಅರಗಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತಿದೆ.

ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದರು ವಿಜಯ ರಾಘವೇಂದ್ರ. ಎಷ್ಟೋ ಬಾರಿ ವೇದಿಕೆಯ ಮೇಲೆಯೂ ಕೂಡ ತಮ್ಮ ಹೆಂಡತಿಯ ಬಗ್ಗೆ ಹೇಳಿಕೊಂಡಿದ್ದ ವಿಜಯ ರಾಘವೇಂದ್ರ, ಇದೀಗತನನು ಆಗಲಿ ಹೋಗಿರುವ ಹೆಂಡತಿಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಥೈಲ್ಯಾಂಡ್ ಗೆ ಪ್ರವಾಸಕ್ಕೆಂದು ಹೋಗಿದ್ದ ಸ್ಪಂದನ ನಗುನಗುತ ರಾಶಿ ರಾಶಿ ಗಿಫ್ಟ್ ಹಿಡಿದುಕೊಂಡು ಮನೆಗೆ ಬರುವ ಬದಲು, ಮಾತು ಎರಡು ಪ್ರಶಾಂತವಾಗಿ ಮಲಗಿದ್ದಾರೆ. ಬದುಕಿದರೆ ಇವರಂತೆ ಬದುಕಬೇಕು ಎಂದು ಬದುಕಿ ತೋರಿಸಿದ ಜೋಡಿ ವಿಜಯ ರಾಘವೇಂದ್ರ ಹಾಗೂ ಸ್ಪಂದನ. ಇವರಿಬ್ಬರ ಜೀವನದ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಪ್ರೀತಿಸಿ ಮದುವೆ ಆದವರು:

2007ರಲ್ಲಿ ವಿಜಯ ರಾಘವೇಂದ್ರ ಹಾಗೂ ಸ್ಪಂದನ ಪ್ರೀತಿಸಿ ಮದುವೆ ಆಗಿದ್ದರು. ಇವರಿಬ್ಬರ ನೋ ಕ್ಯೂಟ್ ಕಪಲ್ ಎಂದೆ ಸ್ಯಾಂಡಲ್ ವುಡ್ ಕರೆಯುತ್ತಿತ್ತು. 15 ವರ್ಷದ ದಾಂಪತ್ಯ ಜೀವನ ಮುಗಿಸಿ ಇನ್ನೇನು ಹದಿನಾರನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಸ್ಪಂದನ ಮರೆಯಾಗಿಬಿಟ್ಟಿದ್ದಾರೆ. ಸ್ಪಂದನ ಅವರನ್ನು ನೋಡಿದ ತಕ್ಷಣವೇ ಇಷ್ಟಪಟ್ಟ ವಿಜಯ್ ಮದುವೆಯಾದರೆ ಸ್ಪಂದನ ಅವರನ್ನೇ ಎಂದು ಅಂದುಕೊಂಡಿದ್ದರಂತೆ. ಮನೆಯವರೆಲ್ಲ ಒಪ್ಪಿ, ಇವರಿಬ್ಬರು ಮದುವೆ ಆಗಿದ್ದು. ಎಂತಹ ಅದ್ಭುತ ಸಾಂಗತ್ಯ ಎಂದರೆ ಬಹುಶಹ ಲವ್ ಮ್ಯಾರೇಜ್ ಇರಬೇಕು ಎಂದೇ ಜನ ಭಾವಿಸಿದ್ದಾರೆ. ಆದ್ರೆ ವಿಜಯ್ ಹಾಗೂ ಸ್ಪಂದನ ಅವರದು ಅಪ್ಪಟ ಅರೇಂಜ್ಡ್ ಮ್ಯಾರೇಜ್.

ಕಾಫಿ ಡೇಯಲ್ಲಿ ನೋಡಿದ ವಿಜಯ್ ರಾಘವೇಂದ್ರ

ವಿಜಯ ರಾಘವೇಂದ್ರ ಅವರು ಸ್ಪಂದನ ಅವರನ್ನು ಕಾಫಿ ಡೇಯಲ್ಲಿ ಒಂದೆರಡು ಬಾರಿ ನೋಡಿದ್ದರಂತೆ. ಮೂರನೇ ಬಾರಿ ಮಾತನಾಡಿಸಿದ್ದರು ಕೂಡ. ಅದೇ ಸಮಯಕ್ಕೆ ಸ್ಪಂದನ ಅವರ ತಂದೆ ಬಿ ಕೆ ಶಿವರಾಂ ಅವರು ಮದುವೆಯ ಪ್ರಸ್ತಾಪವನ್ನು ತಂದಾಗ ಇವರಿಬ್ಬರು ಬಹಳ ಖುಷಿಯಿಂದಲೇ ಒಪ್ಪಿ ಮದುವೆ ಆಗಿದ್ದರು. ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರ ಪ್ರೀತಿಯ ಪುತ್ರ ಶೌರ್ಯ ಇವರಿಬ್ಬರ ಖುಷಿಯ ಮತ್ತೊಂದು ಕಾರಣವಾಗಿದ್ದ. ಸದಾ ಫೋಟೋದಲ್ಲಿ ನಗುತಿದ್ದ ವಿಜಯರಾಘವೇಂದ್ರ ಹಾಗೂ ಸ್ಪಂದನ ನಿಜ ಜೀವನದಲ್ಲಿಯೂ ಅಷ್ಟೇ ಸಂತೋಷವಾಗಿದ್ದರು ಎಂದು ಹೇಳಬಹುದು. ಆದರೆ ಈಗ ಸ್ಪಂದನ ಅವರ ನಗು ಈ ಫೋಟೋಗಳಿಗೆ ಅಷ್ಟೇ ಸೀಮಿತ. ವಿಜಯ ರಾಘವೇಂದ್ರ ಹಾಗೂ ಅವರ ಮನೆಯವರಿಗೆ ಈ ನೋವನ್ನು ಸಹಿಸುವ ಶಕ್ತಿ ಕೊಡಲಿ ಎಂಬುದಷ್ಟೇ ನಮ್ಮ ಪ್ರಾರ್ಥನೆ.

Comments are closed.