PMJAY: ಮೊಬೈಲ್ ನಲ್ಲಿಯೇ ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು; ಇಲ್ಲಿದೆ ನೋಡಿ ಹಂತ ಹಂತವಾದ ಅರ್ಜಿ ಸಲ್ಲಿಸುವ ಮಾಹಿತಿ!

PMJAY: ನಮ್ಮ ದೇಶದಲ್ಲಿ ಇದೊಂದು ಅತ್ಯುತ್ತಮವಾದ ಯೋಜನೆಯಾಗಿದೆ (Central Government scheme)  ಭಾರತೀಯ ಪ್ರತಿಯೊಬ್ಬ ನಾಗರಿಕ ಕೂಡ ಆರೋಗ್ಯ ರಕ್ಷಣೆಯ (Health Safety) ಭದ್ರತೆಯನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದು. ಕೆಲವರಿಗೆ ಸಣ್ಣ ಪುಟ್ಟ ನೆಗಡಿ ಜ್ವರ ಆದರೆ ಅದರ ಬಿಲ್ ಪಾವತಿ ಮಾಡುವುದೇ ಕಷ್ಟವಾಗುತ್ತದೆ ಅಂತದ್ರಲ್ಲಿ ದೊಡ್ಡ ಕಾಯಿಲೆಗಳು ಬಂದಾಗ ಅಥವಾ ಯಾವುದಾದರೂ ಶಸ್ತ್ರ ಚಿಕಿತ್ಸೆ (Operation)  ಮಾಡಿಸಿಕೊಂಡಾಗ ಆಸ್ಪತ್ರೆಯ ಬಿಲ್ ಪಾವತಿಸುವುದು ಬಹಳ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವದೆ ಆಯುಷ್ಮಾನ್ ಕಾರ್ಡ್. ಕಾರ್ಡ್ ಇದ್ರೆ ಸಾಕು ದೇಶದ ಹಲವು ಆಸ್ಪತ್ರೆಗಳಲ್ಲಿ ಬಹುತೇಕ ಉಚಿತವಾಗಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು. ಇದನ್ನೂ ಓದಿ: Ration card: ರೇಷನ್ ಕಾರ್ಡ್ ಹೊಂದಿರುವವರು ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡದೆ ಇದ್ರೆ ಉಚಿತ ಪಡಿತರ ಕೂಡ ಸಿಗೋದಿಲ್ಲ ಎಚ್ಚರ!

ಏನಿದು ಆಯುಷ್ಮಾನ್ ಕಾರ್ಡ್?

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್, ಸರ್ಕಾರ ಬೆಂಬಲಿತ ಆರೋಗ್ಯ ವಿಮಾ ಯೋಜನೆಯಾಗಿದ್ದು ಯೋಜನೆಯಡಿಯಲ್ಲಿ ಕೋಟ್ಯಂತರ ಮಂದಿ ಆರೋಗ್ಯ ರಕ್ಷಣೆಯನ್ನು ಪಡೆದುಕೊಳ್ಳುತ್ತಾರೆ. ಈ ಕಾರ್ಡ್ ಹೊಂದಿರುವವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಒಂದು ವೇಳೆ ಇಲ್ಲಿ ಆ ಸಂಬಂಧ ಪಟ್ಟ ರೋಗಕ್ಕೆ ಚಿಕಿತ್ಸೆ ಇಲ್ಲದೆ ಇದ್ದರೆ ಬೇರೆ ಆಸ್ಪತ್ರೆಗೆ ರೆಫರ್ ಕೂಡ ಮಾಡಬಹುದು. ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ಸಿಗುತ್ತದೆ. ಹೃದಯ ರೋಗ, ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆ ಮೊದಲಾದವುಗಳು ಸೇರಿದಂತೆ ಸುಮಾರು 900ಕ್ಕೂ ಹೆಚ್ಚು ಚಿಕಿತ್ಸೆಗಳು ಹಾಗೂ 169 ತುರ್ತು ಚಿಕಿತ್ಸೆ ಗಳಿಗೆ ನೀವು ಆಯುಷ್ಮಾನ್ ಕಾರ್ಡ್ ಬಳಸಿಕೊಳ್ಳಬಹುದು.

ಆಯುಷ್ಮಾನ್ ಕಾರ್ಡ್ ಸೌಲಭ್ಯ

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಬಹುದು 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಒಂದು ವರ್ಷಕ್ಕೆ ಲಭ್ಯವಾಗುತ್ತದೆ. ಇಲ್ಲಿ ಶೇ. 30ರಷ್ಟು ಸರ್ಕಾರಿ ಪ್ಯಾಕೇಜ್ ದರದಲ್ಲಿ ಚಿಕಿತ್ಸೆ ಲಭ್ಯವಿರುತ್ತದೆ ಒಂದು ಕುಟುಂಬಕ್ಕೆ ವಾರ್ಷಿಕ ಮಿತಿ 1.50 ಲಕ್ಷ ರೂಪಾಯಿಗಳು. ತಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಹಾಜರುಪಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಇದನ್ನೂ ಓದಿ: Kannada Astrology: ಈ ಮರಕ್ಕೆ ದಾರ ಕಟ್ಟಿದರೆ ಯಾವುದೇ ಹಣದ ಕೊರತೆಯೂ ಇರುವುದಿಲ್ಲ: ಇಂದೇ ಈ ಕೆಲಸ ಮಾಡಿ!

ಮೊಬೈಲ್ ನಲ್ಲಿ ಆಯುಷ್ಮಾನ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯುಷ್ಮಾನ್ ಭಾರತ್ (PMJAY) ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.

ಬಳಿಕ ಆಪ್ ತೆರೆದು ಅಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ.

ಮೆನುವಿನಲ್ಲಿ ಫಲಾನುಭವಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.

ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವುದಿದ್ದರೆ ಹೊಸ ಸದಸ್ಯರನ್ನು ನೋಂದಾಯಿಸಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಓಟಿಪಿ ಕಳುಹಿಸಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.

ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ನೀವು ಆಪ್ ನಲ್ಲಿ ನಮೂದಿಸಬೇಕು.

ಬಳಿಕ ಆಪ್ ನಲ್ಲಿ ಕೇಳಲಾಗುವ ಎಲ್ಲಾ ವಯಕ್ತಿಕ ವಿವರಗಳನ್ನು ಕೂಡ ನಮೂದಿಸಬೇಕು.

ಆಧಾರ್ ಕಾರ್ಡ್ ನ ಎರಡು ಬದಿಯ ಸ್ಪಷ್ಟವಾದ ಫೋಟೋ ತೆಗೆದು ಅದನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ಹೀಗೆ ಮಾಡಿದರೆ ಅಪ್ಲಿಕೇಶನ್ ಪೂರ್ಣಗೊಳ್ಳುತ್ತದೆ. ಮತ್ತೊಮ್ಮೆ ನೀವು ನೀಡಿರುವ ದಾಖಲೆ ಸರಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಂಡು ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಿದ ನಂತರ ನಿಮಗೆ ಉಲ್ಲೇಖ ಸಂಖ್ಯೆಯನ್ನು ಕೊಡಿ ಕೊಡುತ್ತಾರೆ. ಇದನ್ನು ನೀವು ನಿಮ್ಮ ಬಳಿ, ಸೇಫ್ ಆಗಿ ಇಟ್ಟುಕೊಳ್ಳಬೇಕು.

ಮೊಬೈಲ್ ನಲ್ಲಿ ಟ್ರ್ಯಾಕ್ ಅಪ್ಲಿಕೇಶನ್ ಮೂಲಕ ನಿಮ್ಮ ಅರ್ಜಿಯ ಸ್ಥಿತಿ ಕೂಡ ತಿಳಿದುಕೊಳ್ಳಬಹುದು.

Comments are closed.