Tirupati: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಕನ್ನಡಿಗರಿಗೆ ಖುಷಿಯ ಸುದ್ದಿ; ಇನ್ಮುಂದೆ ಈ ಸಮಸ್ಯೆ ಇರೋದೆ ಇಲ್ಲ! ಇದು ಕನ್ನಡಿಗರಿಗೆ ಮಾತ್ರ!

Tirupati: ಪಕ್ಕದ ಆಂಧ್ರಪ್ರದೇಶದಲ್ಲಿರುವ ಜಗತ್ ವಿಖ್ಯಾತ ತಿರುಪತಿ ತಿರುಮಲನ ದರ್ಶನಕ್ಕೆ ಕರ್ನಾಟಕದಿಂದ ಪ್ರತಿದಿನ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಈ ಕಾರಣಕ್ಕೆ ಕರ್ನಾಟಕದ ಭಕ್ತರಿಗೆ ವಿಶೇಷವಾಗಿ ರಾಜ್ಯದ ಮುಜರಾಯಿ ಇಲಾಖೆ ವಿಶೇಷ ಸುದ್ದಿ ಒಂದನ್ನು ಹೊರಡಿಸಿದೆ. ಕರ್ನಾಟಕದ ಯಾವುದೇ ಮೂಲೆಯಲ್ಲಿ ಇರುವವರಾಗಿದ್ದರು ತಿರುಪತಿ ತಿರುಮಲ ದರ್ಶನ ಪಡೆಯಬೇಕು ಅಂತ ಅಂದುಕೊಂಡಿದ್ದರೆ ಈ ಸುದ್ದಿ ನಿಜಕ್ಕೂ ಖುಷಿ ತರಬಹುದು.

ಕನಕ ಭವನ ನಿರ್ಮಾಣ

ತಿರುಪತಿಗೆ ತೆರಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಹೆಚ್ಚಿನ ಭಕ್ತಾದಿಗಳು ಬಂದರೆ ಉಳಿದುಕೊಳ್ಳುವುದಕ್ಕೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆ ಬಗ್ಗೆ ಗಮನಹರಿಸಿರುವ ಕರ್ನಾಟಕ ಸರ್ಕಾರ ತಿರುಪತಿ ರಾಜ್ಯದ ಭಕ್ತರಿಗಾಗಿ ನೂರಾರು ಕೋಟಿ ವೆಚ್ಚದಲ್ಲಿ ಅತಿಥಿ ಗ್ರಹ ನಿರ್ಮಾಣ ಮಾಡಿದ್ದು, ಕನಕ ಭವನ ಎಂದು ಹೆಸರಿಸಲಾಗಿದೆ.

ಕನಕ ಭವನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದು ಭಕ್ತಾದಿಗಳಿಗೆ ರಿಯಾಯಿತಿ ದರದಲ್ಲಿ ಅತಿಥಿ ಗ್ರಹದಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತೆ. ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು ಕನಕ ಭವನ ನಿರ್ಮಾಣದ ಶೇಕಡ 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಸಂತಸದ ವಿಚಾರ ಹಂಚಿಕೊಂಡಿದ್ದಾರೆ.

2024ರ ವೇಳೆಗೆ ಕನಕ ಭವನ ವಿಶೇಷವಾಗಿ ಕನ್ನಡ ಭಕ್ತಾದಿಗಳಿಗೆ ಲಭ್ಯವಾಗಲಿದೆ. ಕನಕ ಭವನದ ಮಾದರಿಯಲ್ಲಿ ಶ್ರೀಶೈಲಂ ಹಾಗೂ ಅಯೋಧ್ಯೆಯಲ್ಲಿ ರಾಜ್ಯದ ಭಕ್ತಾದಿಗಳಿಗಾಗಿ ಅತಿಥಿ ಗ್ರಹ ನಿರ್ಮಾಣ ಮಾಡಲು ಸರ್ಕಾರ ಯೋಚಿಸುತ್ತಿದೆ. ಇದಕ್ಕಾಗಿ ಆಂಧ್ರಪ್ರದೇಶ ಹಾಗೂ ಉತ್ತರ ಪ್ರದೇಶದ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಕೇಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕನ್ನಡನಾಡಿನಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳು ಹೋದ್ರೆ ಕನಕ ಭವನದಲ್ಲಿ ಅತಿ ಕಡಿಮೆ ಬೆಲೆಗೆ ಉಳಿದುಕೊಂಡು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಕೊಂಡು ಬರಲು ಸಾಧ್ಯವಿದೆ.

Comments are closed.