Arecanut Farming: ಎಷ್ಟು ಕಡಿಮೆ ಹೂಡಿಕೆ ಮಾಡಿ ಲಕ್ಷ ಲಕ್ಷ ಹಣ ಗಳಿಸಬಹುದು ಗೊತ್ತಾ ಈ ಕೃಷಿಯಲ್ಲಿ! ಪ್ರಯತ್ನಿಸಿ ನೋಡಿ!

Arecanut Farming: ಮಲೆನಾಡು ಭಾಗದಲ್ಲಿ ದಾವಣಗೆರೆ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮೊದಲಾದ ಸ್ಥಳದಲ್ಲಿ ಜನರು ಮೆಚ್ಚಿಕೊಂಡಿರುವ ಕೃಷಿಯಲ್ಲಿ ಅಡಿಕೆ ಕೃಷಿ ಕೂಡ ಒಂದು. ಈ ಕೃಷಿಯನ್ನು ಬಹಳ ಮುತುವರ್ಜಿಯಿಂದ ಮಾಡಿದರೆ ನೀವು ಕೇವಲ ಒಂದು ಎಕರೆಗೆ 10 ಲಕ್ಷ ರೂಪಾಯಿಗಳ ವರೆಗೆ ವರ್ಷಕ್ಕೆ ಆದಾಯ ಪಡೆಯಬಹುದು. ಅಷ್ಟೇ ಅಲ್ಲ ಇದಕ್ಕೆ ತಗುಲುವ ವೆಚ್ಚವು ಕೂಡ ಕಡಿಮೆ.

ಅಡಿಕೆ ಕೃಷಿ ಮಾಡುವುದು ಹೇಗೆ?

ಮೊಟ್ಟ ಮೊದಲನೆಯದಾಗಿ ಅಡಿಕೆ ಕೃಷಿ ಮಾಡುವಾಗ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಎಷ್ಟು ಅಂತರ ಇರಬೇಕು ಎನ್ನುವುದು ಬಹಳ ಮುಖ್ಯ. ನೀವು ಒಂದು ಎಕರೆ ಜಮೀನಿನಲ್ಲಿ ಅಡಿಕೆ ಗಿಡ ನೆಡುವುದಾದರೆ 9*9 ಅಥವಾ 10*10 ಅಡಿ ಅಂತರದಲ್ಲಿ ಗಿಡ ನಡಬೇಕು. ಜಮೀನಿನ ವ್ಯಾಪ್ತಿ ದೊಡ್ಡದಿದ್ದರೆ ಈ ಅಂತರವನ್ನು ಹೆಚ್ಚಿಸಿಕೊಳ್ಳಬಹುದು. ಈ ಅಂತರದಲ್ಲಿ ಇತರ ಉಪ ಬೆಳೆಗಳನ್ನು ಕೂಡ ಬೆಳೆಯಲು ಸಾಧ್ಯವಿದೆ. ಗಿಡಗಳ ನಡುವೆ ಇರುವ ಅಂತರದಿಂದಾಗಿ ಅಡಿಕೆ ಗಿಡಕ್ಕೆ ಬರುವಂತಹ ಕೊಳೆ ರೋಗ ಅಥವಾ ಇತರ ರೋಗಗಳು ಬರುವುದಿಲ್ಲ ಇದಕ್ಕೆ ಕಾರಣ ಸೂರ್ಯನ ಬೆಳಕು ಹಾಗೂ ಗಾಳಿ ಸರಿಯಾದ ಪ್ರಮಾಣದಲ್ಲಿ ಗಿಡಕ್ಕೆ ಸಿಗುತ್ತದೆ.

ರಾಸಾಯನಿಕ ಬೇಡ ಸಾವಯವ ಬಳಸಿ

ಬಹಳ ವರ್ಷಗಳಿಂದ ಅಡಿಕೆ ಕೃಷಿಯಲ್ಲಿ ಫಸಲು ಚೆನ್ನಾಗಿ ಬರಲಿ ಎಂದು ರಾಸಾಯನಿಕ ಗೊಬ್ಬರ ಕಳೆ ನಾಶಕ ಕೀಟ ನಾಶಕ ಮೊದಲಾದವುಗಳನ್ನು ಬಳಸಿಕೊಂಡು ಬರಲಾಗುತ್ತಿದೆ. ಫಸಲು ಸಿಗುವುದಕ್ಕಿಂತ ಗಿಡ ಹಾಳಾಗುವುದೇ ಜಾಸ್ತಿ. ಸಾವಯವ ಕೃಷಿ ಮಾಡುವುದು ಒಳ್ಳೆಯದು. ಸಾವಯವ ಗೊಬ್ಬರಗಳನ್ನು ಬಳಸಿ. ಕೃಷಿ ಇಲಾಖೆಯಲ್ಲಿಯೂ ಕೂಡ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ರಾಸಾಯನಿಕ ಹಾಕಿ ಬೆಳೆಸಿದ ಅಡಿಕೆ ಗಿಡದಲ್ಲಿ ಐದರಿಂದ ಆರು ಕೆಜಿ ಅಡಿಕೆ ಸಿಗುತ್ತೆ ಎಂದಾದರೆ, ಸಾವಿರ ಗೊಬ್ಬರ ಹಾಕಿ ಬೆಳೆಸಿದ ಅಡಿಕೆ ಮರದಿಂದ ಹತ್ತರಿಂದ ಹನ್ನೆರಡು ಕೆಜಿ ವರೆಗೆ ಅಡಿಕೆ ಪಡೆಯಬಹುದು. ಸಾವಯವ ಕೃಷಿ ನಿಮ್ಮ ಫಸಲನ್ನೂ ದುಪ್ಪಟ್ಟಾಗಿಸುತ್ತದೆ. ಈ ರೀತಿ ಮಾಡುವುದರಿಂದ ನೀವು ಒಂದು ಎಕರೆ ಜಮೀನಿಗೆ 100 ಕ್ವಿಂಟಲ್ ವರೆಗೆ ಅಡಿಕೆ ಬೆಳೆ ತೆಗೆಯಬಹುದು. ವರ್ಷಕ್ಕೆ 5 ರಿಂದ 10 ಲಕ್ಷ ರೂಪಾಯಿಗಳ ವರೆಗೆ ಸುಲಭವಾಗಿ ಗಳಿಸಬಹುದು.

ಅಡಿಕೆ ಕೃಷಿಗೆ ತಗುಲುವ ವೆಚ್ಚ ಎಷ್ಟು?

ಒಂದು ಎಕರೆ ಜಮೀನಿನಲ್ಲಿ 400ರಿಂದ 600 ಅಡಿಕೆ ಗಿಡಗಳನ್ನು ನೆಡಬಹುದು. ಸಮತಟ್ಟಾದ ಪ್ರದೇಶದಲ್ಲಿ ನೀವು ಅಡಿಕೆ ಗಿಡ ಬೆಳೆಯುವದಾದರೆ ಆರಂಭದಲ್ಲಿ ಕೇವಲ ಐವತ್ತು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಈ ಕೃಷಿ ಆರಂಭಿಸಬಹುದು. ಇತ್ತೀಚಿಗೆ ಬೇಗ ಫಸಲನ್ನು ನೀಡುವಂತಹ ಅಡಿಕೆ ಗಿಡಗಳು ಕೂಡ ಲಭ್ಯವಿದೆ. ಉತ್ತಮ ಫಸಲು ನೀಡುವಂತಹ ಅಡಿಕೆ ಗಿಡವನ್ನು ಆಯ್ಕೆ ಮಾಡಿಕೊಂಡು ಬಂದು ನಿಮ್ಮ ಜಮೀನಿನಲ್ಲಿ ನೆಟ್ಟರೆ, ಲಕ್ಷ ಲಕ್ಷ ಆದಾಯವನ್ನು ಸುಲಭವಾಗಿ ಗಳಿಸಬಹುದು.

Comments are closed.