Home Loan: ಸಹಕಾರಿ ಸಂಘಗಳಲ್ಲಿ ಸಾಲ ಮಾಡಿದವರಿಗೆ ಬಿಗ್ ನ್ಯೂಸ್; ಬ್ಯಾಂಕ್ ಬಿಡುಗಡೆ ಮಾಡಿದ ವರದಿಯಲ್ಲೇನಿದೆ?  

Home Loan: ಮನೆ ಕಟ್ಟುವ ಸಲುವಾಗಿ, ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ, ಕೃಷಿ ಅಭಿವೃದ್ಧಿಗಾಗಿ ಹೀಗೆ ನಾನಾ ಕಾರಣಕ್ಕಾಗಿ ಸಾಲ ಮಾಡುವ ಸ್ಥಿತಿ ಬಂದೇ ಬರುತ್ತದೆ. ಹಾಗಾಗಿ ಹೆಚ್ಚಿನ ಜನರು ಸಾಲ ಮಾಡಿರುತ್ತಾರೆ. ಸಾಲ ನೀಡುವ ಸಲುವಾಗಿಯೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು, ಖಾಸಗಿ ಬ್ಯಾಂಕ್ಗಳು, ಅನೇಕ ಸಹಕಾರಿ ಸಂಘಗಳು ಇವೆ. ಹೀಗೆ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದರಿಂದ ಬ್ಯಾಂಕ್ಗಳು ಸಹ ಅಭಿವೃದ್ಧಿ ಹೊಂದುತ್ತವೆ. ಆದರೆ ಎಷ್ಟೋ ಜನರು ಪಡೆದ ಸಾಲವನ್ನು ವಾಪಸ್ ಮಾಡುವುದೇ ಇಲ್ಲ. ಅವುಗಳನ್ನು ಅನುತ್ಪಾದಕ ನಷ್ಟ ಎಂದು ಘೋಷಣೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಬರೋಬ್ಬರಿ 2888 ಜನರು ಸಾಲ ಪಡೆದು ತುಂಬಲಾರದೆ ತಲೆ ಮರೆಸಿಕೊಂಡ ಘಟನೆ ನಡೆದಿದೆ. ಹಾಗಂತ ವರದಿಯೇ ಹೇಳುತ್ತಿದೆ. ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮಿ ಯೋಜನೆ APL ಕಾರ್ಡ್ ಇರೊರಿಗೂ ಸಿಗುತ್ತಾ? 60 ವರ್ಷ ದಾಟಿದ ಗೃಹಿಣಿಯರಿಗೂ 2,000ರೂ. ಬರುತ್ತಾ? ಸರ್ಕಾರದ ಬಿಗ್ ಅಪ್ಡೆಟ್!

ಬಡಮಧ್ಯಮ ವರ್ಗದವರು, ಮಧ್ಯಮ ವರ್ಗದವರು ಸಾಲ ಪಡೆದರೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಾರೆ. ಇನ್ನು ಹಲವರು ಸಾಲ ತೀರಿಸುವ ದಾರಿ ತೋಚದೆ ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಸಾಕಷ್ಟಿವೆ. ಆದರೆ ಇನ್ನು ಕೆಲವೊಂದಿಷ್ಟು ಜನರು ನಕಲಿ ದಾಖಲೆ ಸೃಷ್ಟಿಸಿ ಕೋಟಿಗಟ್ಟಲೆ ಸಾಲ ಪಡೆದು ಪರಾರಿಯಾಗಿದ್ದಾರೆ.

ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್ ಹಾಗೂ ವಿವಿಧ ಸಹಕಾರಿ ಬ್ಯಾಂಕ್ಗಳಲ್ಲಿ ಬರೋಬ್ಬರಿ 1404  ಕೋಟಿ ರೂ. ಸಾಲ ಮಾಡಿದ 2888 ಜನರು ನಾಪತ್ತೆ ಆಗಿದ್ದಾರೆ. ಹಾಗಾಗಿ ಆ ಹಣವನ್ನು ಅನುತ್ಪಾದಕ ನಷ್ಟವೆಂದು ಬ್ಯಾಂಕ್ಗಳು ಘೋಷಣೆ ಮಾಡಿವೆ ಎಂದು ವರದಿಯೊಂದು ತಿಳಿಸಿದೆ.

ಹೀಗೆ ಸಾಲ ಪಡೆದು ವಾಪಸ್ ಪಾವತಿ ಮಾಡದಿರುವವ ಪೈಕಿ ಬೆಂಗಳೂರಿನ ನೆಟ್ಕಲ್ಲಪ್ಪ ವೃತ್ತದಲ್ಲಿರುವ ಸಹಕಾರಿ ಬ್ಯಾಂಕಿನ ಗ್ರಾಹಕರದು ಸಿಂಹಪಾಲಾಗಿದೆ. ಹೀಗಾಗಿ ಈ ಬ್ಯಾಂಕ್ ಎವರ್ ಗ್ರೀನ್ ಕ್ರೆಡಿಟ್ ಎಂದು ಹಾಗೂ 14೦೦ ಕೋಟಿ ರೂ. ಅನುತ್ಪಾದಕ ನಷ್ಟ ಎಂದು ಘೋಷಣೆ ಮಾಡಿದೆ. ಇದನ್ನೂ ಓದಿ: Birth Certificate: ಆನ್ಲೈನ್ ಮೂಲಕ ಕೇವಲ ಒಂದು ನಿಮಿಷದಲ್ಲಿ ಪಡೆಯಿರಿ ಜನನ ಪ್ರಮಾಣ ಪತ್ರ; ಈ ದಾಖಲೆ ಇಲ್ಲದಿದ್ದರೆ ಯಾವ ಕೆಲಸವೂ ಆಗಲ್ಲ, ನೆನಪಿರಲಿ!  

ರಾಜ್ಯದ ಇತರೆ ಭಾಗಗಳಲ್ಲಿಯೂ ಇದೇ ರೀತಿ ನಡೆದಿದೆ. ಕಳೆದ 25 -3೦ ವರ್ಷಗಳ ಹಿಂದೆ ಸಾಲ ಪಡೆದವರು ಇದುವರೆಗೂ ತೀರಿಸಿಲ್ಲ. ಹಾಗಾಗಿ ಅವರ ಅಸಲಿಗಿಂತ ಬಡ್ಡಿ ಹಣವೇ ಜಾಸ್ತಿಯಾಗಿದೆ. ಇದರಲ್ಲಿ ಕೆಲವರು ನಕಲಿ ದಾಖಲೆ ಒದಗಿಸಿ ಸಾಲ ಪಡೆದಿದ್ದರೆ ಇನ್ನು ಕೆಲವರು ಸಾಲ ಪಡೆದ ನಂತರ ಪರಾರಿಯಾಗಿದ್ದಾರೆ.

ಬೆಂಗಳೂರಿನಲ್ಲಿ 1485  ಜನರಿಂದ 1406 ಕೋಟಿ ರೂ., ಮೈಸೂರಿನಲ್ಲಿ 132  ಜನರಿಂದ 57  ಲಕ್ಷ ರೂ., ಬೆಳಗಾವಿಯಲ್ಲಿ 15 ಜನರಿಂದ 41  ಲಕ್ಷ ರೂ. ಹೀಗೆ ಒಟ್ಟು 2632 ಜನರು ಸಾಲ ಮರುಪಾವತಿ ಮಾಡದೆ ನಾಪತ್ತೆ ಆಗಿರುವ ಶಾಕಿಂಗ್ ವಿಚಾರ ಇದೀಗ ಬಯಲಾಗಿದೆ.

Comments are closed.