SBI FD rate: SBI ಹೆಚ್ಚಿಸಿದೆ ಎಫ್ ಡಿ ಮೇಲಿನ ಬಡ್ಡಿ; ಪಡೆಯಿರಿ 10.10% ವರೆಗಿನ ಬಡ್ಡಿ, ಗಳಿಸಿ ಹೆಚ್ಚು ಲಾಭ!

SBI FD rate: ಬಹಳಷ್ಟು ಇಳಿಕೆ ಕಂಡಿದ್ದ ಬ್ಯಾಂಕಿನ ಎಫ್. ಡಿ. ದರಗಳು ಇತ್ತೀಚಿನ ದಿನಗಳಲ್ಲಿ ಮತ್ತೆ ಏರಿಕೆ ಕಂಡಿದೆ.  ನಿಯಮಿತವಾಗಿ ಏರುತ್ತಿರುವ ಬಡ್ಡಿದರಗಳು ಬ್ಯಾಂಕಿನತ್ತ ಮರಳಿ ಇನ್ವೆಸ್ಟ್ ಮೆಂಟ್ ಅನ್ನು ಹೊತ್ತು ತರುತ್ತಿದೆ. ಸಾಮಾನ್ಯ ಜನರ ಸೇವಿಂಗ್ಸ್ ಪ್ಲಾನ್ ನಲ್ಲಿ ಮೊದಲು ಬರುವುದೇ ಎಫ್. ಡಿ. ಮತ್ತು ಆರ್. ಡಿ. ಪ್ಲಾನ್ ಗಳು ಈಗ ಈ ಠೇವಣಿಯ ಮೇಲಿನ ಬಡ್ಡಿಯ ದರಗಳಲ್ಲಿ ಏರಿಕೆ ಆಗಿರುವುದು ಸಂತಸದ ವಿಚಾರ. ಇದನ್ನೂ ಓದಿ: Organ Donation: ಮನುಷ್ಯನ ಸಾವಿನ ನಂತರ ದೀರ್ಘಕಾಲದ ವರೆಗೆ ದೇಹದ ಭಾಗಗಳು ಜೀವಂತವಾಗಿರುತ್ತೆ ಎನ್ನುವುದು ನಿಜವೇ?

ಕಳೆದ ವಾರ ರಿಸರ್ವ್ ಬ್ಯಾಂಕ್ ಮತ್ತೆ ರೆಪೋ ದರವನ್ನು 25  ಅಂಕಗಳಷ್ಟು ಏರಿಕೆ ಮಾಡಿ 6.50 ಗೆ ತಂದಿದೆ. ಇದು ಬ್ಯಾಂಕುಗಳಿಗೆ ಮತ್ತೆ ತಮ್ಮ ಎಫ್. ಡಿ. ದರವನ್ನು ಹೆಚ್ಚಿಸಲು ಸಹಾಯ ಮಾಡಿದೆ. ಸಾರ್ವಜನಿಕ ಕ್ಷೇತ್ರದ ಮಹತ್ವದ ಮತ್ತು ದೊಡ್ಡ ಬ್ಯಾಂಕ್ ಆಗಿರುವ ಎಸ್.ಬಿ.ಐ ತನ್ನ ಬಡ್ಡಿದರಗಳನ್ನು ಹೆಚ್ಚಿಸಿದೆ. ಯಾವ ಎಫ್. ಡಿ. ಗೆ ಎಷ್ಟು ಹೆಚ್ಚಾಗಿದೆ ಮತ್ತು ಎಷ್ಟು ದಿನಗಳ ಅವಧಿಯ ಎಫ್. ಡಿ. ನಿಮಗೆ ಹೆಚ್ಚು ಸಮರ್ಪಕವಾಗಿದೆ ಎಂದು ನಿರ್ಧರಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ. ಸಾಮಾನ್ಯ ನಾಗರೀಕರನನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಈ ಏರಿಕೆ 2 ಕೋಟಿಗಿಂತ ಕಡಿಮೆ ಮೊತ್ತದ ಹೂಡಿಕೆಗಳಿಗಷ್ಟೇ ಜಾರಿ ಆಗಿದೆ.

ಒಂದರಿಂದ ಎರಡು ವರ್ಷದ ಅವಧಿ:

1 ರಿಂದ 2 ವರ್ಷದ ಅವಧಿಯ ಏಫ್. ಡಿ. ಗೆ ಸಾಮಾನ್ಯ ನಾಗರೀಕರಿಗೆ ಇದ್ದ ಹಳೆಯ ಬಡ್ಡಿದರವಾದ 6.75 ಯ ಬದಲು 6.8 ಶೇಕಡಾ ಬಡ್ಡಿ ಸಿಗುತ್ತದೆ. ಹಿರಿಯ ನಾಗರೀಕರಿಗೆ ಈ ಅವಧಿಯ ಬಡ್ಡಿಯ ದರ 7.3 ಶೇಕಡಾ ಆಗಿದೆ. ಮೊದಲೇ ಹೇಳಿದಂತೆ ಈ ದರಗಳು ಎರಡು ಕೋಟಿಯ ಒಳಗಿನ ಠೇವಣಿಗಳಿಗಷ್ಟೇ ಇದೆ. ಇದನ್ನೂ ಓದಿ: Post Office FD Scheme: ಕೆಲವೇ ದಿನಗಳಲ್ಲಿ ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಡುವ ಬೆಸ್ಟ್ ಪೋಸ್ಟ್ ಆಫೀಸ್ ಪ್ಲಾನ್; ಇದರಲ್ಲಿ ಕಡಿಮೆ ಹಣ ಇಟ್ರೂ ಸಿಗತ್ತೆ ಅಧಿಕ ಲಾಭ!

ಎರಡರಿಂದ ಮೂರು ವರ್ಷ:

ಎರಡರಿಂದ ಮೂರು ವರ್ಷದ ಅವಧಿಯ ಎಫ್. ಡಿ ದರಗಳಲ್ಲಿ 25 ಪಾಯಿಂಟ್ ಗಳು ಹೆಚ್ಛಾಗಿ ಈಗಿನ ಹೊಸ ಬಡ್ಡಿ ದರಗಳು 6.75 ಯಿಂದ ಏರಿಕೆಯಾಗಿ 7.00 ಶೇಕಡಾ ಮತ್ತು ಹಿರಿಯ ನಾಗರೀಕರಿಗೆ 7.25 ಯಿಂದ ಏರಿಕೆಯಾಗಿ 7.50 ಆಗಿದೆ.

ಮೂರರಿಂದ ಐದು ವರ್ಷ

ಮೂರು ವರ್ಷಗಳಿಂದ ಆರಂಭವಾಗಿ ಐದು ವರ್ಷಗಳ ಅವಧಿಯ ಪರಿಷ್ಕೃತ ಬಡ್ಡಿಯ ದರಗಳು 6.5  ಮತ್ತು ಹಿರಿಯ ನಾಗರೀಕರಿಗೆ 7.0 ಆಗಿದೆ.

ಐದರಿಂದ ಹತ್ತು ವರ್ಷಗಳು:

ಐದರಿಂದ ಹತ್ತು ವರ್ಷಗಳ ಅವಧಿಯ ಪರಿಷ್ಕೃತ ದರಗಳು 6.5 ಶೇಕಡಾ ಮತ್ತು ಹಿರಿಯ ನಾಗರೀಕರಿಗೆ 7.5 ಆಗಿದೆ.

400 ದಿನಗಳ ಸೇವಿಂಗ್ಸ್ ಸ್ಕೀಮ್:

ಹಿರಿಯ ನಾಗರೀಕರಿಗೆ ಎಸ್.ಬಿ.ಐ ’ವಿ ಕೇರ್’ ಸ್ಕೀಮ್ ನ ಅಡಿಯಲ್ಲಿ 400 ದಿನಗಳ ಸೇವಿಂಗ್ಸ್ ಗೆ 7.1 ಶೇಕಡಾ ಬಡ್ಡಿಯ ದರ ಸಿಗುತ್ತದೆ.

Comments are closed.