Lakshmi blessings: ಈ ಮೂರು ರಾಶಿಯವರು ಇನ್ನರಡು ವರ್ಷ ಇಷ್ಟಪಟ್ಟಂತೆ ಬದುಕುತ್ತಾರೆ; ಹಣದ ಹೊಳೆಯನ್ನೆ ಹರಿಸಲಿದ್ದಾಳೆ ಮಾತಾ ಲಕ್ಷ್ಮಿ ದೇವಿ; ನಿಮ್ಮ ರಾಶಿಯೂ ಇದ್ಯಾ ನೋಡ್ಕೊಳ್ಳಿ!

Lakshmi blessings: ಭಾರತವು ಹಿಂದೂ ರಾಷ್ಟ್ರ. ಇಲ್ಲಿ ಬಹುಸಂಖ್ಯಾತರು ಹಿಂದುಗಳು. ಹಿಂದುಗಳು ಹೆಚ್ಚಾಗಿ ಆಸ್ತಿಕರಾಗಿರುತ್ತಾರೆ. ದೇವರು, ಧರ್ಮ, ಆಚಾರ ವಿಚಾರ, ಜ್ಯೋತಿಷ್ಯಗಳನ್ನು ನಂಬುತ್ತಾರೆ. ಜೀವನದಲ್ಲಿ ಏನೇ ಸಿಹಿ-ಕಹಿ ಘಟನೆಗಳು ನಡೆದರೂ ಅದು ನಮ್ಮ ಪ್ರಾರಬ್ಧ ಕರ್ಮ ಎಂದು ಹೇಳಿ ನಂಬುತ್ತಾರೆ. ಹೀಗಾಗಿಯೇ ಎಷ್ಟೇ ದಾಳಿಗಳು ನಡೆದರೂ ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವಾಗಿಲ್ಲ, ಆಗುವುದಿಲ್ಲ.

ಹಿಂದೂಗಳು ಜ್ಯೋತಿಷ್ಯವನ್ನು ಅದರಲ್ಲೂ ಫಲ ಜ್ಯೋತಿಷ್ಯವನ್ನು ನಂಬುತ್ತಾರೆ. ಏನೆ ಒಳ್ಳೆಯ ಕಾರ್ಯ ಮಾಡಬೇಕಿದ್ದರೂ ಒಳ್ಳೆಯ ಮುಹೂರ್ತ ನೋಡಿ ಶುರು ಮಾಡುತ್ತಾರೆ. ಜ್ಯೋತಿಷ್ಯವು ವೈಜ್ಞಾನಿಕವಾಗಿ ಸಾಭಿತಾಗಿದೆ.

ಕರ್ಮಫಲಧಾತ ಶನಿಯು ಮೂವತ್ತು ವರ್ಷಗಳ ನಂತರ ಕುಂಭರಾಶಿಯಲ್ಲಿ ಹಿಮ್ಮುಕವಾಗಿ ಸಂಚರಿಸುತ್ತಿದ್ದಾನೆ. ಈ ವರ್ಷದ ಜನವರಿಯಲ್ಲಿ ಕುಂಭ ರಾಶಿಯನ್ನು ಪ್ರವೇಶಿಸಿದ್ದು, ಜೂನ್ ನಂತರ ಹಿಮ್ಮುಖವಾಗಿ ಚಲಿಸಲು ಆರಂಭಿಸಿದ್ದಾನೆ. ಮುಂದಿನ ವರ್ಷ ಜೂನ್ ವರೆಗೂ ಈ ರೀತಿಯ ಹಿಮ್ಮುಖ ಚಲನೆ ಇರುತ್ತದೆ.

ಶನಿಯು ನವೆಂಬರ್ 4 ರ ವರೆಗೆ ಇದೇ ಸ್ಥಾನದಲ್ಲಿರುತ್ತಾನೆ. ಆದ್ದರಿಂದ ಶನಿಯ ನೇರ ದೃಷ್ಟಿ ಬೀಳುವ ಹನ್ನೆರಡು ರಾಶಿಯವರಿಗೂ ವಿಶೇಷವಾಗಿರುತ್ತದೆ. ಅದರಲ್ಲಿಯೂ ಮೂರು ರಾಶಿಯವರಿಗೆ ಅನುಗ್ರಹ ಕಾರಕನಾಗಿದ್ದಾನೆ.

ಅದರಲ್ಲಿ ಮೊದಲನೆಯದು ವೃಷಭ ರಾಶಿ; ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವುದರ ಲಾಭವು ವೃಷಭ ರಾಶಿಯವರಿಗೆ ಸಿಗುತ್ತದೆ. ಈ ರಾಶಿಯಲ್ಲಿ ಜನ್ಮಿಸಿದವರು ಉದ್ಯೋಗ-ವ್ಯಾಪಾರ ಶುರು ಮಾಡಲು ಇದು ಪ್ರಶಸ್ತ ಸಮಯವಾಗಿದೆ ಎಂದರೆ ತಪ್ಪಾಗಲಾರದು. ಸರ್ಕಾರಿಯಾಗಲಿ, ಖಾಸಗಿಯಾಗಲಿ ಯಾವುದೇ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಉನ್ನತ ಸ್ಥಾನಮಾನಗಳು ಪ್ರಾಪ್ತಿಯಾಗುತ್ತದೆ. ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಇವರಿಗೆ ದೊಡ್ಡ ಮಟ್ಟದ ಲಾಭವೇ ಆಗಲಿದೆ.

ಎರಡನೇಯದಾಗಿ ಮಿಥುನ ರಾಶಿ; ಈ ರಾಶಿಯಲ್ಲಿ ಜನ್ಮಿಸಿದವರು ಸಹ ಶನಿ ದೇವರ ಹಿಮ್ಮುಖ ಚಲನೆಯಿಂದಾಗಿ ಇನ್ನೆರಡು ವರ್ಷ ಒಳ್ಳೆಯ ಸುಖ ಅನುಭವಿಸುತ್ತಾರೆ. ಇವರು ಮಾಡುವಂತಹ ಎಲ್ಲ ಕೆಲಸ ಕಾರ್ಯಗಳಲ್ಲೂ ಯಶಸ್ಸನ್ನು ಸಾಧಿಸುತ್ತಾರೆ. ಇವರಿಗೆ ಅಚ್ಚರಿ ಆಗುವಂತೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅಲ್ಲದೆ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸಗಳು ಸುಲಭವಾಗಿ ಸಿಗಲಿದೆ. ಅಲ್ಲದೆ ಕೆಲಸ ಬದಲಾವಣೆ ಮಾಡುವವರಿಗೂ ಇದು ಒಳ್ಳೆಯ ಸಮಯವಾಗಿದೆ.

ಮೂರನೆಯದಾಗಿ ತುಲಾ ರಾಶಿ; ಈ ರಾಶಿಯಲ್ಲಿ ಹುಟ್ಟಿದವರಿಗೂ ಸಹ ಶನಿಶ್ಚರನು ಲಾಭಕಾರಕನಾಗಿದ್ದಾನೆ. ಈ ರಾಶಿಯವರು ಯಾವುದೇ ಕ್ಷೇತ್ರದಲ್ಲಿ ಕೈ ಹಾಕಿದರೂ ಲಾಭ ಗಳಿಸುತ್ತಾರೆ. ಹಲವಾರು ವರ್ಷಗಳಿಂದ ಭಡ್ತಿ ಸಿಗದೆ ಬೇಸರಿಸುತ್ತ ಇರುವುವರಿಗೆ ಈ ಸಮಯದಲ್ಲಿ ಭಡ್ತಿ ಸಿಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

Comments are closed.