Snake Bite Death Compensation: ಹಾವು ಕಚ್ಚಿ ಆಕಸ್ಮಾತ್ ಸಾವಾದರೂ ಸಿಗುತ್ತೆ ಸರ್ಕಾರದಿಂದ ಲಕ್ಷಾಂತರ ಹಣ ಈ ಪರಿಹಾರ ಪಡೆದುಕೊಳ್ಳುವುದಕ್ಕೆ ಹೀಗೆ ಅರ್ಜಿ ಸಲ್ಲಿಸಿ!

Snake Bite Death Compensation: ಹಾವು ಅಂದ್ರೆ ಎಲ್ರಿಗೂ ಭಯ ಇದ್ದೇ ಇರುತ್ತೆ. ಹಾವನ್ನು ಅವನ ನೋಡಿದ್ರೆ ಭಯದಿಂದಲೇ ಅದನ್ನ ಹೊಡೆದು ಓಡಿಸುವುದಕ್ಕೆ ಪ್ರಯತ್ನಿಸುವವರೇ ಜಾಸ್ತಿ ಭಾರತದಲ್ಲಿ 276 ಜಾತಿಗಿಂತಲೂ ಹೆಚ್ಚಿನ ಜಾತಿಯ ಹಾವುಗಳು ಇವೆ ಅಂದರೆ ನೀವು ನಂಬಲೇಬೇಕು. ಅದರಲ್ಲೂ 20 ರಿಂದ 30% ನಷ್ಟು ಹಾವುಗಳು ವಿಷಕಾರಿಯಾಗಿರುತ್ತದೆ ಇಂಥ ಹಾವುಗಳು ಕಚ್ಚಿದರೆ ಸಾವು ಕೂಡ ಸಂಭವಿಸುತ್ತೆ. ಹಾವು ಎಲ್ಲಿರುತ್ತೆ ಎಷ್ಟೊತ್ತಿಗೆ ಯಾವಾಗ ಬಂದು ಹೇಗೆ ಕಚ್ಚುತ್ತೆ ಎಂದಲ್ಲ ಊಹಿಸುವುದು ಕೂಡ ಕಷ್ಟ ಹಾಗಾಗಿ ಕೆಲವೊಮ್ಮೆ ಮನೆಗೆ ಆಧಾರವಾಗಿರುವವರೇ ಹಾವು ಕಚ್ಚಿ ಸಾವನ್ನು ಅನುಭವಿಸಿ ಮನೆಯವರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಆಗುವುದೂ ಕೂಡ ಇದೆ.

ಹಾವು ಕಚ್ಚಿ ಸಾಯುವವರ ಸಂಖ್ಯೆ ಹಚ್ಚಿದೆ!

ಸಾಮಾನ್ಯವಾಗಿ ಹಾವು ಕಚ್ಚಿ ಆಕಸ್ಮಿಕ ಮರಣ ಹೊಂದುವ ಸಾಧ್ಯತೆ ಹಳ್ಳಿಗಳಲ್ಲಿ ಹೆಚ್ಚು ಎನ್ನಬಹುದು. 20 ವರ್ಷಗಳ ದಾಖಲೆ ನೋಡಿದರೆ ಭಾರತದಲ್ಲಿ ಸುಮಾರು 1.2 ದಶಲಕ್ಷಕ್ಕೂ ಹೆಚ್ಚು ಜನ ಹಾಗೂ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ. ಮಳೆಗಾಲದ ಸಮಯದಲ್ಲಿ ಹಾವಿನ ಹಾವಳಿಯೂ ಕೂಡ ಜಾಸ್ತಿ ಅದರಲ್ಲೂ ಹಳ್ಳಿಗಳಲ್ಲಿ ಹೊಲ ಗದ್ದೆ ಅಷ್ಟೇ ಅಲ್ಲ ಮನೆಯೊಳಗೂ ಕೂಡ ಕೆಲವೊಮ್ಮೆ ವಿಷಕಾರಿ ಹಾವುಗಳು ಪ್ರವೇಶ ಮಾಡಿಬಿಡುತ್ತವೆ. ಹಾವು ಎಲ್ಲಿದೆ ಎಂಬುದನ್ನು ತಿಳಿಯದೆ ಹಾವನ್ನ ತುಳಿದು ಅಥವಾ ಮುಟ್ಟುವುದಕ್ಕೆ ಹೋಗಿ ಸಾವು ಮೈಮೇಲೆ ಎಳೆದುಕೊಂಡು ಅವರ ಸಂಖ್ಯೆಯು ಜಾಸ್ತಿ ಇದೆ.

ಹಾವು ಕಚ್ಚಿ ಸತ್ರೆ ಸಿಗುತ್ತೆ ಪರಿಹಾರ:

ಆಕಸ್ಮಿಕವಾಗಿ ಹಾವು ಕಚ್ಚಿದರೆ ಮರಣ ಹೊಂದಿದರೆ ಕೆಲವೊಮ್ಮೆ ಮನೆಯ ಆಧಾರ ಸ್ತಂಭವೇ ಬಿದ್ದು ಹೋದಂತೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಮನೆಯ ಇತರ ಸದಸ್ಯರ ಜೀವನ ಆಧಾರಕ್ಕಾಗಿ ಹಾವು ಕಡಿದು ಸಾವಿಗೆ ಒಳಗಾದರೆ ವಿಪತ್ತು ಸಾವು ಎನ್ನುವ ಪರಿಹಾರವನ್ನು ಘೋಷಿಸಲಾಗಿದೆ. ವಿಪತ್ತು ಸಾವು ಯೋಜನೆಯ ಅಡಿಯಲ್ಲಿ ಕುಟುಂಬಕ್ಕೆ ಪರಿಹಾರ ಸಿಗುತ್ತದೆ. ಇದು ಮೊದಲು ಕೇರಳದಲ್ಲಿ ಜಾರಿಗೆ ಬಂದಿತು ವಿಷಪೂರಿತ ಹಾಗೂ ಕಡೆದರೆ ಪರಿಹಾರ ನೀಡಲಾಗುತ್ತಿತ್ತು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ ಅಧ್ಯಕ್ಷರಾಗಿರುವ ಡಾಕ್ಟರ್ ರಾಜೇಶ್ ಪ್ರಜಾಪತಿ ಎನ್ನುವವರು ಕಡಿತದಿಂದ ಮರಣ ಉಂಟಾದರೆ ಪರಿಹಾರ ಕೂಡ ಸಿಗುತ್ತದೆ ಎಂದು ಹೇಳಿದ್ದಾರೆ ಅವರು ಹೇಳಿರುವಂತೆ ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಾವು ಕಚ್ಚಿ ಅಮೃತರಾದ ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿಗಳ ವರೆಗೆ ಪರಿಹಾರ ನೀಡಲಾಗುತ್ತದೆ.

ಹಾವು ಕಡಿತಕ್ಕೆ ರೈತ ವಿಮಾ:

ಇನ್ನು ಹಾವು ಕಡಿತದಿಂದ ರೈತರು ಸಾವನಪ್ಪಿದರೆ ರೈತ ವಿಮಾನ ಯೋಜನೆ ಅಡಿಯಲ್ಲಿ ಪರಿಹಾರ ಮೊತ್ತದ ಜೊತೆಗೆ ಒಂದು ಲಕ್ಷ ರೂಪಾಯಿ ವಿಮೆ ಕೂಡ ಸಿಗುತ್ತದೆ. ನಮ್ಮ ದೇಶದಲ್ಲಿರುವ ವಿಷಕಾರಿ ಹಾವುಗಳಲ್ಲಿ ಕಿಂಗ್ ಕೋಬ್ರಾ ಕೂಡ ಒಂದು ಅಧ್ಯಯನದ ಪ್ರಕಾರ ಪ್ರತಿ ವರ್ಷ 64,000 ಜನರು ಸಾವನ್ನುಅಪ್ಪುತ್ತಿದ್ದಾರೆ. ಮಹಿಳೆಯರಿಗಿಂತಲೂ ಪುರುಷರೇ ಹಾಗೂ ಕಡಿತಕ್ಕೆ ಒಳಗಾಗುವುದು ಜಾಸ್ತಿ ಇದಕ್ಕೆ ಕಾರಣ ಗದ್ದೆ ಹೊಲಗಳಲ್ಲಿ ಪುರುಷರು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಹಾಗೂ ಕಡಿತಕ್ಕೆ ಒಳಗಾಗುವ ಸಾಧ್ಯತೆ ಜಾಸ್ತಿ ಇರುತ್ತದೆ.

ಪರಿಹಾರ ಪಡೆಯುವುದು ಹೇಗೆ?

ಇನ್ನು ಹಾವು ಕಡಿತದಿಂದ ವಿಪತ್ತು ಪರಿಹಾರ ಯೋಜನೆಯ ಅಡಿಯಲ್ಲಿ ಪರಿಹಾರ ಹಣವನ್ನು ಪಡೆಯಲು, ಹಾವು ಕಚ್ಚಿ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಅದರಲ್ಲಿ ಹಾಗೂ ಕಚ್ಚಿರುವುದು ಹಾವಿನ ವಿಷ ದೃಢವಾದರೆ ನಂತರ ಕುಟುಂಬಕ್ಕೆ ಸಹಾಯಧನ ಸಿಗುತ್ತದೆ. ಹಾಗಾಗಿ ಹಾವು ಕಚ್ಚಿ ಯಾರಾದ್ರೂ ಮೃತಪಟ್ಟರೆ ಅವರ ಶವವನ್ನು ಮಣ್ಣು ಮಾಡುವ ಮೊದಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ತಿಳಿಸಬೇಕು. ಈ ರೀತಿ ಮಾಡಿದ್ರೆ ಶವ ಪರೀಕ್ಷೆ ನಡೆಸಿ ನಂತರ ಕುಟುಂಬಕ್ಕೆ ಸಹಾಯಧನ ಸಿಗುವಂತೆ ಮಾಡಲಾಗುವುದು.

Comments are closed.