Motte Bhagya: ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವರು: ಮಕ್ಕಳು ಕುಣಿದುಕೊಂಡು ಶಾಲೆಗೆ ಬರಲು ಇದೊಂದೇ ವಿಷಯ ಸಾಕು!

Motte Bhagya: ಈ ಬಾರಿ ರಾಜ್ಯ ಸರ್ಕಾರ (Karnataka government) ಅಧಿಕಾರಕ್ಕೆ ಬಂದ ಮೇಲೆ ಒಂದಾದ ಮೇಲೆ ಒಂದರಂತೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಾ ಬರುತ್ತದೆ ಅದರ ಜೊತೆಗೆ ಇತ್ತೀಚಿಗೆ ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಸಲುವಾಗಿಯೂ ರಾಜ್ಯ ಸರ್ಕಾರ ಮೊಟ್ಟೆ ಭಾಗ್ಯ (Egg for children) ವನ್ನು ಕೂಡ ಘೋಷಿಸಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ (Government school) ಮಕ್ಕಳಿಗೆ ಈಗಾಗಲೇ ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ನೀಡಲಾಗುತ್ತಿದೆ ಇದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಇವುಗಳನ್ನು ಬಿಸಿ ಊಟದ ಜೊತೆಗೆ ಒದಗಿಸಲಾಗುತ್ತಿದೆ. ಇತ್ತೀಚೆಗೆ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮದ ಬಳಿಕ ಮಕ್ಕಳ ಜೊತೆಗೆ ಊಟವನ್ನು ಮಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮುಂದೆ ಮಕ್ಕಳಿಗೆ ವಾರದಲ್ಲಿ ಒಂದಲ್ಲ ಎರಡು ದಿನ ಮೊಟ್ಟೆಯನ್ನು ಕೂಡ ನೀಡುವುದಾಗಿ ತಿಳಿಸಿದ್ದಾರೆ.

ಹೌದು ಶಿಕ್ಷಣ ಕೃಷಿ ಸಚಿವ ಮಧು ಬಂಗಾರಪ್ಪ (Madhu bangarappa) ಮೊಟ್ಟೆ ಭಾಗ್ಯ ಯೋಜನೆಗೆ ಚಾಲನೆ ನೀಡಿದ್ದಾರೆ ಇಂದಿನಿಂದಲೇ ಶಾಲಾ ಮಕ್ಕಳಿಗೆ ವಾರಕ್ಕೆ ಎರಡು ದಿನ ಹೊಟ್ಟೆ ವಿತರಣೆ ಮಾಡಲಾಗುತ್ತದೆ. ಕಳೆದ ಬಾರಿ 8ನೇ ತರಗತಿಯವರಿಗೆ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಈಗ ಒಂದರಿಂದ 10ನೇ ತರಗತಿಯ ವರೆಗೂ ಕೂಡ ವಾರದಲ್ಲಿ ಎರಡು ದಿನ ಮೊಟ್ಟೆ ಸಿಗುತ್ತದೆ. ಮಕ್ಕಳು ಹೆಚ್ಚು ಹೆಚ್ಚು ಶಾಲೆಗೆ ಬರುವಂತೆ ಆಗಬೇಕು ಅವರಿಗೆ ಶಾಲೆಯಲ್ಲಿಯೇ ಪೌಷ್ಟಿಕ ಆಹಾರ ಕೂಡ ಸಿಗಬೇಕು ಎನ್ನುವ ಉದ್ದೇಶದಿಂದ ಮೊಟ್ಟೆ ಭಾಗ್ಯ ಆರಂಭಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಇದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಲಭ್ಯವಾಗಲಿದೆ.

Comments are closed.