FD in Bank: ಎಫ್ ಡಿ ಠೇವಣಿ ಯಾವ ಬ್ಯಾಂಕ್ ನಲ್ಲಿ ಇಟ್ರೆ ಹೆಚ್ಚಿನ ಲಾಭ ಸಿಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಡೀಟೇಲ್ಸ್!

FD in Bank: ಸಾಮಾನ್ಯವಾಗಿ ಸ್ಥಿರ ಠೇವಣಿ ಅಥವಾ ಎಫ್ ಡಿ (FD) ಯನ್ನು ಹೆಚ್ಚಿನ ಬಡ್ಡಿ ದರ ಸಿಗುವಲ್ಲಿ ಇಡುತ್ತೇವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಕೆನರ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೊದಲಾದ ಬ್ಯಾಂಕುಗಳು ಇತ್ತೀಚಿಗೆ ತಮ್ಮ ಎಫ್ ಡಿ ದರಗಳನ್ನು ಹೆಚ್ಚಿಸಿದ್ದು ಒಂದು ಠೇವಣಿಯ (Deposit)  ಮೇಲೆ ಏಳರಿಂದ ಒಂಬತ್ತು ಪರ್ಸೆಂಟ್ ನಷ್ಟು ಬಡ್ಡಿದರವನ್ನು ಹೆಚ್ಚಿಸಿವೆ. ಎಫ್ ಡಿ ಖಾತೆಯನ್ನು ತೆರೆದರೆ ಅವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಕನಿಷ್ಠ ಏಳು ದಿನದಿಂದ ಗರಿಷ್ಠ 10 ವರ್ಷದವರೆಗೆ ನೀವು ಬ್ಯಾಂಕುಗಳಲ್ಲಿ ಎಫ್ ಡಿ ಇಟ್ಟು ಹೆಚ್ಚಿನ ಲಾಭ ಪಡೆಯಬಹುದು. ಹಾಗಾದ್ರೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿದರ ಇದೆ ನೋಡೋಣ.

ಎಸ್ ಬಿ ಫಿಕ್ಸೆಡ್ ಡೆಪಾಸಿಟ್ಎಫ್ ಬಿ ನಲ್ಲಿ 400 ದಿನಗಳ ಅಮೃತ್ ಕಲಶ್ ಯೋಜನೆಯ ಅಡಿಯಲ್ಲಿ ಎಫ್ ಡಿ ಇತರೆ ಹೆಚ್ಚಿನ ಲಾಭ ಪಡೆಯಬಹುದು. ಠೇವಣಿಗೆ ಸಾಮಾನ್ಯ ಜನರಿಗೆ 7.10% ನಷ್ಟು ಬಡ್ಡಿ ಸಿಕ್ಕರೆ ಹಿರಿಯ ನಾಗರಿಕರಿಗೆ 7.60 ಶೆ. ನಷ್ಟು ಬಡ್ಡಿ ಸಿಗುತ್ತದೆ. ಹೊಸ ಬಡ್ಡಿದರ ಏಪ್ರಿಲ್ 12 2023 ರಂದು ಜಾರಿಗೆ ಬಂದಿದೆ ವರ್ಷದ ಕೊನೆಯವರೆಗೂ ಇದೇ ಬಡ್ಡಿದರ fd ಠೇವಣಿ ಇಟ್ಟರೆ ಮಾನ್ಯವಾಗುತ್ತದೆ.

ಇನ್ನು 2 ರಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಗೆ ಠೇವಣಿ ಇಟ್ಟರೆ 7.50% ವರೆಗೆ ಬಡ್ಡಿ ಸಿಗುತ್ತದೆ. ಅದೇ ರೀತಿ ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಗೆ 7.30% ಹಾಗೂ 3 ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಗೆ 7% ಬಡ್ಡಿ ಸಿಗುತ್ತದೆ. ಅದೇ ರೀತಿ ಏಳು ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಠೇವಣಿ ಇಟ್ಟರೆ 3.50% ನಿಂದ 6.25% ವರೆಗೂ ಬಡ್ಡಿಯನ್ನು ಪಡೆಯಬಹುದು.

ಅಷ್ಟೇ ಅಲ್ಲ ಮೂರು ವರ್ಷಕ್ಕಿಂತ ಕಡಿಮೆ ಅವಧಿಗೆ ಸಾಮಾನ್ಯ ಜನರು ಠೇವಣಿ ಇಟ್ಟರೆ 7.19% ಬಡ್ಡಿ ಸಿಗುತ್ತದೆ. ಮೂರು ವರ್ಷದಿಂದ ಹತ್ತು ವರ್ಷದ ಅವಧಿಗೆ 6.66%, ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ 3% ನಿಂದ 5.88% ವರೆಗೆ ಬಡ್ಡಿ ಸಿಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಿ ಎಂ ಪಿ ಬ್ಯಾಂಕ್ ಕೂಡ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿದರವನ್ನು ನೀಡುತ್ತಿದೆ ಇದು ಜೂನ್ 1, 2023 ರಿಂದ ಜಾರಿಗೆ ಬಂದಿರುವ ಬಡ್ಡಿ ದರಗಳ ಆಗಿವೆ. 80 ವರ್ಷಕ್ಕಿಂತ ಮೇಲ್ಪಟ್ಟ ಸೂಪರ್ ಸೀನಿಯರ್ ಗಳು ಎರಡು ವರ್ಷ ಅಥವಾ ಮೂರು ವರ್ಷದವರೆಗೆ ಠೇವಣಿ ಇಟ್ಟರೆ 7.80% ಬಡ್ಡಿ ಸಿಗುತ್ತದೆ. ಅದೇ ರೀತಿ ಒಂದು ವರ್ಷದಿಂದ 443 ದಿನಗಳ ಹಾಗೂ 445 ದಿನಗಳಿಂದ ಎರಡು ವರ್ಷಗಳವರೆಗೆ ಠೇವಣಿ ಇಟ್ಟರೆ 7.60% ಬಡ್ಡಿ ನೀಡಲಾಗುತ್ತದೆ. ಅದೇ ರೀತಿ ಮೂರು ವರ್ಷದಿಂದ 10 ವರ್ಷಗಳ ಅವಧಿಗೆ 7.30% ಬಡ್ಡಿ ದೊರೆಯುತ್ತದೆ.

ಇನ್ನು ಹಿರಿಯ ನಾಗರಿಕರಿಗೂ ಕೂಡ ಉತ್ತಮ ಬಡ್ಡಿದರ ನಿಗದಿ ಮಾಡಲಾಗಿದ್ದು ಎರಡರಿಂದ ಮೂರು ವರ್ಷಗಳ ಅವಧಿಗೆ 7.50%, ಒಂದು ವರ್ಷದ ಅವಧಿಗೆ 7.25% ನಷ್ಟು ಬಡ್ಡಿ ಪಡೆಯಬಹುದು. ಇನ್ನು ಇದೇ ಠೇವಣಿ ಸಾಮಾನ್ಯ ಜನರಿಗೆ ಎರಡರಿಂದ ಮೂರು ವರ್ಷಗಳ ಅವಧಿಗೆ ಶೇಕಡ ಏಳು ಪರ್ಸೆಂಟ್ ನಷ್ಟು ಬಡ್ಡಿ ಸಿಕ್ಕರೆ ಒಂದು ವರ್ಷದ ಅವಧಿಗೆ 6.75% ನಷ್ಟು ಬಡ್ಡಿ ಸಿಗುತ್ತದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಮೇಲೆ ಬಡ್ಡಿದರ 3.50% ನಿಂದ 5.80% ವರೆಗೆ ಇದೆ.

ಕೆನರಾ ಬ್ಯಾಂಕ್:ಕೆನರಾ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರು 444 ದಿನಗಳ ಅವಧಿಗೆ ಠೇವಣಿ ಇಟ್ಟರೆ 7.75% ನಷ್ಟು ಬಡ್ಡಿ ಸಿಗುತ್ತದೆ. ಅದೇ ಸಾಮಾನ್ಯ ಜನ ಇದೇ ಅವಧಿಗೆ ಠೇವಣಿ ಇಟ್ಟರೆ 7.25% ನಷ್ಟು ಬಡ್ಡಿ ಸಿಗುತ್ತದೆ. 270 ದಿನಗಳಿಗಿಂತ ಕಡಿಮೆ ಠೇವಣಿಗೆ 4% ನಿಂದ 6.75% ವರೆಗೆ ಬಡ್ಡಿ ಸಿಗುತ್ತದೆ. ಇದೇ ಅವರಿಗೆ ಸಾಮಾನ್ಯ ಜನತೆವಣಿ ಇದ್ದರೆ 4 ರಿಂದ 6.9% ವರೆಗೂ ಬಡ್ಡಿಯನ್ನು ಪಡೆಯಲು ಅವಕಾಶವಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಇನ್ನು ಬ್ಯಾಂಕ್ ನಲ್ಲಿ ಸಿಗುವ ಬಡ್ಡಿ ದರವನ್ನು ನೋಡುವುದಾದರೆ 399 ದಿನಗಳಲ್ಲಿ ಠೇವಣಿ ಇಟ್ಟರೆ 7% ಹಾಗೂ ಮೂರರಿಂದ ಹತ್ತು ವರ್ಷಗಳ ಠೇವಣಿಗೆ 6.70% ನಷ್ಟು ಬಡ್ಡಿ ಸಿಗುತ್ತದೆ. ಇನ್ನು ಒಂದು ವರ್ಷಗಳಿಗಿಂತಲೂ ಕಡಿಮೆ ಅವಧಿಯ ಠೇವಣಿಗೆ 3 ರಿಂದ 5.25% ವರೆಗೆ ಬಡ್ಡಿ ಪಡೆಯಬಹುದು.

ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನಲ್ಲಿ ತಿರಂಗ ಪ್ಲಸ್ ಠೇವಣಿ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರು 399 ದಿನಗಳ ಠೇವಣಿಗೆ 7.75% ಹಾಗೂ ಸಾಮಾನ್ಯ ಜನರು 7.25% ಬಡ್ಡಿ ಪಡೆಯುತ್ತಾರೆ. ಇನ್ನು ಹಿರಿಯ ನಾಗರಿಕರು ಎರಡರಿಂದ ಮೂರು ವರ್ಷಗಳ ಅವಧಿಗೆ 5.55% ಹಾಗೂ ಐದರಿಂದ ಹತ್ತು ವರ್ಷಗಳ ಅವಧಿಗೆ 7.50% ಬಡ್ಡಿಯನ್ನು ಪಡೆಯಬಹುದು. ಇನ್ನು ಸಾಮಾನ್ಯ ಜನರಿಗೆ ಎರಡು ವರ್ಷಗಳ ಅವಧಿಗೆ 7.5% ಬಡ್ಡಿ ಹಾಗೂ ಮೂರರಿಂದ ಐದು ವರ್ಷಗಳ ಅವಧಿಗೆ 6.50% ಬಡ್ಡಿ ಸಿಗುತ್ತದೆ. ಹೀಗೆ ನೀವು ಯಾವ ಅವಧಿಯನ್ನು ಆಯ್ಕೆ ಮಾಡಿಕೊಂಡು ಎಫ್ಡಿ ಇಡುತ್ತೀರೋ, ಅದರ ಆಧಾರದ ಮೇಲೆ ಬಡ್ಡಿದರ ನಿಗದಿತವಾಗುತ್ತದೆ. ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಬಡ್ಡಿ ದರವನ್ನೇ ಬ್ಯಾಂಕ್ ನೀಡುತ್ತದೆ ಹಾಗಾಗಿ ನಿಮಗೆ ಅನುಕೂಲವಾಗುವಂತಹ ಅವಧಿಗೆ ಎಫ್ ಡಿ ಠೇವಣಿ ಇಡಬಹುದು.

Comments are closed.