Anna Bhagya Scheme: ಅಗಸ್ಟ್ ತಿಂಗಳ ಅನ್ನಭಾಗ್ಯ ಹಣ ಯಾವಾಗ ಖಾತೆಗೆ ಜಮಾ ಆಗತ್ತೆ; ಈಗಾಗಲೇ ಆಗಿರಬಹುದು ಕೂಡಲೇ ಈ ರೀತಿ ಚೆಕ್ ಮಾಡ್ಕೋಳ್ಳಿ!

Anna Bhagya Scheme: ರಾಜ್ಯ ಸರ್ಕಾರ (Karnataka Government) ಅಕ್ಕಿ ಬದಲು ಕೊಡುವ ಹಣ ಹಲವರ ಖಾತೆಗೆ ಈಗಾಗಲೇ ಜಮಾ ಆಗಿದೆ. ಆದರೆ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನರ ಖಾತೆಗೆ ಜುಲೈ ತಿಂಗಳ ಹಣ ಬಂದಿಲ್ಲ. ಇದಕ್ಕೆ ಕಾರಣವನ್ನೂ ತಿಳಿಸಿರುವ ಸಚಿವರು, ಸಾಕಷ್ಟು ಖಾತೆಗೆ ಬ್ಯಾಂಕ್ ಎಕೌಂಟ್ ಲಿಂಕ್ (Bank Account link)  ಅಗಿರಲಿಲ್ಲ. ಆದರೆ ಈಗ ಅದೆಲ್ಲವನ್ನು ಸರಿಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ಓದಿ: Vastu tips: ನಿಮ್ಮ ಮನೆಯಲ್ಲಿ ಈ ವಸ್ತುಗಳಿದ್ರೆ ಈಗಲೇ ಕಿತ್ತು ಬಿಸಾಡಿ, ಇಲ್ಲಾಂದ್ರೆ ಹಣ ಉಳಿಸುವುದು ಹಾಗಿರಲಿ ಸಾಲದಿಂದ ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ!

ಅಗಸ್ಟ್ ತಿಂಗಳ ಹಣ ಬಿಡುಗಡೆ ಆಗಿದ್ಯಾ?

ಅಗಸ್ಟ್ ತಿಂಗಳ (August month) ಹಣವೂ ಕೂಡ ಈಗಾಗಲೇ ಹಲವು ಜನರ ಖಾತೆಗೆ ಜಮಾ ಆಗಿದೆ. ಆದರೆ ಇನ್ನೂ ಹಲವರ ಖಾತೆಗೆ ಬರಬೇಕಿದೆ. ಸದ್ಯದಲ್ಲಿಯೇ ಅಂದರೆ ಇನ್ನು ಒಂದು ವಾರಗಳಲ್ಲಿ ಪಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ (K.H.Muniyappa) ತಿಳಿಸಿದ್ದಾರೆ.

ಖಾತೆಗೆ ಹಣ ಬಂದಿದ್ಯೋ ಇಲ್ಲವೋ ಚೆಕ್ ಮಾಡುವುದು ಹೇಗೆ?

  • ಅದಕ್ಕೆ ಮೊದಲಿಗೆ DBT ಸ್ಟೇಟಸ್ ಚೆಕ್ ಮಾಡಬೇಕು.
  • ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು.
  • ಆದರೆ ಈಗ ಮೊದಲಿನ ಹಾಗೆ ಡಿಬಿಟಿ ಸ್ಟೇಟಸ್ ಚೆಕ್ ಮಾಡಲು ಸಾಧ್ಯವಿಲ್ಲ.
  • ಹಾಗಾಗಿ ಮೊದಲು https://ahara.kar.nic.in/lpg/ ಈ ಲಿಂಕ್ ಕ್ಲಿಕ್ ಮಾಡಿ.
  • ನಂತರ ನಿಮ್ಮ ಜಿಲ್ಲೆಯನ್ನು ಆಯ್ದುಕೊಂಡು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಒಂದು ಪೇಜ್  ತೆರೆದುಕೊಳ್ಳುತ್ತದೆ. ಅಲ್ಲಿ ಕೊನೆಯಲ್ಲಿ ಇರುವ DBT status ಮೇಲೆ ಕ್ಲಿಕ್ ಮಾಡಿ.
  • ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಆಗ ತಿಂಗಳು, ರೇಷನ್ ಕಾರ್ಡ್ ಸಂಖ್ಯೆ ಹಾಗೂ ಕ್ಯಾಪ್ಚಾ ನಂಬರ್ ನಮೂದಿಸಿದರೆ, ನಿಮ್ಮ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಯಾವ ಹಂತದಲ್ಲಿ ಇದೆ ಎಂಬುದು ನಿಮಗೆ ತಿಳಿಯುತ್ತದೆ.

ಈ ರೀತಿ ನೀವು ನಿಮ್ಮ ಖಾತೆಗೆ ಅಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆ ಬಂದಿದ್ಯೋ ಇಲ್ಲವೋ ತಿಳಿದುಕೊಳ್ಳಬಹುದು. ಇದನ್ನೂ ಓದಿ: Political News: ವಿರೋಧ ಪಕ್ಷದ ‘ಇಂಡಿಯಾ’ ಭಣದ ರಾಜಕೀಯ ತಂತ್ರದಲ್ಲಿ ಗೆಲುವು ಸಾಧಿಸುತ್ತಾ ಮೋದಿ ಪಡೆ: ಸಮೀಕ್ಷೆ ಹೇಳಿದ್ದೇನು?

Comments are closed.