Ration card Correction: ಇದೊಂದು ಕೆಲಸ ಮಾಡದೆ ಇದ್ರೆ ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರೋದಿಲ್ಲ: ಆದರೂ ಸರ್ಕಾರ ಕೊಟ್ಟ ಈ ಗುಡ್ ನ್ಯೂಸ್ ಪ್ರಯೋಜನ ಪಡ್ಕೊಳ್ಳಿ!

Ration card Correction: ನಮಗೆಲ್ಲ ಗೊತ್ತಿರುವ ಹಾಗೆ ಸರ್ಕಾರ (Karnataka Govenament)  ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ (Gruhalakshmi) ಯೋಜನೆಯ ಅಡಿಯಲ್ಲಿ ಖಾತೆಗೆ ಸೇರುವ ಹಣದ ಬಗ್ಗೆ ಎಲ್ಲರೂ ಬಹಳ ದೊಡ್ಡ ನಿರೀಕ್ಷೆ ಹೊಂದಿದ್ದಾರೆ. ಜುಲೈ ತಿಂಗಳಿನಲ್ಲಿ ಸಾಕಷ್ಟು ಜನರ ಖಾತೆಗೆ ಅನ್ನ ಭಾಗ್ಯ (anna bhagya scheme) ಯೋಜನೆಯ ಹಣ ಬಂದಿಲ್ಲ ಆದರೆ ಆಗಸ್ಟ್ ತಿಂಗಳಿನಲ್ಲಿ ಬರಬಹುದು ಎನ್ನುವ ನಿರೀಕ್ಷೆ ಹೊಂದಿದ್ದಾರೆ ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ನಿಮ್ಮ ಖಾತೆಗೆ ಬರಬೇಕು ಎಂದರೆ ನೀವು ಈ ಕೆಲಸವನ್ನು ಮಾಡಲೇಬೇಕು.

ರೇಷನ್ ಕಾರ್ಡ್ ತಿದ್ದುಪಡಿ:

ಬಿಪಿಎಲ್ ಪಡಿತರ ಚೀಟಿ (BPL Ration Card)  ಹೊಂದಿರುವ ಪ್ರತಿಯೊಬ್ಬರು ಅಗತ್ಯವಿದ್ದಲ್ಲಿ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕು. ನಿಮ್ಮ ಪಡಿತರ ಚೀಟಿಯಲ್ಲಿ ಇರುವ ಹೆಸರು ಹಾಗೂ ಬ್ಯಾಂಕ ಖಾತೆಯಲ್ಲಿ ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಬೇರೆ ಬೇರೆ ಆಗಿದ್ದರೆ ನಿಮ್ಮ ಖಾತೆಗೆ ಸರ್ಕಾರ ಹಾಕುವ ಯಾವ ಹಣವು ಕೂಡ ಬರುವುದಿಲ್ಲ. ತಿದ್ದುಪಡಿಯನ್ನು ಕೂಡಲೇ ಮಾಡಿಕೊಳ್ಳಿ.

ರೇಷನ್ ಕಾರ್ಡ್ ತಿದ್ದುಪಡಿಗೆ ಇನ್ನಷ್ಟು ಅವಕಾಶ

ಸರ್ಕಾರ ಆದಷ್ಟು ಕೊನೆ ವಾರದಲ್ಲಿ ಮಾತ್ರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿತ್ತು ಆದರೆ ಸರ್ವರ್ ಸಮಸ್ಯೆಯಿಂದಾಗಿ ಎಲ್ಲರ ತಿದ್ದುಪಡಿ ಸರಿಯಾಗಿ ಆಗಿಲ್ಲ ಇದೇ ಕಾರಣಕ್ಕೆ ಸಪ್ಟೆಂಬರ್ ಒಂದರಿಂದ ಸೆಪ್ಟೆಂಬರ್ ಹತ್ತರವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಹತ್ತು ದಿನಗಳ ಕಾಲಾವಧಿಯಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಿಸಬೇಕು

ರೇಷನ್ ಕಾರ್ಡ್ ಅನ್ನು ನ್ಯಾಯಬೆಲೆ ಅಂಗಡಿಯಲ್ಲಿ ಮಾತ್ರ ತಿದ್ದುಪಡಿ ಮಾಡಲು ಮೊದಲು ಅವಕಾಶ ನೀಡಲಾಗಿತ್ತು ಈಗ ಸರ್ಕಾರದ ಸೇವಾ ಕೇಂದ್ರಗಳಾಗಿರುವ ಬೆಂಗಳೂರು ಒನ್, ಬಾಪೂಜಿ ಕೇಂದ್ರ ಕರ್ನಾಟಕ ಒನ್ ನಲ್ಲಿಯೂ ಕೂಡ ಬಯೋಮೆಟ್ರಿಕ್ ಮಾದರಿಯಲ್ಲಿ ರೇಷನ್ ಕಾರ್ಡ್ ನಲ್ಲಿ ಇರುವ ಸಮಸ್ಯೆಗಳಿಗೆ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಇನ್ನು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅವಧಿ ವಿಸ್ತರಿಸಿರುವುದು ಮಾತ್ರವಲ್ಲದೆ ಟೈಮಿಂಗ್ಸ್ ಕೂಡ ಹೆಚ್ಚು ಮಾಡಲಾಗಿದೆ. ಈಗ ಬೆಳಿಗ್ಗೆ 10 ರಿಂದ ಸಂಜೆ 5:00 ವರೆಗೂ ಕೂಡ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ರೇಷನ್ ಕಾರ್ಡ್ ನಲ್ಲಿ ಮಾಡಬಹುದಾದ ತಿದ್ದುಪಡಿಗಳು

  • ಯಜಮಾನ ಅಥವಾ ಯಜಮಾನಿ ಹೆಸರಿನಲ್ಲಿ ಬದಲಾವಣೆ
  • ಹೆಸರಿನ ಅಕ್ಷರ ಅಥವಾ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ಸರಿ ಮಾಡಿಕೊಳ್ಳುವುದು
  • ಮನೆಯಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದುಹಾಕುವುದು
  • ಮನೆಗೆ ಸೊಸೆ ಬಂದಿದ್ದರೆ ಅವರ ಹೆಸರನ್ನು ಸೇರಿಸುವುದು
  • ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರ ಹೆಸರನ್ನು ಸೇರಿಸುವುದು
  • ರೇಷನ್ ಕಾರ್ಡ್ ವಿಳಾಸ ಬದಲಾಯಿಸುವುದು

ಈ ಮೇಲಿನ ತಿದ್ದುಪಡಿಗಳನ್ನು ನೀವು ತಕ್ಷಣವೇ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಹೆಸರು ಹಾಗೂ ಖಾತೆಯ ಹೆಸರು ಒಂದೇ ರೀತಿಯಾಗಿ ಇಲ್ಲದಿದ್ದರೆ ಸೀಡಿಂಗ್ ಆಗದೆ ಇದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಆದ್ದರಿಂದ ಈ ಕೂಡಲೇ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿಯ ಅಗತ್ಯವಿದ್ದರೆ ಮಾಡಿಸಿಕೊಳ್ಳಿ.

Comments are closed.