Government website: ಈ ವೆಬ್ ಸೈಟ್ ಒಂದು ನಿಮಗೆ ಗೊತ್ತಿದ್ದರೆ ಸರ್ಕಾರಿ ಕಚೇರಿಯ ನಿಮ್ಮ ಬಳಿ ಇದ್ದಂತೆ ಮನೆಯಲ್ಲೇ ಕುಳಿತು ಎಲ್ಲಾ ಕೆಲಸವನ್ನು ಮಾಡಿ ಮುಗಿಸಬಹುದು

Government website: ರಾಜ್ಯ ಸರ್ಕಾರವಿರಲಿ (State Govt.) ಕೇಂದ್ರ ಸರ್ಕಾರವಿರಲಿ (Central Govt) ಕಾಲಕ್ಕೆ ತಕ್ಕಂತೆ ಜನರಿಗೆ ಬೇಕಾಗುವ ಹಾಗೂ ಜನರಿಗೆ ಪ್ರಯೋಜನವಾಗುವಂತಹ ಯೋಜನೆಗಳನ್ನು ಪರಿಚಯಿಸುತ್ತಿರುತ್ತಾರೆ ಆದರೆ ಈ ಯೋಜನೆಗಳ (Scheme)  ಬಗ್ಗೆ ಎಲ್ಲರಿಗೂ ಅರಿವು ಇರುವುದಿಲ್ಲ ಇದನ್ನು ತಿಳಿದುಕೊಳ್ಳಲು ಸರ್ಕಾರಿ ಕಚೇರಿಗೆ (Govt.Office) ಪದೇಪದೇ ಹೋಗಲು ಕೂಡ ಸಾಧ್ಯವಿಲ್ಲ. ಹಾಗಂತ ಟೆನ್ಶನ್ ಬೇಡ ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ (Smart Phone)  ಇದೆ ಅಲ್ವಾ ಹಾಗಾದ್ರೆ ಇದೊಂದು ವೆಬ್ಸೈಟ್ ಪರಿಚಯ ನಿಮಗೆ ಇರಲಿ ಬಗ್ಗೆ ನಿಮಗೆ ಗೊತ್ತಾದರೆ ನೀವು ಮನೆಯಲ್ಲಿಯೇ ಕುಳಿತು ಎಲ್ಲಾ ಸರ್ಕಾರಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದನ್ನೂ ಓದಿ: Tirupati Temple: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೆಚ್ಚುತ್ತಿರುವ ಭಕ್ತರು: ಜನರಿಗೆ ಉಳಿದುಕೊಳ್ಳಲು ಅನುಕೂಲ ಮಾಡಿಕೊಡಲು ಮಾಸ್ಟರ್ ಪ್ಲಾನ್ ಮಾಡಿದ ಟಿಟಿಡಿ ಸಂಸ್ಥೆ! ಏನು ಗೊತ್ತಾ?

ಯಾವ ವೆಬ್ ಸೈಟ್ ನಲ್ಲಿ ಯೋಜನೆಯ ಬಗ್ಗೆ ಇರುತ್ತೆ ಮಾಹಿತಿ ಗೊತ್ತಾ?

ಸರ್ಕಾರಿ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಯಾವುದಾದರೂ ಯೋಜನೆಗೆ ಅರ್ಜಿ ಹಾಕಲು ನೀವು ಬಯಸಿದರೆ ನಿಮಗೆ ಇದೊಂದು ವೆಬ್ಸೈಟ್ ಲಿಂಕ್ ಬಗ್ಗೆ ಗೊತ್ತಿರಲಿ. ನೀವು https://www.myscheme.gov.in/  ಈ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ವೆಬ್ಸೈಟ್ ಗೆ ಹೋಗಿ ಸರ್ಕಾರದ ಯೋಜನೆಗಳ ಸಂಪೂರ್ಣ ಲಾಭ ಪಡೆದುಕೊಳ್ಳಬಹುದು ನಿಮಗೆ ಯಾವ ಸ್ಕೀಮ್ ಅಪ್ಲೈ ಆಗುತ್ತದೆ ನೀವು ಯಾವುದರಲ್ಲಿ ಹೂಡಿಕೆ ಮಾಡಬಹುದು ಅಥವಾ ಸಾಲ ಸೌಲಭ್ಯ (Loan) ತೆಗೆದುಕೊಳ್ಳುವುದು ಹೇಗೆ ಮುಂತಾದ ಮಾಹಿತಿಗಳು ಈ ವೆಬ್ಸೈಟ್ನಲ್ಲಿ ಲಭ್ಯವಾಗುತ್ತದೆ. ಇದನ್ನೂ ಓದಿ: Best 5 Cars: ದೇಶದ ಆಟೋ ಮಾರುಕಟ್ಟೆಯನ್ನು ಆಳಲು ಬಂದಿರುವ ಬೆಸ್ಟ್ 5 ಕಾರುಗಳು ಇವು; ನೋಡಿದ್ರೆ ಫಿದಾ ಆಗ್ತೀರಾ!

ಕೃಷಿ, ಗ್ರಾಮೀಣ ಹಾಗೂ ಬ್ಯಾಂಕಿಂಗ್ ಹಣಕಾಸು ವ್ಯವಹಾರ ವಿಮೆ ವ್ಯಾಪಾರ ಶಿಕ್ಷಣ ಹೀಗೆ ಎಲ್ಲಾ ರೀತಿಯ ಸರ್ಕಾರಿ ಯೋಜನೆಗಳು ಕೂಡ ಇಲ್ಲಿ ಲಭ್ಯವಿದೆ ಹಾಗಾಗಿ ನಿಮಗೆ ಬೇಕಾಗಿರುವ ಯೋಜನೆಯ ಬಗ್ಗೆ ತಿಳಿದುಕೊಂಡು ಅದರ ಪ್ರಯೋಜನವನ್ನು ಈ ವೆಬ್ಸೈಟ್ನಲ್ಲಿ ಪಡೆದುಕೊಳ್ಳಬಹುದು. ನೀವು ಈ ವೆಬ್ಸೈಟ್ ನ ಪ್ರಯೋಜನ ಪಡೆದುಕೊಳ್ಳಲು ಕಂಪ್ಯೂಟರ್ ಅಥವಾ ಸಿಸ್ಟಮ್ ಬೇಕಾಗಿಲ್ಲ ನಿಮಗೆ ಇರುವ ಸ್ಮಾರ್ಟ್ ಫೋನ್ ನಲ್ಲಿ ಕೂಡ ಮೈ ಸ್ಕೀಮ್ ಗೌರ್ಮೆಂಟ್ ವೆಬ್ಸೈಟ್ ತೆಗೆದುಕೊಳ್ಳುತ್ತದೆ. ಹಾಗಾಗಿ ಈ ಒಂದು ವೆಬ್ಸೈಟ್ ನಿಮ್ಮ ಬಳಿ ಇದ್ದರೆ ನೀವು ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು ಈ ಮಾಹಿತಿಯನ್ನು ಇತರರೊಂದಿಗೂ ಹಂಚಿಕೊಳ್ಳಿ ಬೇರೆಯವರು ಕೂಡ ಸರ್ಕಾರದ ಯೋಜನೆಯ ಬಗ್ಗೆ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಿ.

Comments are closed.