Organ Donation: ಮನುಷ್ಯನ ಸಾವಿನ ನಂತರ ದೀರ್ಘಕಾಲದ ವರೆಗೆ ದೇಹದ ಭಾಗಗಳು ಜೀವಂತವಾಗಿರುತ್ತೆ ಎನ್ನುವುದು ನಿಜವೇ?

Organ Donation: ಸಾಕಷ್ಟು ಜನ ಅಕಾಲಿಕ ಮರಣ ಹೊಂದಿದಾಗ ಅಥವಾ ಅವರಿಗೆ ಇಷ್ಟ ಇದ್ದರೆ ಅಂಗಾಂಗಗಳನ್ನು ದಾನ ಮಾಡುತ್ತಾರೆ ಮರಣ ನಂತರ ಅವರ ಅಂಗಾಂಗಗಳನ್ನು ಇತರ ರೋಗಿಗೆ ಕಸಿ ಮಾಡಲು ದಾನ ನೀಡಲಾಗುತ್ತದೆ ಸಾವಿನ ನಂತರ ಮಾನವನ ದೇಹದ ಕೆಲವು ಭಾಗಗಳು ಹೆಚ್ಚು ಸಮಯ ಜೀವಂತವಾಗಿರುವುದಕ್ಕೆ ಹೇಗೆ ಸಾಧ್ಯ?

ಹೌದು, ಒಬ್ಬ ವ್ಯಕ್ತಿ ಸತ್ತು ಅನೇಕ ಗಂಟೆಗಳ ನಂತರವೂ ಕೂಡ ಹಲವು ಅಂಗಗಳು ಜೀವಂತವಾಗಿರುತ್ತದೆ ಹಾಗಾಗಿ ಇನ್ನೊಬ್ಬ ರೋಗಿಗೆ ಕಸಿ ಮಾಡಲು ಆರ್ಗನ್ ಡೊನೇಷನ್ (Organ Donation) ಮಾಡಲಾಗುತ್ತದೆ. ಆದರೆ ವ್ಯಕ್ತಿಯ ಎಲ್ಲಾ ಭಾಗಗಳು ಕಾರ್ಯನಿರ್ವಹಿಸುವುದಿಲ್ಲ ಹಾಗೂ ಎಲ್ಲಾ ಭಾಗಗಳು ಒಂದೇ ಸಲ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಿಲ್ಲ. ಒಮ್ಮೆ ರ ದಿನ ಬಡಿತ ನಿಂತರೆ ನಂತರ ಮೆದುಳಿಗೆ ಆಮ್ಲಜನಕದ ಪೂರೈಕೆ ನಿಂತು ಕೊನೆಗೆ ಎಲ್ಲಾ ಅಂಗಗಳು ನಿಷ್ಕ್ರಿಯಗೊಳ್ಳುತ್ತಾ ಬರುತ್ತವೆ.

ಕಣ್ಣುಗಳು: ಅದೆಷ್ಟೋ ಜನ ಬದುಕಿರುವಾಗಲೇ ಕಣ್ಣುಗಳನ್ನು ಸತ್ತ ನಂತರ ದಾನ ಮಾಡುವುದಾಗಿ ಬರೆದಿಡುತ್ತಾರೆ ಹಾಗಾಗಿ ಕಣ್ಣುಗಳನ್ನ ಹೆಚ್ಚಾಗಿ ದಾನ ಮಾಡಲಾಗುತ್ತದೆ ಒಬ್ಬ ವ್ಯಕ್ತಿ ಸತ್ತ ನಂತರ ಆರು ಗಂಟೆಗಳ ಒಳಗೆ ಕಣ್ಣನ್ನು ತೆಗೆದು ಇನ್ನೊಬ್ಬರಿಗೆ ಅಳವಡಿಸಬಹುದು ಕಣ್ಣನ್ನು ಕಣ್ಣಿನ ಬ್ಯಾಂಕ್ ನಲ್ಲಿ ಇರಿಸಲಾಗುತ್ತೆ. ಅರ್ಹ ರೋಗಿಗೆ ಅದನ್ನು ಕಸಿ ಮಾಡಲಾಗುತ್ತೆ. ಸುಮಾರು ಆರರಿಂದ ಎಂಟು ಗಂಟೆಗಳ ಕಾಲ ಕಣ್ಣು ಕೂಡ ಜೀವಂತವಾಗಿರುತ್ತದೆ.

ಇತರ ಅಂಗಗಳ ಕಸಿ: ಇನ್ನು ಕಣ್ಣು ಮಾತ್ರವಂತೆ ಮೂತ್ರಪಿಂಡ ಹೃದಯ ಯಕೃತ್ತು ಮೊದಲಾದ ಅಂಗಗಳು ಕೂಡ ಸತ್ತ 4 ರಿಂದ 6 ಗಂಟೆಗಳ ವರೆಗೆ ಕಾರ್ಯನಿರ್ವಹಿಸುತ್ತದೆ. ಈ ಸಮಯದ ಒಳಗೆ ಹೃದಯ ಅಥವಾ ಇತರ ಅಂಗಾಂಗಗಳನ್ನು ಇನ್ನೊಂದು ರೋಗಿಗೆ ಕಸಿ ಮಾಡಬೇಕು ಮೂತ್ರಪಿಂಡಗಳು 72 ಗಂಟೆಗಳ ಕಾಲ ಇದ್ದರೆ ಯಕೃತ್ತು ಎಂಟರಿಂದ ಹನ್ನೆರಡು ಗಂಟೆಗಳ ಕಾಲ ಜೀವಂತವಾಗಿ ಇರಬಹುದು.

ದೀರ್ಘಕಾಲದ ವರೆಗೆ ಇರುವ ಅಂಗಗಳು ಇವು: ಏನು ಮಾನವನ ದೇಹದ ಚರ್ಮ ಹಾಗೂ ಮೂಳೆಗಳು ಐದು ವರ್ಷಗಳ ವರೆಗೂ ಕೂಡ ಸರಿಯಾದ ರೀತಿಯಲ್ಲಿ ಇಟ್ಟು ಜೀವಂತವಾಗಿ ಇರಿಸಬಹುದು ಅದೇ ರೀತಿ ಹೃದಯದ ಕವಾಟಗಳನ್ನು 10 ವರ್ಷಗಳವರೆಗೆ ಇರಿಸಬಹುದು. ಹಾಗಾಗಿ ಮನುಷ್ಯ ಸಾವಿನ ನಂತರವೂ ತನ್ನ ಅಂಗಗಳನ್ನು ದಾನ ಮಾಡಿ ಬದುಕಿರುತ್ತಾನೆ. ಅಂಗಾಂಗ ದಾನ ಕೂಡ ಶ್ರೇಷ್ಠ ದಾನಗಳಲ್ಲಿ ಒಂದು ಎನಿಸಿಕೊಂಡಿದೆ. ಇವರಿಗೆ ತಮ್ಮ ಅಂಗಾಂಗಗಳನ್ನು ದಾನ ಮಾಡಿದ ಸಾಕಷ್ಟು ಜನ ಅನಂತವು ಇನ್ನೊಬ್ಬ ರೋಗಿಯ ಕಣ್ಣಿನಲ್ಲಿಯೂ ಹೃದಯದಲ್ಲಿಯೂ ಯಕೃತ್ತಿನಲ್ಲಿಯು ಜೀವಂತವಾಗಿ ಇರುತ್ತಾರೆ ಎನ್ನಬಹುದು.

Comments are closed.