Shiva Pooja: ಶ್ರಾವಣ ಸೋಮವಾರದ ಈ ದಿನ ಇದೊಂದು ಕೆಲಸ ಮಾಡಿ ಸಾಕು ಶಿವನ ಕೃಪೆಯಿಂದ ನೀವು ಮುಟ್ಟಿದ್ದೆಲ್ಲ ಚಿನ್ನ ಆಗೋದು ಗ್ಯಾರಂಟಿ!

Shiva Pooja: ಇನ್ನು ಸ್ವಲ್ಪ ದಿನಗಳಲ್ಲಿ ಶ್ರಾವಣ ಮಾಸ ಕೂಡ ಮುಗಿಯುತ್ತ ಬರುತ್ತಿದೆ. ಶ್ರಾವಣ ಮಾಸದಲ್ಲಿ ಶಿವನನ್ನು ಅತ್ಯಂತ ಭಕ್ತಿ ಭಾವದಿಂದ ಪೂಜಿಸಬೇಕು ಹೀಗೆ ಮಾಡಿದರೆ ಅದು ಯಾವ ಸಮಸ್ಯೆ ಇದ್ದರೂ ನೀರಿನ ಮೇಲಿನ ಗುಳ್ಳೆಯಂತೆ ಕರಗಿ ಬಿಡುತ್ತದೆ. ಶಿವ ಭಕ್ತಿಯಿಂದ ಬೇಡಿಕೊಂಡರೆ ತನ್ನ ಭಕ್ತಾದಿಗಳಿಗೆ ಕೇಳಿದ್ದೆಲ್ಲವನ್ನು ಕರುಣಿಸುತ್ತಾನೆ ರಾಕ್ಷಸರಿಗೂ ಕೂಡ ಒಳಿತನ್ನು ಮಾಡಿರುವ ಮಹಾದೇವ ನಿಮ್ಮ ಭಕ್ತಿಗೆ ಮೆಚ್ಚಿ ಹೊರ ಕೊಡದೆ ಇರಲು ಹೇಗೆ ತಾನೇ ಸಾಧ್ಯ?

ಸೋಮವಾರದ ದಿನ ಶಿವನ ಆರಾಧನೆ ಮಾಡುವುದು ಅತ್ಯಂತ ಶ್ರೇಯಸ್ಕರ ಎಂದು ಬಹಳ ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ಶ್ರಾವಣ ಸೋಮವಾರದ ಇಂದು ನೀವು ಶಿವನನ್ನು ಅತ್ಯಂತ ಭಕ್ತಿ ಭಾವದಿಂದ ಪೂಜಿಸಿದರೆ ಆರೋಗ್ಯ ಹಣ ಮದುವೆ ವೃತ್ತಿ ಸಾಲಕ್ಕೆ ಮುಕ್ತಿ ಹೀಗೆ ಪ್ರತಿಯೊಂದು ಒಳ್ಳೆಯ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯುತ್ತವೆ.

ಮಂತ್ರ ಪಠಣ: ಶ್ರಾವಣ ಸೋಮವಾರದಿಂದು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮಹಾದೇವನ ಆಶೀರ್ವಾದ ಒಂದು ಇದ್ದರೆ ಸಾಕು. ಸೋಮವಾರದ ದಿನ ನೀವು ಸ್ನಾನ ಮಾಡಿ ಶುದ್ದಿಯಾಗಿ ದೇವರಿಗೆ ಪೂಜೆ ಮಾಡಿದ ನಂತರ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಬಾರಿ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಪಠಿಸಿ. ಹೀಗೆ ಮಾಡಿದರೆ ಶಿವನಿಂದ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತೆ ಎಂದು ನಂಬಿಕೆ ಇದೆ.

ವಸ್ತುಗಳ ದಾನ: ನಾವು ನಮ್ಮ ಕೈಲಾದಷ್ಟು ಬೇರೆಯವರಿಗೆ ದಾನ ನೀಡಿದರೆ ಅದಕ್ಕಿಂತ ಹೆಚ್ಚಿನ ವಸ್ತುಗಳು ನಮಗೆ ಹಿಂತಿರುಗಿ ಬರುತ್ತವೆ ಎಂದು ನಂಬಲಾಗುತ್ತೆ ಹಾಗಾಗಿ ಸೋಮವಾರದ ದಿನ ಹಣ ಬಟ್ಟೆ ಆಹಾರ ಅಥವಾ ಯಾವುದೇ ವಸ್ತುವನ್ನು ನಿರ್ಗತಿಕರಿಗೆ ಅಥವಾ ಅಗತ್ಯ ಇರುವವರಿಗೆ ದಾನ ಮಾಡಬೇಕು ಇದರಿಂದ ತೇವಾಣ ದೇವತೆಗಳು ಕೂಡ ಸಂತೃಪ್ತರಾಗುತ್ತಾರೆ ಎನ್ನುವ ನಂಬಿಕೆ ಇದೆ.

ರುದ್ರಾಕ್ಷ ದಾನ: ಶಿವನ ಪ್ರಿಯವಾದ ರುದ್ರಾಕ್ಷಿ ಹಿಮಾಲಯನ ಸೋಮವಾರದ ದಿನ ಶಿವನ ದೇವಸ್ಥಾನಕ್ಕೆ ದಾನ ಮಾಡಿದರೆ ಒಳ್ಳೆಯದು ಇದರಿಂದ ಜೀವನದಲ್ಲಿ ಪ್ರೀತಿಯ ಬದುಕು ಸುಧಾರಿಸುತ್ತದೆ ಹಣದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ವಿಶೇಷ ಪೂಜೆ: ಮಹಾದೇವನಿಗೆ ವಿಶೇಷವಾದ ಪೂಜೆ ಮಾಡಿದರೆ ಆತನ ಆಶೀರ್ವಾದ ಪಡೆದುಕೊಳ್ಳಲು ಸಾಧ್ಯ ಹಾಗಾಗಿ ಮನೆಯಲ್ಲಿ ಶುದ್ಧೀಕರಿಸಿಕೊಂಡು ನೀವು ಶಿವನ ಪೂಜೆ ಮಾಡಬೇಕು ಅಥವಾ ಸೋಮವಾರದ ದಿನ ದೇವಸ್ಥಾನಕ್ಕೆ ಹೋಗಿ ಹಣ್ಣು, ಹೂವು, ಬಿಲ್ವಪತ್ರೆ, ಹಾಲು ಎಲ್ಲವನ್ನು ಶಿವನಿಗೆ ಅರ್ಪಿಸಬೇಕು ಸಾಧ್ಯವಾದರೆ ರುದ್ರಾಭಿಷೇಕವನ್ನು ಕೂಡ ಮಾಡಿಸಿದರೆ ಅದೃಷ್ಟವೂ ನಿಮ್ಮನ್ನು ಅರಸಿಕೊಂಡು ಬರುತ್ತದೆ.

ಉಪವಾಸ: ಸೋಮವಾರದ ದಿನದಂದು ಶಿವನನ್ನು ಒಲಿಸಿಕೊಳ್ಳಲು ಉಪವಾಸ ಆಚರಿಸುವುದು ಮಂಗಳಕರ ಎಂದು ಹೇಳಲಾಗುತ್ತದೆ. ಉಪವಾಸ ಮಾಡಿ ಭಕ್ತಿ ಭಾವದಿಂದ ಶಿವನನ್ನು ಪೂಜೆ ಮಾಡಿದರೆ ಆತ ನೀನು ಕೇಳಿದ ಸಕಲ ಐಶ್ವರ್ಯಗಳನ್ನು ಕೂಡ ದಯಪಾಲಿಸುತ್ತಾನೆ.

Comments are closed.