Arecanut:ಭೂತಾನ್ ಅಡಿಕೆ ಆಮದು ಆಯ್ತು, ಈಗ ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್; ಸಂಪೂರ್ಣವಾಗಿ ಬ್ಯಾನ್ ಮಾಡ್ತಾರಾ ಅಡಿಕೆ ಮಾರಾಟ?

Arecanut: ಇತ್ತೀಚಿಗೆ ಖುಷಿಯ ವಿಚಾರ ಅಂದ್ರೆ ರಾಜ್ಯದಲ್ಲಿ ಅಡಿಕೆ ಬೆಳೆಗಾರರ ಸಂಖ್ಯೆ ಹೆಚ್ಚುತ್ತಿದೆ. ಕರಾವಳಿ, ಮಲೆನಾಡು, ಅರೆ ಮಲೆನಾಡು ಭಾಗಗಳಲ್ಲಿ ಅಡಿಕೆ ಕೃಷಿಯನ್ನು ಜನ ಆದಾಯದ ಮೂಲ ಎಂದು ಪರಿಗಣಿಸಿದ್ದಾರೆ ಹಾಗಾಗಿಯೇ ಈ ಭಾಗದಲ್ಲಿ ನೀವು ಅಡಿಕೆ ಕೃಷಿಯನ್ನು ಹೆಚ್ಚಾಗಿ ನೋಡಬಹುದು. ಆದರೆ ಇತ್ತೀಚಿಗೆ ರೈತರಿಗೆ ಕಾಡುತ್ತಿರುವ ಆತಂಕ ಅಂದ್ರೆ ಭೂತಾನನಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಿಷಯ.

ಭೂತಾನ್ ನಿಂದ ಅಡಿಕೆ ಆಮದು
ಸುಮಾರು 17000 ಟನ್ ಗಳಷ್ಟು ಭೂತಾನ್ ನಿಂದ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಇದು ರಾಜ್ಯದ ರೈತರ ಆತಂಕಕ್ಕೆ ಕಾರಣವಾಗಿದೆ ಆದರೆ ನಮ್ಮ ದೇಶದ ಅಗತ್ಯತೆಗೆ ಅನುಗುಣವಾಗಿ ರಾಜ್ಯದಲ್ಲಿ ಅಡಿಕೆ ಕೃಷಿ ಆಗುತ್ತಿಲ್ಲ ಸುಮಾರು ಮೂರು ಲಕ್ಷ ಟನ್ಗಳಷ್ಟು ಅಡಿಕೆ ಕಡಿಮೆ ಬೀಳುವುದರಿಂದ ಭೂತಾನ್ ನಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಏನೋ ನಮ್ಮ ದೇಶದ ಒಟ್ಟು ಬೆಳೆಯ ಕೇವಲ ಎರಡು ಪರ್ಸೆಂಟ್ ನಷ್ಟು ಮಾತ್ರ ಭೂತಾನ್ ನಿಂದ ಆಮದು ಮಾಡಿಕೊಳ್ಳಲಾಗಿದೆ ಹಾಗಾಗಿ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಅಡಿಕೆ ಬೆಳೆ ಹಾಗೂ ಬೆಳೆಯ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.

ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತಾ?
ಈಗ ಜನರಲ್ಲಿ ಕಾಡುತ್ತಿರುವ ಮತ್ತೊಂದು ಸಮಸ್ಯೆ ಅಂದ್ರೆ ಅಡಿಕೆ ತಿಂದರೆ ಕ್ಯಾನ್ಸರ್ (Cancer) ಬರುತ್ತಾ ಎನ್ನುವುದು. ಇದೀಗ ಅರೆಕಾನಟ್ ಟೀ ಕೂಡ ಪರಿಚಯಿಸಲಾಗಿದ್ದು ಇತರ ಹರ್ಬಲ್ ಟೀ ಅಂತೆ ಅಡಿಕೆ ಚಹವನ್ನು ಕೂಡ ಕುಡಿಯಬಹುದಾಗಿದೆ. ಆದರೆ ಇದರಿಂದ ಯಾವುದೇ ಸೈಡ್ ಎಫೆಕ್ಟ್ (Side Effect) ಇಲ್ಲ ದಿನಕ್ಕೆ ಒಂದರಿಂದ ಎರಡು ಬಾರಿ ಈ ಹರ್ಬಲ್ ಟೀ ಕುಡಿಯಬಹುದು ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುವುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಅಡಿಕೆಯಲ್ಲಿ ತಂಬಾಕು ಅಥವಾ ಇತರ ರಾಸಾಯನಿಕ ಬೆರೆಸಿದಾಗ ಮಾತ್ರ ಅದರಿಂದ ಆರೋಗ್ಯಕ್ಕೆ ಅಪಾಯ ಆಗಬಹುದು ಆದರೆ ಸಾವಯವ ಗೊಬ್ಬರ ಹಾಕಿ ಬೆಳೆಸಿದ ಅಡಿಕೆ ಸೇವನೆಯಿಂದ ಯಾವುದೇ ರೀತಿಯ ಅನಾರೋಗ್ಯ ಕೂಡ ಆಗುವುದಿಲ್ಲ. ಹಾಗಾಗಿ ಅಡಿಕೆ ಬೆಳೆ ಯಾವುದೇ ಕಾರಣಕ್ಕೂ ಬ್ಯಾನ್ ಆಗುವುದಿಲ್ಲ. ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಹಾನಿ ಇಲ್ಲ. ಅದರಿಂದ ರೈತರು ಆತಂಕ ಪಟ್ಟು ಕೊಳ್ಳುವ ಅಗತ್ಯವಿಲ್ಲ.

Comments are closed.