Savings Account: ಬ್ಯಾಂಕ್ (Bank) ನಲ್ಲಿ ವ್ಯವಹಾರ ಮಾಡುವವರು ಚಾಲ್ತಿ ಖಾತೆ (Current Account) ಅಥವಾ ಉಳಿತಾಯ ಖಾತೆ (Savings Account) ಯನ್ನು ಹೊಂದಿರುತ್ತಾರೆ. ಹೆಚ್ಚಾಗಿ ಯಾವುದಾದರೂ ಉದ್ಯಮಿ ಮಾಡುವವರು ಅಥವಾ ಬೇರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡುವವರು ಚಾಲ್ತಿ ಖಾತೆ ಹೊಂದಿರುತ್ತಾರೆ ಆದರೆ ಸಾಮಾನ್ಯವಾಗಿ ಎಲ್ಲರೂ ಉಳಿತಾಯ ಖಾತೆಯನ್ನು ಬ್ಯಾಂಕ್ ನಲ್ಲಿ ಹೊಂದಿರುವುದು ಸಹಜ. ನೀವು ಬ್ಯಾಂಕಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ ಆದಾಯ ತೆರಿಗೆ ನಿಯಮದ ಪ್ರಕಾರ ಎಷ್ಟು ಠೇವಣಿ (Deposit) ಇಡಬಹುದು ಎಂಬುದನ್ನು ತಿಳಿದುಕೊಳ್ಳಬೇಕು ಇಲ್ಲವಾದರೆ ಆದಾಯದ ಮಿತಿಮೀರಿದರೆ ಟ್ಯಾಕ್ಸ್ (Tax) ಪಾವತಿ ಮಾಡಬೇಕಾಗುತ್ತೆ. ಇದನ್ನೂ ಓದಿ:BP Control: ಬಿಪಿ ನಿಯಂತ್ರಣದಲ್ಲಿ ಇರಬೇಕು ಅಂದ್ರೆ ಇದೊಂದನ್ನು ತಿನ್ನುವುದಕ್ಕೆ ರೂಢಿ ಮಾಡಿಕೊಳ್ಳಿ ಸಾಕು; ನಿಯಮಿತವಾಗಿ ಮಾತ್ರೆ ತಿನ್ನುವುದು ಕೂಡ ನಿಂತು ಹೋಗುತ್ತೆ!
ಉಳಿತಾಯ ಖಾತೆಯಲ್ಲಿ ನಗದು ಠೇವಣಿ ಮಿತಿ:
ನೀವು ಬ್ಯಾಂಕ್ ನಲ್ಲಿ ಸೇವಿಂಗ್ಸ್ ಅಕೌಂಟ್ ಅಥವಾ ಉಳಿತಾಯ ಖಾತೆ ಹೊಂದಿದ್ದರೆ ಅದರಲ್ಲಿ ಹಣ ವರ್ಗಾವಣೆ, ಮೊದಲಾದ ಸಮಸ್ಯೆಗಳು ಆಗಬಾರದು ಎನ್ನುವ ಕಾರಣಕ್ಕೆ ಮಿತಿಯನ್ನು ಹೇರಲಾಗಿದೆ. ದಿನಕ್ಕೆ ಗರಿಷ್ಠ ಒಂದು ಲಕ್ಷ ರೂಪಾಯಿಗಳ ವರೆಗೆ ಠೇವಣಿ ಇಡಬಹುದು ಕೆಲವೊಮ್ಮೆ ಕೆಲವು ಸಂದರ್ಭಗಳಲ್ಲಿ 2.5 ಲಕ್ಷಗಳ ವರೆಗೂ ಠೇವಣಿ ಇಡಬಹುದು. ಒಂದು ವರ್ಷದ ಅವಧಿಯಲ್ಲಿ ಉಳಿತಾಯ ಖಾತೆಯಲ್ಲಿ ಗರಿಷ್ಠ 10 ಲಕ್ಷ ರೂಪಾಯಿಗಳವರೆಗೆ ನಗದು ಠೇವಣಿ ಮಾಡಬಹುದು 10 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ಆದಾಯ ತೆರಿಗೆ ಇಲಾಖೆಗೆ ಯಾವುದೇ ಟ್ಯಾಕ್ಸ್ ಪಾವತಿ ಮಾಡಬೇಕಾಗಿಲ್ಲ. ಆದರೆ 10 ಲಕ್ಷಕ್ಕಿಂತ ಹೆಚ್ಚಿಗೆ ಹಣವನ್ನು ಇಟ್ಟರೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಗೆ ಮಾಹಿತಿ ನೀಡುವುದು ಕಡ್ಡಾಯ. ಇದನ್ನೂ ಓದಿ: Motte Bhagya: ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವರು: ಮಕ್ಕಳು ಕುಣಿದುಕೊಂಡು ಶಾಲೆಗೆ ಬರಲು ಇದೊಂದೇ ವಿಷಯ ಸಾಕು!
ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ನೇರವಾದ ತೆರಿಗೆ ಇರುವುದಿಲ್ಲ ಗ್ರಾಹಕರ ಠೇವಣಿಯ ಮೇಲೆ ಬ್ಯಾಂಕ್ ಗಳು ಬಡ್ಡಿಯನ್ನು ನೀಡುತ್ತವೆ. ವರ್ಷಕ್ಕೆ ಹತ್ತು ಸಾವಿರಕ್ಕಿಂತ ಹೆಚ್ಚಿಗೆ ಬಡ್ಡಿ ಪಡೆಯುವುದಾದರೆ ಆ ಬಡ್ಡಿಯ ಮೇಲೆ ಟ್ಯಾಕ್ಸ್ ಪಾವತಿ ಮಾಡಬೇಕು ಹತ್ತು ಸಾವಿರಕ್ಕಿಂತ ಕಡಿಮೆ ಬಡ್ಡಿ ಬರುವುದಾದರೆ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ನೀವು ನಗದು ಠೇವಣಿಯನ್ನು ಉಳಿದಯ ಖಾತೆಯಲ್ಲಿ ಮಾಡಬಹುದು.
Comments are closed.