Temple in Mandya:ಹೂವು ಅಲ್ಲ, ಹಣ್ಣು ಅಲ್ಲ, ಕಲ್ಲು ಕೊಟ್ಟರೆ ಸಾಕು ಕಾಡುಬಸಪ್ಪ ಎಲ್ಲಾ ಇಷ್ಟಾರ್ಥ ಈಡೇರಿಸುತ್ತಾನೆ: ಇಂತಹ ಅದ್ಭುತ ದೇವಾಲಯ ಇರುವುದು ಎಲ್ಲಿ ಗೊತ್ತಾ!

Temple in Mandya: ಸಾಮಾನ್ಯವಾಗಿ ದೇವರಿಗೆ ಫಲ ಪುಷ್ಪಗಳನ್ನು ಅರ್ಪಿಸಿ, ಆರತಿ ಮಾಡಿ, ನೈವೇದ್ಯ ನೀಡಿ ನಾನು ಕೇಳಿದ್ದೆಲ್ಲವನ್ನು ಕೊಡಪ್ಪ ದೇವರೇ ಎಂದು ಪ್ರಾರ್ಥಿಸುತ್ತೇವೆ. ದೇವರ ಮುಂದೆ ನಮ್ಮ ಇಷ್ಟಾರ್ಥ ಸಿದ್ಧಿಗಾಗಿ ಏನೆಲ್ಲಾ ಲಂಚ ಕೊಡೋದಕ್ಕೆ ಸಾಧ್ಯವೋ ಅವೆಲ್ಲವನ್ನು ಅರ್ಪಿಸುತ್ತೇವೆ. ಆದರೆ ಈ ದೇವರು ಮಾತ್ರ ಬಹಳ ವಿಚಿತ್ರ ನೋಡಿ. ಇಲ್ಲಿಗೆ ಬರುವ ಭಕ್ತಾದಿಗಳು ಕೈಯಲ್ಲಿ ಹೂವು ಹಣ್ಣು ಅಥವಾ ಇತರ ವಸ್ತುಗಳನ್ನು ಹಿಡಿದುಕೊಂಡು ಬರಬೇಕಾಗಿಲ್ಲ. ಕಲ್ಲು ಗುಂಡು (Stone) ಎತ್ತುಕೊಂಡು ಬಂದ್ರೆ ಸಾಕು. ಇದನ್ನೂ ಓದಿ: Honda Bike: ಬರ್ತಿದೆ ಹೊಸ ಹೋಂಡಾ ಬೈಕ್; ಇನ್ನೇನಿದ್ರೂ ಹೋಂಡಾದ್ದೇ ಹವಾ! ಏನೆಲ್ಲಾ ವೈಶಿಷ್ಟ್ಯತೆಗಳು ಇವೆ ಗೊತ್ತೇ?

ಮಂಡ್ಯದಲ್ಲಿ ಇದೆ ವಿಶಿಷ್ಟ ದೇವರು:

ದೇವಾಲಯ ಇರುವುದು ಮಂಡ್ಯದ ಬೇವಿನಹಳ್ಳಿ ಸಮೀಪದಲ್ಲಿ. ಅದುವೇ ಕಾಡು ಬಸಪ್ಪ ದೇವಾಲಯ. ಇಲ್ಲಿ ರಾಶಿ ರಾಶಿ ಕಲ್ಲು ಬಿದ್ದಿರುವುದನ್ನು ಕಾಣಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಕೋರ್ಟ್ ರಾಜ್ಯಗಳನ್ನು ಬಗೆಹರಿಸಿಕೊಳ್ಳಲು, ತಮಗೆ ಯಾವುದೇ ಕಷ್ಟ ಬಂದಾಗ, ಕಂಕಣ ಭಾಗ್ಯ ಕೂಡಿ ಬರಲು ಹೀಗೆ ಮೊದಲಾದ ಸಮಸ್ಯೆಗಳ ಪರಿಹಾರಾರ್ಥವಾಗಿ ಕಾಡು ಬಸಪ್ಪನಿಗೆ ಮೂರ್ನಾಲ್ಕು ಕಲ್ಲುಗಳನ್ನು ಎಸೆದು ಹೋಗುತ್ತಾರೆ. ಈ ರೀತಿ ಮಾಡೋದ್ರಿಂದ ಕಾಡು ಬಸಪ್ಪ ಯಾರ ಮನಸ್ಸಿನಲ್ಲಿ ಏನಿದೆಯೋ ಅದನ್ನ ಈಡೇರಿಸುತ್ತಾನೆ ಎನ್ನುವ ನಂಬಿಕೆ ಇದೆ.

ಇದು ಉದ್ಭವ ಮೂರ್ತಿ:

ಇಲ್ಲಿನ ಕಾಡು ಬಸಪ್ಪ ದೇವರು ಉದ್ಭವ ಮೂರ್ತಿ ಬಹಳ ಪವರ್ ಫುಲ್ ದೇವ್ರು ಅಂತ ಇಲ್ಲಿನ ಜನರು ನಂಬುತ್ತಾರೆ. ಇನ್ನು ರೈತರು ತಮ್ಮ ಹಸುಗಳಿಗೆ ಬಾವು ಕಾಣಿಸಿಕೊಂಡರೆ ಹಸುವಿನ ಗಿನ್ನು ಮಾಡಿ ತಂದು ಈ ದೇವರಿಗೆ ಅರ್ಪಿಸಿ, ಹೋಗುತ್ತಾರೆ ಇದರಿಂದ ಹಸು ಗುಣಮುಖವಾಗಿರುವ ಅದೆಷ್ಟೋ ಉದಾಹರಣೆಗಳು ಇವೆ. ಇದನ್ನೂ ಓದಿ: Relationship: ಮದುವೆಯಾದ ಗಂಡಸರಿಗೆ ತಮ್ಮ ಹೆಂಡತಿಗಿಂತ ಬೇರೆ ಹೆಂಗಸರೇ ಸುಂದರವಾಗಿ ಕಾಣಿಸುತ್ತಾರಂತೆ ಯಾಕೆ ಗೊತ್ತಾ? ಇದರ ಹಿಂದೆ ಕೂಡ ಇದೆ ನೋಡಿ ಒಂದು ಲಾಜಿಕ್!

ಇಲ್ಲಿನ ಅರ್ಚಕರು ಹೇಳುವ ಪ್ರಕಾರ, ಇಲ್ಲಿಗೆ ಜನರು ತಮ್ಮ ನಂಬಿಕೆಯ ಪ್ರಕಾರ ಯಾವುದೇ ಸಮಸ್ಯೆ ಇದ್ದರೂ ಅದರ ನಿವಾರಣೆಗೆ ಕಲ್ಲು ತಂದು ಕಾಡುಬಸಪ್ಪನಿಗೆ ಅರ್ಪಿಸುತ್ತಾರೆ ಹಾಗಾಗಿ ಈ ಭಾಗದಲ್ಲಿ ಸಾಕಷ್ಟು ಕಲ್ಲುಗಳು ಶೇಖರಣೆಯಾಗಿದೆ. ಈ ದೇವಾಲಯ ಸುತ್ತೂರಿನ ಹಳ್ಳಿಗೆ ಪಾಸಿಟಿವ್ ಎನರ್ಜಿಯನ್ನು ಕೂಡ ನೀಡುತ್ತೆ. ಹೀಗೆ ಅಪರೂಪದ ಆಚರಣೆ ಹೊಂದಿರುವ ದೇವಾಲಯಕ್ಕೆ ನೀವು ಕೂಡ ಸಾಧ್ಯ ಆದರೆ ಒಮ್ಮೆ ಭೇಟಿ ನೀಡಿ.

Comments are closed.