Entertainment: ಇಂದಿನ ಟ್ರೆಂಡ್ ನಾನು ನಂದಿನಿ. ಹಾಡಿಗೆ ಮೋಹಕ ತಾರೆ ಲಿಪ್ ಸಿಂಕ್; ನೀವೇ ಬೇಬಿ ಡಾಲ್ ಎಂದ ಅಭಿಮಾನಿಗಳು!

Entertainment: ಈಗೇನಿದ್ದರೂ ಸಾಮಾಜಿಕ ಜಾಲತಾಣಗಳ ಯುಗವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಯಾವುದೇ ವಿಚಾರವಾಗಿ ಆದರೂ ಜನರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಮನರಂಜನೆ ನೀಡುವ ಕಲಾವಿದರಿಗೇನು ಕೊರತೆ ಇಲ್ಲ. ಕೆಲವರು ಕೆಲವೊಂದು ವಿಚಾರಗಳಿಂದಾಗಿ ರಾತ್ರಿ ಬೆಳಗಾಗುವದರ ಒಳಗಾಗಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಬಿಡುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ನಾನು ನಂದಿನಿ.. . ಬೆಂಗಳೂರಿಗೆ ಬಂದಿನಿ.. ಹಾಡು ಧೂಳೆಬ್ಬಿಸಿದೆ. ಈ ಹಾಡಿಗೆ ಕನ್ನಡದ ಮೋಹಕ ತಾರೆ ರಮ್ಯ ಅವರು ರೀಲ್ಸ್ ಮಾಡಿದ್ದಾರೆ ! ಈ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ನಾನು ನಂದಿನಿ ಬೆಂಗಳೂರಿಗೆ ಬಂದಿನಿ

ಪಿಜಿಯಲ್ಲಿ ಇದ್ದೀನಿ ಐಟಿ ಕೆಲಸ ಮಾಡ್ತೀನಿ

ಊಟ ಸರಿಯಿಲ್ಲ ಆದ್ರೂನೂ ತಿಂತಿನಿ

ಬಂದಿದ್ದ ದುಡ್ಡೆಲ್ಲ ಮನೆಗೆ ಕಳೆಸ್ತೀನಿ

ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ

ಒ ಓಹ್ ಬೇಡ..

ಬಾರೆ ನಂದಿನಿ ಪೇಡಾ ತಿನ್ಸ್ತೀನಿ

ಓ ಓಹ್ ಬೇಡ..

ಬಾರೆ ನಂದಿನಿ ಪಿಚ್ಚರ್ ತೋರಿಸ್ತೀನಿ..

ಬೇಡ ಬೇಡ

ನೋಡಮ್ಮ ನೀನು ಇಂಗ್ಲೀಷ್ ನೀನು ಕಲಿಬೇಕು

ಇಲ್ಲಾ ಅಂದ್ರೆ ಐಟಿಯಲ್ಲಿ ಕಷ್ಟವಾಗುತ್ತೆ ಸರ್

ಕನ್ನಡ ಮೀಡಿಯಂನಲ್ಲಿ ಓದಿದ್ದೆ..ಅದ್ಕೆ ನನ್ನ ಇಂಗ್ಲಿಷ್ ಅಷ್ಟಕ್ಕಷ್ಟೆ

ಹೀಗೆ ಹಾಡು ಸಾಗುತ್ತದೆ.

ಈ ಹಾಡಿನಲ್ಲಿ ಹಳ್ಳಿಯಿಂದ ಕನ್ನಡ ಮಾಧ್ಯಮದಲ್ಲಿ ಕಲಿತು ಬರುವ ಹೆಣ್ಣು ಮಕ್ಕಳ ಪರಿಸ್ಥಿತಿಯ ಚಿತ್ರಣವನ್ನು ತೆರೆದಿಡಲಾಗಿದೆ. ಈ ಹಾಡನ್ನು ಬರೆದವರು ವಿಕಿಪೀಡಿಯಾ ಖ್ಯಾತಿಯ ವಿಕ್ಕಿ ಅವರು,. ಅವರೇ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಈ ಹಾಡು ಸದ್ಯ ರೀಲ್ಸ್ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ಈ ಹಾಡಿಗೆ ಸೆಲೆಬ್ರಿಟಿಗಳು, ಬಡವರು, ಶ್ರೀಮಂತರು ಎನ್ನುವ ಬೇಧವಿಲ್ಲದೆ ಎಲ್ಲರೂ ರೀಲ್ಸ್ ಮಾಡುತ್ತಿದ್ದಾರೆ.

ಆದರೆ ಈಗ ನಟಿ ರಮ್ಯ ಅವರ ಅಭಿಮಾನಿಗಳು ಸಹ ರಮ್ಯ ಅವರು ಬೇರೆ ಹಾಡಿಗೆ ಮಾಡಿದ ರೀಲ್ಸ್ನನ್ನು ಈ ಹಾಡಿಗೆ ಅಳವಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋದಲ್ಲಿ ರಮ್ಯ ಅವರು ನಾನು ನಂದಿನಿ ಹಾಡಿಗೆ ಲಿಪ್ ಸಿಂಕ್ ಮಾಡಿದಂತೆ ತೋರಿಸಲಾಗಿದೆ. ಯಾವುದೋ ಬೇರೆ ಹಾಡಿಗೆ ರಮ್ಯ ಅವರು ರೀಲ್ಸ್ ಮಾಡಿದ್ದಕ್ಕೆ ನಾನು ನಂದಿನಿ.. ಹಾಡನ್ನು ಹಿನ್ನೆಲೆಯಲ್ಲಿ ಹಾಕಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ರಮ್ಯ ಫ್ಯಾನ್ಸ್ ಪೇಜ್ನಲ್ಲಿ ಈ ವೀಡಿಯೋ ಹಂಚಿಕೊಳ್ಳಲಾಗಿದೆ. ಈ ವೀಡಿಯೋಗೆ ರಮ್ಯ ಅವರ ಅಭಿಮಾನಿಗಳು ತರಹೇವಾರಿಯಾಗಿ ಕಮೀಂಟ್ ಮಾಡುತ್ತಿದ್ದಾರೆ.

Comments are closed.