Har Ghar Tiranga 2023: ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ತಂಗೊಂಡು ನಾಳೆ ತಪ್ಪದೇ ಇಲ್ಲಿ ಅಪ್ಲೋಡ್ ಮಾಡಿ; ಮಿಸ್ ಮಾಡ್ಬೇಡಿ, ನಿಮ್ಮ ಹೆಸರಿನಲ್ಲಿಯೇ ಸರ್ಟಿಫೀಕೆಟ್ ಕೂಡ ಸಿಗತ್ತೆ!

Har Ghar Tiranga 2023: ಹರ್ ಘರ್ ತಿರಂಗಾ – ಅಜಾದಿ ಕಾ ಅಮೃತ್ ಮಹೋತ್ಸವ್ ಅಭಿಯಾನಕ್ಕೆ ಇದು ಎರಡನೇಯ ವರ್ಷ (Second year). ಕಳೆದ ವರ್ಷ ಅಗಾಧವಾದ ಯಶಸ್ಸನ್ನು ಗಳಿಸಿದ್ದ ಈ ಅಭಿಯಾನ ಈಗಲೂ ಮುಂದುವರೆಯುತ್ತೆ. ಈ ಅಭಿಯಾನ 13 ಅಗಸ್ಟ್ (13th August) ನಿಂದ ಆರಂಭವಾಗಿ 15 ಅಗಸ್ಟ್ ಗೆ ಮುಗಿಯುತ್ತೆ. ಭಾರತ ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗಿ (Independence day) 76 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಈ ಸಮಯದಲ್ಲಿ ಹರ್ ಘರ್ ತಿರಂಗ ಎನ್ನುವ ಅಭಿಯಾನ ನಡೆಸಲಾಗುತ್ತಿದ್ದು ಪ್ರತಿಯೊಬ್ಬರಿಗೂ ಮತ್ತೊಂದು ಉತ್ತಮ ಅವಕಾಶ ಮಾಡಿಕೊಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modiji) ಅವರೇ ಈ ಬಗ್ಗೆ  ಮಾಹಿತಿಯನ್ನು ನೀಡಿದ್ದಾರೆ.

ರಾಷ್ಟ್ರ ಧ್ವಜದೊಂದಿಗೆ ಸೆಲ್ಫಿ:

ನೀವು ನಾಳೆ ಅಂದರೆ ಆಗಸ್ಟ್ 15ರಂದು ರಾಷ್ಟ್ರ ಧ್ವಜದೊಂದಿಗೆ ಸೆಲ್ಫಿ ತೆಗೆದುಕೊಂಡು ಹಾರಕಾರ ತಿರಂಗ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬಹುದು. ವೆಬ್ಸೈಟ್ ಲಿಂಕ್ ಇಲ್ಲಿದೆ https://harghartiranga.com/

ಅಪ್ಲೋಡ್ ಮಾಡುವುದು ಹೇಗೆ?

  • ಮೊದಲಿಗೆ https://harghartiranga.com/  ತೆರೆಯಿರಿ.
  • ಅಲ್ಲಿ ನಿಮ್ಮ ಹೆಸರನ್ನು ನಮೂದಿಸಿ. “ಫೈಲ್ಗಳನ್ನು ಬ್ರೌಸ್ ಮಾಡಿ” ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಅಲ್ಲಿ ನೀವು ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಲು ಅನುಮತಿ ಕೊಡುತ್ತದೆ.
  • ನಂತರ ನಿಮ್ಮ ಹೆಸರು ಹಾಗೂ ಫೋಟೋವನ್ನು ಬಳಸಿಕೊಳ್ಳಲು ಹೋಟೆಲ್ ಗೆ ಅನುಮತಿ ನೀಡಬೇಕು.
  • ನಂತರ ಸಲ್ಲಿಸು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಇನ್ನು ನೀವು ಅಪ್ಲೋಡ್ ಮಾಡಿರುವ ಸೆಲ್ಫಿ ಯನ್ನು ಆಗಸ್ಟ್ 16, ಎಂಟು ಗಂಟೆಗಳಿಂದ ನೋಡಲು ಸಾಧ್ಯವಿದೆ. ಅದಕ್ಕಾಗ್ “ಸೆಲ್ಪಿಗಳು” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಹೆಸರನ್ನು ನಮೂದಿಸಿ. ಇಷ್ಟು ಮಾಡಿದ್ರೆ ನೀವು ಅಪ್ಲೋಡ್ ಮಾಡಿರುವ ಸೆಲ್ಫಿ ಕಾಣಿಸುತ್ತದೆ. ಈ ವೆಬ್ಸೈಟ್ನಲ್ಲಿ ಆರು ಕೋಟಿಗೂ ಹೆಚ್ಚಿನ ಸೆಲ್ಫಿಗಳು ಈಗಾಗಲೇ ಅಪ್ಲೋಡ್ ಆಗಿದೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಹರ್ ಘರ್ ತಿರಂಗ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ನಾವು ಕೂಡ ಕೈಜೋಡಿಸೋಣ ಅಲ್ಲವೇ.

Comments are closed.