Lakshmi Pooja: ತಪ್ಪಿಯೂ ಶುಕ್ರವಾರದ ದಿನ ಈ ವಸ್ತುಗಳನ್ನು ಖರೀದಿಸಿ ಮನೆಗೆ ತರಬೇಡಿ, ಇದರಿಂದ ಲಕ್ಷ್ಮಿ ದೇವಿ ಮುನಿಸಿಕೊಂಡು ನಿಮ್ಮನ್ನು ಬಿಟ್ಟುಹೋಗುವುದು ಖಂಡಿತ!

Lakshmi Pooja: ನಮ್ಮ ಹಿಂದೂ ಸಂಪ್ರದಾಯದಲ್ಲಿ ಶುಕ್ರವಾರ ಕೆ ಹೆಚ್ಚಿನ ಮಹತ್ವವಿದೆ. ಇದು ಲಕ್ಷ್ಮಿಗೆ ಮೀಸಲಾಗಿರುವ ವಾರವಾಗಿರುವುದರಿಂದ ಲಕ್ಷ್ಮಿ ದೇವಿಯನ್ನು ಮನೆಗೆ ಕರೆ ತರಲು ಪೂಜೆ ಪುನಸ್ಕಾರಾದಿಗಳನ್ನು ಮಾಡಲಾಗುತ್ತದೆ. ಶುಕ್ರವಾರದ ದಿನ ವಿಶೇಷ ಪೂಜೆಗಳನ್ನು ಕೂಡ ಮಾಡಲಾಗುತ್ತೆ, ಲಕ್ಷ್ಮಿ ದೇವಿಗೆ ಇಷ್ಟವಾಗುವ ನೈವೇದ್ಯಗಳನ್ನು ಮಾಡಿ ಸಮರ್ಪಣೆ ಮಾಡಲಾಗುತ್ತೆ ಅದೇ ರೀತಿ ಲಕ್ಷ್ಮಿ ಅಷ್ಟೋತ್ತರ ನಾಮಾವಳಿಗಳನ್ನು ಕೂಡ ಜಪಿಸಲಾಗುತ್ತದೆ. ಅದೇ ರೀತಿ ಶುಕ್ರವಾರ ಕೆಲವು ವಸ್ತುಗಳನ್ನು ಖರೀದಿ ಮಾಡಿದರೆ ಕೂಡ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗೆಯೇ ಕೆಲವು ವಸ್ತುಗಳನ್ನು ಖರೀದಿ ಮಾಡುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಈ ದಿನ ಇಂತಹ ವಸ್ತುಗಳನ್ನು ಖರೀದಿ ಮಾಡಿದ್ರೆ ದಾರಿದ್ರಿಯ ಉಂಟಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಶುಕ್ರವಾರದ ದಿನ ಯಾವೆಲ್ಲ ವಸ್ತುಗಳನ್ನು ಖರೀದಿ ಮಾಡಬಾರದು ನೋಡೋಣ.

ಅಡಿಗೆ ಮನೆಯ ವಸ್ತುಗಳು:

ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ಅಡುಗೆ ಮನೆಯ ವಸ್ತುಗಳನ್ನು ಖರೀದಿ ಮಾಡಬಾರದು ಹೀಗೆ ಮಾಡಿದರೆ ಧಾನ್ಯದ ಕೊರತೆ ಉಂಟಾಗುತ್ತದೆ ಎಂದು ಹೇಳಲಾಗುತ್ತೆ. ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಿಗೂ ಕೂಡ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ. ಹಾಗಾಗಿ ಆಕೆಯನ್ನು ಸಂತೃಪ್ತಿಪಡಿಸಲು ಶುಕ್ರವಾರದ ದಿನವನ್ನು ಹೊರತುಪಡಿಸಿ ಬೇರೆ ದಿನ ಅಡುಗೆ ಮನೆಗೆ ಬೇಕಾಗಿರುವ ಸಾಮಗ್ರಿಗಳನ್ನು ತನ್ನಿ.

ಪೂಜೆ ಸಾಮಗ್ರಿಗಳು:

ಶುಕ್ರವಾರದ ದಿನ ಪೂಜೆ ಮಾಡಲು ಪೂಜಾ ವಸ್ತುಗಳು ಬೇಕು ಆದರೆ ಲಕ್ಷ್ಮಿಗೆ ಪೂಜೆಗೆ ಬೇಕಾಗಿರುವ ವಸ್ತುಗಳನ್ನು ನೀವು ಹಿಂದಿನ ದಿನವೇ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಶುಕ್ರವಾರದ ದಿನ ಪೂಜಾ ಸಾಮಗ್ರಿಗಳನ್ನು ಖರೀದಿಸಿದರೆ ಅದು ಲಕ್ಷ್ಮಿಗೆ ಇಷ್ಟವಾಗುವುದಿಲ್ಲ ಎನ್ನುತ್ತ ಶಾಸ್ತ್ರ.

ಸಾಲ ನೀಡುವುದು:

ಶುಕ್ರವಾರದ ದಿನ ಅಂದರೆ ಲಕ್ಷ್ಮಿ ಮನೆಗೆ ಬರುವ ದಿನ ಹಾಗಾಗಿ ಈ ಸಂದರ್ಭದಲ್ಲಿ ಬೇರೆಯವರಿಗೆ ಸಾಲ ನೀಡುವುದು ಅಥವಾ ಬೇರೆಯವರಿಂದ ಸಾಲ ಪಡೆದುಕೊಳ್ಳುವುದನ್ನು ಮಾಡಬಾರದು. ಈ ರೀತಿ ಮಾಡಿದರೆ ಭವಿಷ್ಯದಲ್ಲಿ ಸದಾ ಸಾಲದಲ್ಲಿಯೇ ಮುಳುಗಿರಬೇಕಾಗುತ್ತದೆ. ಅದರಿಂದ ಶುಕ್ರವಾರದ ದಿನ ಬೇರೆಯವರೊಂದಿಗೆ ಹಣದ ವ್ಯವಹಾರ ಮಾಡದೆ ಇರುವುದೇ ಒಳ್ಳೆಯದು.

ಸಕ್ಕರೆ ಬಳಕೆ:

ಲಕ್ಷ್ಮಿಗೆ ಪ್ರಿಯವಾದ ನೈವೇದ್ಯಗಳನ್ನು ಸಿಹಿಯಿಂದಲೇ ತಯಾರಿಸಲಾಗುತ್ತದೆ ಹಾಗಾಗಿ ಸಕ್ಕರೆಯನ್ನು ಲಕ್ಷ್ಮಿಗೆ ಇಷ್ಟವಾಗಿರುವ ವಸ್ತು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶುಕ್ರವಾರದ ದಿನ ಸಕ್ಕರೆ ಖರೀದಿ ಮಾಡುವುದು ಅಥವಾ ಸಕ್ಕರೆ ಎಸೆಯುವುದು ಸಕರೆಯನ್ನು ಮನೆಯಲ್ಲಿ ಚೆಲ್ಲುವುದು ಇಂತಹ ತಪ್ಪುಗಳನ್ನು ಮಾಡಬಾರದು.

ನಾವು ಮನೆಯಲ್ಲಿ ಪ್ರತಿ ಶುಕ್ರವಾರ ಮಾಡುವ ಸಣ್ಣಪುಟ್ಟ ತಪ್ಪುಗಳು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಬಹುದು ಅದೇ ರೀತಿ ಸರಿಯಾಗಿರುವ ಸಣ್ಣ ಪುಟ್ಟ ಕೆಲಸಗಳು ಕೂಡ ಲಕ್ಷ್ಮಿ ದೇವಿಯನ್ನು ಸಂತೃಪ್ತಿಪಡಿಸಬಹುದು. ಹಾಗಾಗಿ ಲಕ್ಷ್ಮಿ ದೇವಿಯನ್ನು ಉಳಿಸಿಕೊಳ್ಳಲು ತಪ್ಪದೇ ಈ ಕೆಲಸಗಳನ್ನು ಮಾಡಿ.

Comments are closed.