Electrical Vehicle: ಕೇವಲ 1419 ರೂ.ಗೆ ಮನೆಗೆ ತನ್ನಿ ಇ-ಬೈಕ್; ಇದನ್ನು ಓಡಿಸಲು ಲೈಸನ್ಸ, ಬೇಡ ರಿಜಿಸ್ಟ್ರೇಶನ್ ಕೂಡ ಬೇಕಿಲ್ಲ, ಖರೀದಿಗೆ ಮುಗಿ ಬಿದ್ದ ಜನ!

Electrical Vehicle: ಈಗ ಜನರು ಪೆಟ್ರೋಲ್ ಬೈಕ್ಗಳನ್ನು ಬಿಟ್ಟು ಇ-ಬೈಕ್ಗಳತ್ತ ನಿಧಾನವಾಗಿ ಹೊರಳುತ್ತಿದ್ದಾರೆ. ಇದಕ್ಕಾಗಿಯೇ ಇ-ಬೈಕ್ಗಳ ಮಾರಾಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ನೀವು ಪೆಟ್ರೋಲ್ಗೆ ನೀಡುವ ಹಣವನ್ನು ಉಳಿತಾಯ ಮಾಡಬಹುದು. ಅಲ್ಲದೆ ಹೊಗೆ ರಹಿತವಾಗಿರುವುದರಿಂದ ಇದು ಪರಿಸರ ಸ್ನೇಹಿಯು ಆಗಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರವು ಸಹ ಇ-ಬೈಕ್ ತಯಾರಿಕೆ ಹಾಗೂ ಕೊಂಡುಕೊಳ್ಳಲು ಪ್ರೋತ್ಸಾಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಡಿಸೈಲ್ ವಾಹನಗಳ ಸಂಖ್ಯೆ ಗಣನೀಯವಾಗಿ ತಗ್ಗಲಿದೆ ಎಂದು ಕೇಂದ್ರ ಸರ್ಕಾರವು ವಿಶ್ವಾಸ ವ್ಯಕ್ತಪಡಿಸಿದೆ. ಈಗ ಒಡಿಸ್ಸೆ ಇಲೆಕ್ಟ್ರಿಕ್ ವೆಹಿಕಲ್ (Odysse Electric Scooter)  ಕಂಪನಿಯು ಹೊಸದಾದ ಕಡಿಮೆ ವೇಗದ ಇ2ಗೋ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಒಡಿಸ್ಸೆ ಇ2 ಗೋ ವಾಹನವು ಬಹಳ ಹಗುರವಾಗಿದ್ದು, ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರೂ ಬೇಕಾದರೂ ಓಡಿಸಬಹುದು. ಇದಕ್ಕೆ ಯಾವುದೇ ಪರವಾನಿಗೆ ಬೇಕಾಗಿಲ್ಲ. ಈ ಒಡಿಸ್ಸೆ ಇಲೆಕ್ಟ್ರಿಕಲ್ ವೆಹಿಕಲ್ ಕಂಪನಿಯು ಮಹಿಳೆಯರು, ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ ಇ2ಗೋ ಬೈಕ್ ಅಭಿವೃದ್ಧಿಪಡಿಸಿದೆ. ಇದನ್ನು ಪ್ರತಿಯೊಬ್ಬರು ನೋಂದಣಿ ಹಾಗೂ ಪರವಾನಿಗೆ ಇಲ್ಲದೆ ಓಡಿಸಲು ಸಾಧ್ಯ.

ಈ ಬೈಕ್ನ ಬೆಲೆ ಹಾಗೂ ಇಎಂಐ ಯೋಜನೆಗಳು:

ಒಡಿಸ್ಸೆ ಇ2ಗೋ ವಾಹನವು ಎರಡು ರೂಪಾಂತರದಲ್ಲಿ ನಿಮಗೆ ಸಿಗಲಿದೆ. ಇದರಲ್ಲಿ ನೀವು ವಿಭಿನ್ನ ಬ್ಯಾಟರಿಗಳನ್ನು ಪಡೆಯಬಹುದು.ಮೊದಲೆನಯದು ಎಲ್ ಎಸಿಡ್ ಬ್ಯಾಟರಿ, ಇನ್ನೊಂದು ಲಿಥಿಯಂ ಇಯಾನ್. ಅವುಗಳ ಬೆಲೆ 59,750 ರೂ. ರಿಂದ ಪ್ರಾರಂಭವಾಗುತ್ತದೆ. 71,1೦೦ರೂ. ಎಕ್ಸ್ ಶೋರೂಂ ಬೆಲೆಗೆ ನಿಮಗೆ ದೊರೆಯುತ್ತದೆ. ಇದು ಇ-ಬೈಕ್ಗೆ ಒಂದು ಒಳ್ಳೆಯ ಬೆಲೆ ಎಂದೇ ನಾವು ಹೇಳಬಹುದು. ಇಷ್ಟು ಕಡಿಮೆ ಬೆಲೆಗೆ ಯಾವುದೇ ಇ-ಬೈಕ್ ಇದುವರೆಗೆ ಮಾರುಕಟ್ಟೆಗೆ ಬಂದಿಲ್ಲ. ಕೇವಲ 2987 ರೂ. ಡೌನ್ ಪೇಮೆಂಟ್  ಮಾಡುವ ಮೂಲಕ ನೀವು ಇಎಂಐನಲ್ಲಿ ಬೈಕ್ ಖರೀದಿಸಬಹುದು. ಮುಂದಿನ ಐದು ವರ್ಷಗಳ ವರೆಗೆ ಪ್ರತಿ ತಿಂಗಳು 1419 ರೂ. ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಬಳಿ ಹಣ ಇದ್ದಲ್ಲಿ ಹೆಚ್ಚಿನ ಇಎಂಐ ಪಾವತಿ ಮಾಡುವ ಮೂಲಕವು ಖರೀದಿಸಬಹುದಾಗಿದೆ.

ಒಡೆಸ್ಸಿ ಇ2ಗೋ ಬೈಕ್ ವಿಶೇಷತೆಗಳು:

ಒಡೆಸ್ಸಿ ಇ2ಗೋ ಬೈಕ್ 25೦ ವ್ಯಾಟ್ 6೦ ವೋಲ್ಟ್ ಬಿಎಲ್ಡಿಸಿ ಮೋಟಾರ್ ಎಲೆಕ್ಟ್ರಿಕ್ನೊಂದಿಗೆ ಬರುತ್ತದೆ. ಇದು ಜಲನಿರೋಧಕವಾಗಿರುತ್ತದೆ. ಇದು ಎರಡು ತರಹದ ಬ್ಯಾಟರಿ ಹೊಂದಿರುತ್ತದೆ. ಮೊದಲೆನೆಯದು 1.26 ಕೆಡಬ್ಲೂಎಚ್ ಲಿಥೀಯಂ ಇಯಾನ್ ಬ್ಯಾಟರಿ, ಇನ್ನೊಂದು 28 ಎಂಪಿಯರ್ ಹವರ್ ಲಿಡ್ ಎಸಿಡ್ ಬ್ಯಾಟರಿ. ಇ ಎರಡು ಬ್ಯಾಟರಿಯನ್ನು ಕಳವು ಮಾಡಲು ಸಾಧ್ಯವಿಲ್ಲ.ಈ ಬೈಕ್ನ್ನು ನೀವು ಗಂಟೆಗೆ 25 ಕೀಮಿ ವರೆಗೆ ಓಡಿಸಬಹುದು. ಒಮ್ಮೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ 6೦ ಕಿಮೀ ಓಡಿಸಬಹುದು. ಈ ಬೈಕ್ ಒಮ್ಮೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

Comments are closed.