Generic medicine vs branded Medicine: ಜನರಿಕ್ ಔಷಧಿಗಳನ್ನು ಪ್ರಿಸ್ಕ್ರೈಬ್ ಮಾಡಿ ಅಂದ್ರೆ ವೈದ್ಯರು ವಿರೋಧ ವ್ಯಕ್ತಪಡಿಸ್ತಾ ಇರೋದು ಯಾಕೆ? ಬ್ರಾಂಡೆಡ್ ಔಷಧಿಗೂ ಜನರಿಕ್ ಮೆಡಿಸಿನ್ ಗೂ ಏನು ವ್ಯತ್ಯಾಸ?

Generic medicine vs branded Medicine: ಒಬ್ಬ ವ್ಯಕ್ತಿಗೆ ಯಾವುದೇ ಅನಾರೋಗ್ಯ ಲಕ್ಷಣಗಳು (Health issues) ಇದ್ದರೂ ಅದನ್ನು ಸರಿಪಡಿಸುವುದಕ್ಕೆ ಒಬ್ಬ ವೈದ್ಯರು (Doctor), ವೈದ್ಯರು ಬರೆದುಕೊಡುವ ಔಷಧ ಬೇಕೇ ಬೇಕು. ಹೋದರು ಯಾವ ರೋಗಕ್ಕೆ ಯಾವ ಔಷಧ ಬರೆದು ಕೊಡುತ್ತಾರೋ ಅದನ್ನು ರೋಗ ಗುಣ ಆಗುವುದಕ್ಕೇ ವ್ಯಕ್ತಿ ತೆಗೆದುಕೊಳ್ಳುವುದು ಸಹಜ. ಇದೀಗ ವೈದ್ಯರು ಬ್ರಾಂಡೆಡ್ ಔಷಧೀಯ ಬದಲು ಜನರಿಕ್ ಔಷಧಿ (Generic) nಯನ್ನು ಜನರಿಗೆ ಬರೆದು ಕೊಡಬೇಕು ಎಂದು ಸರ್ಕಾರ ಹೊಸ ರೂಲ್ಸ್ ತಂದಿದೆ ಇದರ ಸಾಧ್ಯತೆಗಳನ್ನು ನೋಡುವುದಾದರೆ ಜನರಿಕ್ ಔಷಧಗಳು ಹಾಗೂ ಬ್ರಾಂಡೆಡ್ ಔಷಧಗಳಿಗೂ ಇರುವ ವ್ಯತ್ಯಾಸ ಏನು ಎಂಬುದನ್ನು ಮೊದಲು ತಿಳಿಯಬೇಕು.

ಏನಿದು ಜನರಿಕ್ ಔಷಧ?

ಒಂದು ರೋಗ ಗುಣವಾಗುವುದಕ್ಕೆ ಬೇಕಾಗಿರುವ ಕಂಟೆಂಟ್ ಅಥವಾ ವಸ್ತುಗಳನ್ನು ಹಾಕಿ ತಯಾರಿಸಲಾಗುವ ಔಷಧ. ಉದಾಹರಣೆಗೆ ಜ್ವರ ಕೆಮ್ಮು ನೆಗಡಿ ಇದ್ದರೆ ತೆಗೆದುಕೊಳ್ಳುವ ಪ್ಯಾರಾಸಟ್ಮೋಲ್ ಎಂದುಕೊಳ್ಳಿ. ಇದು ಒಂದು ಜನರಿಕ್ ಔಷಧ ಅಷ್ಟೇ. ಇದೆ ಮೂಲ ವಸ್ತುಗಳನ್ನು ಇಟ್ಟುಕೊಂಡು ಬ್ರ್ಯಾಂಡೆಡ್ ಕಂಪನಿಗಳು ಕೂಡ ಔಷಧ ತಯಾರಿಸುತ್ತವೆ ಉದಾಹರಣೆಗೆ ಕ್ರೋಸಿನ್ ಡೋಲೋ ಮೊದಲಾದವು. ಪ್ಯಾರಾಸೆಟ್ಮಾಲ್ ಒಂದು ಜನರಿಕ್ ಔಷಧವಾದರೆ ಡೋಲೋ ಕ್ರೋಸಿನ ಎನ್ನುವುದು ಬ್ರಾಂಡ್ ಆಗಿರುತ್ತದೆ.

ಜನರಿಕ್ ಔಷಧಗಳ ಬೆಲೆ

ಬ್ರಾಂಡೆಡ್ ಔಷಧಿಗಳಿಗೆ ಹೋಲಿಸಿದರೆ ಜನರಿಕ್ ಔಷಧಗಳ ಬೆಲೆ ಕಡಿಮೆ ಇರುತ್ತದೆ. ಒಂದು ರೋಗಕ್ಕೆ ಒಂದು ಔಷಧವನ್ನು ಕಂಡುಹಿಡಿಯಲಾಗುತ್ತೆ. ಅದರ ಪೇಟೆಂಟ್ ಪಡೆದುಕೊಂಡ ನಂತರ ಸ್ವಲ್ಪ ಸಮಯದಲ್ಲಿ ಪೇಟೆಂಟ್ ಅವಧಿ ಮುಗಿಯುತ್ತದೆ. ಆಗ ಅದೇ ಫಾರ್ಮುಲಾ ಇಟ್ಕೊಂಡು ಬೇರೆ ಕಂಪನಿಗಳು ಔಷಧಿ ತಯಾರಿಸುತ್ತವೆ. ಆಯಾ ಆಯಾ ಬ್ರಾಂಡ್ ಗಳಿಗೆ ತಕ್ಕ ಹಾಗೆ ಬ್ರಾಂಡ್ ಗಳು ತಯಾರಿಸುವ ಬಣ್ಣ ಗಾತ್ರ ಎಲ್ಲವೂ ಬದಲಾಗಿರುತ್ತದೆ. ಅದೇ ರೀತಿ ಬ್ರಾಂಡ್ಗಳಿಂದ ಬ್ರಾಂಡುಗಳಿಗೆ ಬೆಲೆಯೂ ಕೂಡ ವ್ಯತ್ಯಾಸವಿರುತ್ತದೆ.

ಜನರಿಕ್ ಔಷಧವನ್ನು ಅಷ್ಟೇ ಇನ್ನು ಮುಂದೆ ವೈದ್ಯರು ಬರೆದು ಕೊಡಬೇಕು ಎಂದು ಹೇಳಲಾಗಿದೆ. ಜೊತೆಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿರಬೇಕು ಜನರಿಕ್ ಔಷಧಗಳ ಹೆಸರುಗಳನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆದು ಕೊಡಬೇಕು ಎಂದು ಸರ್ಕಾರ ವೈದ್ಯರಿಗೆ ಸಲಹೆ ನೀಡಿದೆ. ಯಾವುದೇ ವೈದ್ಯರು ಬ್ರಾಂಡೆಡ್ ಔಷಧಿಗಳನ್ನು ಬರೆದುಕೊಟ್ಟರೆ ಅವರಿಗೆ ಭಾರಿ ಪ್ರಮಾಣದ ದಂಡ ವಿಧಿಸಲಾಗುವುದು. ಜೊತೆಗೆ ಈ ಬಗ್ಗೆ ಹೆಚ್ಚಿನ ಗಮನ ವಹಿಸದೆ ಇದ್ದಲ್ಲಿ ವೈದ್ಯರ ಪರವಾನಿಗೆ ರದ್ದು ಪಡಿಸುವ ಸಾಧ್ಯತೆ ಇದೆ ಎಂದು  ಎನ್ ಎಂ ಸಿ (National medical commission) ಸರ್ಕಾರ ತಿಳಿಸಿದೆ.

 Indian medical association (IMA) ವಿರೋಧ ಯಾಕೆ?

ಜನರಿಕಾ ಔಷಧಗಳನ್ನೇ ಬರೆದು ಕೊಡಿ ಅಂತ ಸರ್ಕಾರ ಹೇಳಿದರೆ ವೈದ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸ್ತಾ ಇರೋದು ಯಾಕೆ? ವೈದ್ಯರು ಅವರದ್ದೇ ಆದ ಕಾರಣಗಳನ್ನು ಕೂಡ ಕೊಡುತ್ತಾರೆ ಮೊದಲನೆಯದಾಗಿ ಜನರಿಕ್ ಔಷಧಗಳ ತಯಾರಿಕೆಗೆ ಯಾವುದೇ ಗ್ಯಾರಂಟಿ ಇರೋದಿಲ್ಲ ಹಾಗಾಗಿ ಜನರಿಕ್ ಔಷಧಗಳು ಸೇಫ್ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಕೊಟ್ಟರೆ ಜನರಿಗೆ ಸೇಫ್ ಎಂದು ನಮಗೆ ಹೇಳಲು ಸಾಧ್ಯವಿದೆ. ಅದೇ ರೀತಿಯಾಗಿ ನಾವು ಜನರೇಕಾಂಶದ ಬರೆದುಕೊಟ್ಟರೆ ಅದು ಎಲ್ಲಾ ಔಷಧ ಅಂಗಡಿಗಳಲ್ಲೂ ಸಿಗುವುದಿಲ್ಲ ಹಾಗಾಗಿ ಮತ್ತೆ ಬ್ರಾಂಡೆಡ್ ಔಷಧಗಳನ್ನು ಜನರು ಹುಡುಕಿ ಕೊಳ್ಳುತ್ತಾರೆ ಅಲ್ಲಿಗೆ ನಮಗೆ ಸಿಗುವ ಗೌರವವಾದರೂ ಏನು?

ಇನ್ನು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಜನರಿಕ್ ಔಷಧಿಗಳನ್ನು ಕೊಟ್ಟರೆ ಅವರು ಗುಣಮುಖ ಆಗದೆ ಇದ್ದಲ್ಲಿ ಸಂಬಂಧಿಕರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ದುಡ್ಡು ಕೊಡಲು ಸಿದ್ಧರಿದ್ರು ಯಾಕೆ ಬ್ರ್ಯಾಂಡೆಡ್ ಔಷಧವನ್ನು ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಒಬ್ಬ ಜವಾಬ್ದಾರಿ ಇರುವ ವೈದ್ಯರಾಗಿ ನಾವು ಜನರಿಕ್ ಔಷಧಗಳನ್ನು ಯಾವುದೇ ದೃಢೀಕರಣ ಇಲ್ಲದೆ ಜನರಿಗೆ ಸಜೆಸ್ಟ್ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದು ಸರ್ಕಾರದ ಈ ನಿಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.