Kannada Astrology: ಈ ಮರಕ್ಕೆ ದಾರ ಕಟ್ಟಿದರೆ ಯಾವುದೇ ಹಣದ ಕೊರತೆಯೂ ಇರುವುದಿಲ್ಲ: ಇಂದೇ ಈ ಕೆಲಸ ಮಾಡಿ!

Kannada Astrology: ಭೂಮಿಯಲ್ಲಿ ಮರ ಗಿಡ ಇರೋದ್ರಿಂದಾನೇ ನಾವು ಉಸಿರಾಡಿಸ್ತಾ ಇರೋದು ಎನ್ನುವುದು ಸಾರ್ವಕಾಲಿಕ ಸತ್ಯ. ಕೆಲವು ಮರ ಗಿಡಗಳಲ್ಲಿ ಔಷಧ ಗುಣಗಳು ಅತಿಯಾಗಿದ್ದರೆ ಇನ್ನೂ ಕೆಲವು ಮರ ಗಿಡಗಳನ್ನು ನಾವು ದೇವರು ಎಂದೇ ಪೂಜಿಸುತ್ತೇವೆ. ಪೂಜಿಸುವ ಮರಗಳಿಂದ ಸುಖ ಶಾಂತಿ, ಸಂಪತ್ತು ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆಯು ಇದೆ. ಅದರಲ್ಲೂ ಕೆಲವು ಗಿಡಗಳಿಗೆ ನೀವು ನೀರೆದರೆ ಪೂಜೆ ಮಾಡಿದರೆ ಅಥವಾ ದಾರ ಕಟ್ಟಿದರೆ ಅದರಿಂದ ಆಗುವ ಪ್ರಯೋಜನಗಳು ಸಾಕಷ್ಟು. ಅಂತಹ ಯಾವ ಗಿಡಕ್ಕೆ ನೀವು ದಾರ ಕಟ್ಟುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಂದ ದೂರ ಉಳಿಯಬಹುದು ಗೊತ್ತೇ? ಇದನ್ನೂ ಓದಿ: Motte Bhagya: ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವರು: ಮಕ್ಕಳು ಕುಣಿದುಕೊಂಡು ಶಾಲೆಗೆ ಬರಲು ಇದೊಂದೇ ವಿಷಯ ಸಾಕು!

ತುಳಸಿ ಗಿಡ: ತುಳಸಿ ಗಿಡ ವಿಷ್ಣುವಿಗೆ ಪ್ರಿಯವಾದ ಗಿಡವಾಗಿದೆ ಇದಕ್ಕೆ ಪೂಜೆ ಸಲ್ಲಿಸಿದರೆ ತುಳಸಿ ಮಾತೇ ಜೊತೆಗೆ ವಿಷ್ಣು ಕೂಡ ಸಂತೃಪ್ತಿಗೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ನಿಮ್ಮ ಇಷ್ಟಾರ್ಥಗಳು ಸಿದ್ಧಿ ಆಗಬೇಕಾದರೆ, ದಾರವನ್ನು ಕಟ್ಟಬೇಕು ಇದರಿಂದ ಆರ್ಥಿಕ ಸಮಸ್ಯೆಗಳು ಕೂಡ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಅರಳಿ ಮರ: ಇದು ಸಂಪ್ರದಾಯದಲ್ಲಿ ಅರಳಿ ಮರಕ್ಕೆ ಪೂಜೆ ಮಾಡುವ ಪದ್ಧತಿ ಇದೆ ಜೀವನದಲ್ಲಿ ಇರುವ ಅನೇಕ ಕಷ್ಟಗಳನ್ನು ಅರಳಿಮರವನ್ನ ಪೂಜಿಸಿದರೆ ದೂರವಾಗುತ್ತದೆ ಎಂದು ಹೇಳಲಾಗುತ್ತೆ. ಇನ್ನು ಅರಳಿ ಮರಕ್ಕೆ ದಾರವನ್ನು ಕಟ್ಟಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಮಕ್ಕಳಿಲ್ಲದವರಿಗೆ ಮಗು ಆಗುತ್ತೆ ಎನ್ನುವ ನಂಬಿಕೆ ಕೂಡ ಇದೆ.

ಆಲದ ಮರ: ಬಹಳ ದೀರ್ಘಾಯಸ್ಸನ್ನು ಹೊಂದಿರುವ ಆಲದ ಮರಕ್ಕೆ ದಾರವನ್ನು ಕಟ್ಟುವುದರಿಂದ ಗಂಡನ ಆರೋಗ್ಯ ಹಾಗೂ ಆಯಸ್ಸು ಗಟ್ಟಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಮಹಿಳೆಯರು ಮದುವೆಯಾದ ನಂತರ ಗಂಡನ ಶ್ರೇಯಸ್ಸಿಗಾಗಿ ಆಲದ ಮರಕ್ಕೆ ಪೂಜೆ ಮಾಡುವುದು ಹಾಗೂ ದಾರ ಕಟ್ಟುವುದು ಒಳ್ಳೆಯ ಅಭ್ಯಾಸ. ಇದನ್ನೂ ಓದಿ: D-SIB: ಈ ಬ್ಯಾಂಕ್ ಗಳಲ್ಲಿ ಮಾತ್ರ ಎಫ್ ಡಿ ಇಟ್ಟರೆ ಸೇಫ್: ಮೂರು “ಸುರಕ್ಷಿತ” ಬ್ಯಾಂಕ್ ಹೆಸರು ಬಹಿರಂಗಪಡಿಸಿದ ಆರ್ ಬಿ ಐ! ನಿಮ್ಮ ಖಾತೆಯು ಇದಿಯಾ ನೋಡಿಕೊಳ್ಳಿ!

ಬಾಳೆ ಗಿಡ: ಬಾಳೆ ಗಿಡವನ್ನು ಅದೃಷ್ಟ ತಂದು ಕೊಡುವ ಗಿಡ ಎನ್ನಬಹುದು ಗುರುವಾರ ಬಾಳೆ ಗಿಡಕ್ಕೆ ಪೂಜೆ ಮಾಡಿದರೆ ಸಕಲ ಸಮೃದ್ಧಿಯು ಪ್ರಾಪ್ತವಾಗುತ್ತದೆ. ಬಾಳೆ ಗಿಡಕ್ಕೆ ದಾರ ಕಟ್ಟುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಎನ್ನುವ ನಂಬಿಕೆ ಇದೆ.

ಬಿಲ್ವ ಪತ್ರೆ: ಶಿವನಿಗೆ ಅತ್ಯಂತ ಪ್ರಿಯವಾಗಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವುದರ ಜೊತೆಗೆ ಬಿಲ್ವಪತ್ರ ಮರಕೆ ದಾರ ಕಟ್ಟಿದರೆ ಎಲ್ಲಾ ಆರ್ಥಿಕ ಪರಿಸ್ಥಿತಿಗಳು ಕೂಡ ನಿವಾರಣೆ ಆಗುತ್ತವೆ. ಹಾಗಾಗಿ ವೈದಿಕ ಶಾಸ್ತ್ರಗಳ ಪ್ರಕಾರ ಈ ಮರಗಳಿಗೆ ದಾರ ಕಟ್ಟುವ ಅಭ್ಯಾಸ ಅಥವಾ ಆಚರಣೆ ಮಾಡಿದರೆ ಆರ್ಥಿಕವಾಗಿ ಸಬಲರಾಗಬಹುದು ಜೊತೆಗೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಕೂಡ ಇರುತ್ತದೆ ಎನ್ನುವ ನಂಬಿಕೆ ಇದೆ.

Comments are closed.