Farming: ತೆಂಗು ಅಡಿಕೆ ಬಾಳೆ ಬೆಳೆಗೆ, ಯಾವ ಗೊಬ್ಬರವು ಬೇಡ, ಒಂದು ರೂ. ಖರ್ಚೂ ಬೇಡ; ಕೇವಲ ಜೀವಾಮೃತ ಇದ್ರೆ ಸಾಕು: ವರ್ಷಕ್ಕೆ ಲಕ್ಷ ಲಕ್ಷ ಆದಾಯ ಬರುವುದು ಖಚಿತ!

Farming: ಸಾಕಷ್ಟು ರೈತರಿಗೆ ಈಗಲೂ ತಮಗೆ ಉತ್ತಮ ಫಸಲು ಬರುತ್ತಿಲ್ಲ ಎಷ್ಟೋ ವರ್ಷದಿಂದ ಕೃಷಿ ಮಾಡಿಕೊಂಡು ಬಂದಿದ್ದೇವೆ ಆದರೂ ಮರದಲ್ಲಿ ಹೆಚ್ಚಿನ ಫಸಲು ಕಾಣುತ್ತಿಲ್ಲ ಎನ್ನುವ ಬೇಸರ ಇರುತ್ತೆ. ಇದೇ ಕಾರಣಕ್ಕೆ ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನ ಸಾವಯವ ಗೊಬ್ಬರಗಳನ್ನ ಅಷ್ಟೇ ಅಲ್ಲದೆ ಅತಿ ಹೆಚ್ಚು ನೀರನ್ನು ಕೂಡ ಬೆಳಗ್ಗೆ ಕೊಡುತ್ತಾರೆ. ಆದರೆ ನೀವು ನಿಮ್ಮ ಬೆಳೆಯಲ್ಲಿ ಕೆಲವೇ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಅತ್ಯುತ್ತಮವಾದ ಫಸಲು ಕಾಣುವುದಕ್ಕೆ ಸಾಧ್ಯ. ಅದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಅಮೃತದಂತಹ ಜೀವಾಮೃತ ಬಳಸಿ

ಪ್ರತಿ ಎಕರೆಗೆ 200 ಲೀಟರ್ ನಷ್ಟು ಜೀವಾಮೃತ ಬಳಸಿದರೆ ಸಾಕು ಯಾವ ಸಮಸ್ಯೆಯೂ ಇಲ್ಲದೆ ಅತಿ ಹೆಚ್ಚು ಫಸಲನ್ನು ಕಾಣೋದಕ್ಕೆ ಸಾಧ್ಯ. ಖರ್ಚು ಮಾಡಬೇಕಾಗಿಲ್ಲ ಮಾರುಕಟ್ಟೆಗೆ ಹೋಗಿ ಖರೀದಿ ಮಾಡಿಕೊಂಡು ಬರಬೇಕಾಗಿಲ್ಲ ಮನೆಯಲ್ಲಿಯೇ ನೀವು ಈ ಜೀವಾಮೃತವನ್ನು ತಯಾರಿಸಿಕೊಳ್ಳಬಹುದು.

ಜೀವಾಮೃತ ತಯಾರಿಸುವುದು ಹೇಗೆ?

200 ಲೀಟರ್ ನೀರು 10 ಕೆಜಿಯಷ್ಟು ದೇಸಿ ಹಸುವಿನ ಸಗಣಿ, ಅದು ಲೀಟರ್ ನಷ್ಟು ಗೋಮೂತ್ರ, ಎರಡು ಕೆಜಿ ಆರ್ಗನಿಕ್ ಬೆಲ್ಲ ಹಾಗೂ 2 ಕೆ.ಜಿ ಧಾನ್ಯದ ಹಿಟ್ಟು ಜೊತೆಗೆ ಒಂದು ಬೊಗಸೆಯಷ್ಟು ಮಣ್ಣು ಮಿಶ್ರಣ ಮಾಡಿದರೆ ಸಾಕು ಜೀವಾಮೃತ ತಯಾರಾಗುತ್ತೆ.

ಜೀವಾಮೃತ ತಯಾರಿಸುವುದು ಹೇಗೆ

ಜೀವಾಮೃತವನ್ನು ನೆರಳು ಇರುವ ಸ್ಥಳದಲ್ಲಿಯೇ ಮಾಡಬೇಕು. ಮನೆಯ ಬಳಿ ಇರುವ ಯಾವುದಾದರೂ ಗಿಡದ ಬುಡದಲ್ಲಿ ಇದನ್ನ ತಯಾರಿಸಬಹುದು ಎಂದು ತಜ್ಞರು ಕೂಡ ಹೇಳುತ್ತಾರೆ. ಇದಕ್ಕಾಗಿ ಒಂದು ದೊಡ್ಡ ಬ್ಯಾರಲ್ ಅಥವಾ ಟ್ಯಾಂಕ್ ತೆಗೆದುಕೊಳ್ಳಿ. ಅದ್ರಲ್ಲಿ 200 ಲೀಟರ್ ನೀರನ್ನು ಹಾಕಿ. ಅದರಲ್ಲಿ 10 ಕೆಜಿ ಹಸುವಿನ ಸಗಣಿ 10 ಲೀಟರ್ ಗೋಮೂತ್ರ ಬರಿಸಬೇಕು. ನಂತರ ಎರಡು ಕೆಜಿ ಬೆಲ್ಲ ಹಾಗೂ 2 ಕೆ.ಜಿ ಧಾನ್ಯದ ಹಿಟ್ಟು ಜೊತೆಗೆ ತೋಟದಲ್ಲಿ ಇರುವ ಬದುಗಳಿಂದ ಅಥವಾ ಆಲದ ಮರ ಬನ್ನಿ ಗಿಡಗಳ ಬುಡದಿಂದ ಒಂದು ಬೊಗಸೆ ಮಣ್ಣನ್ನು ತಂದು ಅದಕ್ಕೆ ಸೇರಿಸಿ. ಇನ್ನನ್ನು ಚೆನ್ನಾಗಿ ಮಿಶ್ರಣ ಮಾಡಿ ಏಳು ದಿನ ನೆರಳಿನಲ್ಲಿ ಇಡಿ. ಬೆಳಗ್ಗೆ ಹಾಗೂ ಸಂಜೆ ಎರಡೂ ಸಮಯ ಚೆನ್ನಾಗಿ ಮಿಕ್ಸ್ ಮಾಡಬೇಕು.

ಏಳು ದಿನಗಳ ನಂತರ ಇದನ್ನು ನೀರಾವರಿ ಮಾಡುವಾಗ ಬೆಳೆಗೆ ಸಿಂಪಡಿಸುತ್ತಾ (ಭೂಮಿಗೆ) ಬನ್ನಿ. ಒಂದು ಎಕರೆ ಜಮೀನಿಗೆ 200 ಲೀಟರ್ ಜೀವಾಮೃತ ಸಾಕಾಗುತ್ತದೆ. ಜೀವಾಮೃತ ದ್ರಾವಣವನ್ನು ಸೊಸಿ ನೆರವಾಗಿ ಬೆಳೆಗೆ ಹಾಕಬಹುದು. ಅಥವಾ ನೀರಾವರಿ ಮಾಡುವಾಗ ಸೇರಿಸಿ ಹಾಕಿವುದು ಒಳ್ಳೆಯದು.

ಜೀವಾಮೃತದ ಪ್ರಯೋಜನಗಳು;

ಬೆಳೆಗೆ ಯಾವುದೇ ಕೀಟಗಳು, ರೋಗ ರುಜಿನಗಳು ಬಾರದಂತೆ ತಡೆಯುತ್ತದೆ. ಮಣ್ಣಿನಲ್ಲಿ ಸಾವಯವ ಕಾರ್ಬನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನು ಹಸುವಿನ ಮೂತ್ರ ಹಾಗೂ ಸೆಗಣಿ ಲಕ್ಷಾಂತರ ಪ್ರಯೋಜನಕಾರಿ ಸೂಕ್ಷ್ಮಾಣು ಜೀವಿಗಳನ್ನು ಹೊಂದಿದೆ. ಇದರಿಂದಾಗಿ ಫಸಲು ಹೆಚ್ಚುತ್ತದೆ. ಒಂದು ಬೆಳೆಗೆ ಅರ್ಧದಷ್ಟು ಸೂರ್ಯನ ಬೆಳಕು ಹಾಗೂ ಗಾಳಿ ಮತ್ತೆ ಅರ್ಧದಷ್ಟು ಜೀವಾಮೃತ ಸಿಕ್ಕರೆ ಲಕ್ಷ ಲಕ್ಷ ಎಣಿಸುವಷ್ಟು ಫಸಲು ಬರುವುದರಲ್ಲಿ ನೋ ಡೌಟ್!

Comments are closed.